Advertisement

Chincholi: ನೇಣು ಬಿಗಿದು ತಾಯಿ-ಮಗಳು ಆತ್ಮಹತ್ಯೆ

08:47 AM Feb 14, 2024 | Team Udayavani |

ಚಿಂಚೋಳಿ: ತಾಯಿ ಹಾಗೂ ಮಗಳು ನೇಣು‌ ಹಾಕಿಕೊಂಡು ಸಾವನಪ್ಪಿದ‌ ಘಟನೆ ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.

Advertisement

ತಾಯಿ ಶಿವಲೀಲಾ ಆನಂದ(24) ಹಾಗೂ ಮಗಳು ವರ್ಷಿತಾ(2) ಮೃತಪಟ್ಟವರು.

ಮರಪಳ್ಳಿ ಗ್ರಾಮದಲ್ಲಿ ಫೆ. 13ರ ಮಂಗಳವಾರ ಸಂಜೆ ಸುಮಾರು 5 ಗಂಟೆಗೆ ಈ ಘಟನೆ ‌ನಡೆದಿದೆ. ಮನೆಯಲ್ಲಿ ಯಾರು ಇಲ್ಲದ ಸಮಯ ತಾಯಿ ಮೊದಲು ಮಗಳಿಗೆ‌ ನೇಣು ಹಾಕಿ ಬಳಿಕ ತಾನು‌ ನೇಣು ಹಾಕಿಕೊಂಡು ‌ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತಪಟ್ಟ ತಾಯಿ ಮತ್ತು ಮಗಳ ಶವ ಚಿಂಚೋಳಿ ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಚಿಂಚೋಳಿ ಪೊಲೀಸ್‌ ಠಾಣಾ ಪೊಲೀಸರು ಸ್ಥಲಕ್ಕೆ ಭೇಟಿ ‌ನೀಡಿ ಗಂಡ ಆನಂದ ಎಂಬವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next