Advertisement

ಚಿಂಚೋಳಿ ಉಪ ಚುನಾವಣೆ; ಮತದಾನಕ್ಕೆ ಸಕಲ ಸಿದ್ಧತೆ

04:09 PM May 19, 2019 | Team Udayavani |

ಚಿಂಚೋಳಿ: ಚಿಂಚೋಳಿ ಮೀಸಲು(ಪಜಾ)ವಿಧಾನಸಭಾ ಮತಕ್ಷೇತ್ರಕ್ಕೆ ಮೇ 19ರಂದು ಬೆಳಗ್ಗೆ 7:00ರಿಂದ ಸಂಜೆ 6:00ರ ವರೆಗೆ ನಡೆಯುವ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ತಾಲೂಕು ಸಹಾಯಕ ಚುನಾವಣಾಧಿಕಾರಿ ಸೋಮಶೇಖರ ಎಸ್‌.ಜಿ. ತಿಳಿಸಿದ್ದಾರೆ.

Advertisement

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮತನಾಡಿದ ಅವರು, ನ್ಯಾಯ ಸಮ್ಮತ ಚುನಾವಣೆಯಲ್ಲಿ 6 ಪ್ಲಾಯಿಂಗ್‌ ಸ್ಕ್ವಾಡ್‌ ತಂಡ ರಚಿಸಲಾಗಿಲಾಗಿದೆ. ಕೋಡ್ಲಿ ಮತ್ತು ಕಾಳಗಿ ವಲಯದಲ್ಲಿ 3 ತಂಡಗಳು ಮತ್ತು ಚಿಂಚೋಳಿ-ಐನಾಪುರ ಹೋಬಳಿಗಳಲ್ಲಿ 3 ತಂಡ ನಿಯೋಜಿಸಲಾಗಿದೆ ಎಂದು ತಿಳಿಸಿದರು.

ತೆಲಂಗಾಣ ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲವು ಗ್ರಾಮಗಳಲ್ಲಿ ಚೆಕ್‌ ಪೋಸ್ಟ್‌ ಸ್ಥಾಪಿಸಲಾಗಿದೆ. ವಾಹನಗಳ ತಪಾಸಣೆ, ಮದ್ಯ, ಹಣ ಹಾಗೂ ಇನ್ನಿತರ ನ್ಪೋಟಕ ವಸ್ತುಗಳು ಅಕ್ರಮ ಸಾಗಾಟ ತಡೆಯಲು ಅಗತ್ಯ ಕ್ರಮ ಕೈಕೊಳ್ಳಲಾಗಿದೆ. ಕುಸರಂಪಳ್ಳಿ, ತುಮಕುಂಟಾ, ಕಲ್ಲೂರ ರೋಡ, ಮಿರಿಯಾಣ, ಭಕ್ತಂಪಳ್ಳಿ, ಕುಂಚಾವರಂ, ಐನಾಪುರ, ಚೆಂಗಟಾ, ನಿಡಗುಂದಾ(ಜಟ್ಟೂರ) ಕಾಳಗಿ, ಹೇರೂರ, ಸುಲೇಪೇಟ ಗ್ರಾಮಗಳ ಹತ್ತಿರ 5 ಚೆಕ್‌ ಪೋಸ್ಟ್‌ ಪ್ರಾರಂಭಿಸಲಾಗಿದೆ. ಮೇ 19ರಂದು ಮತದಾನಕ್ಕೆ 111 ವಾಹನಗಳನ್ನು ಬಳಸಿಕೊಳ್ಳಲಾಗುತ್ತಿದೆ. 29 ಸಾರಿಗೆ ಬಸ್‌ಗಳು, 17 ಸ್ಟೆಚರ್‌, 6 ಕ್ರೂಸರಗಳಿವೆ. 282 ಕಂಟ್ರೋಲ್ ಯುನಿಟ್ ಜತೆಗೆ 333 ವಿದ್ಯುನ್ಮಾನ ಮತ ಯಂತ್ರ ಒಳಗೊಂಡಿವೆ ಎಂದು ತಿಳಿಸಿದರು.

ಮತದಾನ ಸಂದರ್ಭದಲ್ಲಿ ಯಾವುದೇ ಗ್ರಾಮ ಹಾಗೂ ಮತಗಟ್ಟೆ ಕೇಂದ್ರದಲ್ಲಿ ಗಲಾಟೆ ಮತ್ತು ಇನ್ನಿತರ ಅಹಿತಕರ ಘಟನೆಗಳು ನಡೆಯದಂತೆ ವ್ಯಾಪಕ ಪೊಲೀಸ್‌ ಬಿಗಿ ಭದ್ರತೆ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು. ತಹಶೀಲ್ದಾರ್‌ ಪಂಡಿತ ಬಿರಾದಾರ, ಮಲ್ಲಿಕಾರ್ಜುನ ಪಾಲಾಮೂರ, ನಾಗೇಶ ಭದ್ರಶಟ್ಟಿ ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next