Advertisement

ಪತಿ ಆಸ್ತಿ ಪಡೆದು ಸಿರಿವಂತ ಸ್ಥಿತಿಗೆ ಏರಿದ ಚೀನದ ಮಹಿಳೆ

09:09 AM Jun 03, 2020 | mahesh |

ಬೀಜಿಂಗ್‌: ಚೀನದ ಮಹಿಳೆಯೊಬ್ಬರು ಏಕಾಏಕಿ, ಏಷ್ಯಾದ ಶತಕೋಟಿ ಆಸ್ತಿಯ ಒಡೆಯರಲ್ಲೊಬ್ಬರಾಗಿ ಹೊರಹೊಮ್ಮಿದ್ದಾರೆ. ಹಾಗಂತ, ಉದ್ಯಮಿಯಾಗಿ, ಕಷ್ಟಪಟ್ಟು ದುಡಿದು ಇಷ್ಟು ಆಸ್ತಿ ಸಂಪಾದಿಸಿದ್ದಲ್ಲ. ತಮ್ಮ ಪತಿಗೆ ವಿಚ್ಛೇದನ ನೀಡಿ ಸಂಪಾದಿಸಿದ್ದು ! ಕೆಲವು ವರ್ಷಗಳ ಹಿಂದೆ ಚೀನದ ದೈತ್ಯ ಉದ್ಯಮಿಗಳಲ್ಲಿ ಒಬ್ಬರಾದ ಡು ವೈಯ್ಮಿನ್‌ರನ್ನು ಮದುವೆಯಾಗಿದ್ದ ಅವರು, ಇತ್ತೀಚೆಗೆ ವಿಚ್ಛೇದನ ಪಡೆದಿದ್ದಾರೆ. ನ್ಯಾಯಾಲಯದ ಆದೇಶದ ಪ್ರಕಾರ, ವೈಯ್ಮಿನ್‌ ಅವರು, ತಮ್ಮ ಔಷಧ ಕಂಪನಿಯಾದ “ಶೆಂಝೆನ್‌ ಕಂಗಾಯ್‌ ಬಯೋಲಾಜಿಕಲ್‌ ಪ್ರಾಡಕ್ಟ್ ಲಿಮಿಟೆಡ್‌’ನಲ್ಲಿನ 24,000 ಕೋಟಿ ರೂ. ಮೌಲ್ಯದ 161.3 ಮಿ. ಷೇರುಗಳನ್ನು ಮಾಜಿ ಪತ್ನಿಯ ಹೆಸರಿಗೆ ವರ್ಗಾಯಿಸಿದ್ದಾರೆ. ಹೀಗಾಗಿ ಅತಿ ಹೆಚ್ಚು ಶ್ರೀಮಂತ ವಿಚ್ಛೇದನ ಪಡೆದ ಮಹಿಳೆಯೆಂಬ ಹೆಗ್ಗಳಿಕೆಗೂ ಪಾತ್ರಳಾಗಿದ್ದಾರೆ !

Advertisement
Advertisement

Udayavani is now on Telegram. Click here to join our channel and stay updated with the latest news.

Next