ಚೀನಾ: ಚೀನಾದಲ್ಲಿ ಏಕಾಏಕಿ ಸೋಮವಾರ
ಮತ್ತೆ 78 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ. ಸಹಜ ಸ್ಥಿತಿಗೆ ಮರಳಿದ್ದರಿಂದ ವಿದೇಶಗಳಲ್ಲಿದ್ದವರು ಮರಳಿದ್ದರಿಂದ ಸೋಂಕು ಪೀಡಿತರ ಪ್ರಮಾಣ ದ್ವಿಗುಣಗೊಂಡಿದೆ.
ಸೋಂಕು ಪೀಡಿತ 78 ಮಂದಿಯಲ್ಲಿ 74 ಜನರು ವಿದೇಶದಿಂದ ಮರಳಿದವರೇ ಆಗಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಆರಂಭದಲ್ಲಿ ಕೋವಿಡ್-19 ವೈರಸ್ ಕಾಣಿಸಿಕೊಂಡಿದ್ದು ಚೀನಾದಲ್ಲಿ. ತದನಂತರದಲ್ಲಿ ಈ ಭೀಕರ ವೈರಸ್ ಇಡೀ ವಿಶ್ವವನ್ನೇ ಹಬ್ಬಿತ್ತು. ಇತ್ತೀಚೆಗಷ್ಟೇ ಚೀನಾದಲ್ಲಿ ಸೋಂಕಿತರ ಪ್ರ,ಮಾಣ ದಿನಂದಿಂದ ದಿನಕ್ಕೆ ಇಳಿಕೆಯಾಗುತ್ತಿತ್ತು. ಆದರೆ ಚೀನಾದಲ್ಲಿ ಈ ಸೋಂಕು ನಿಯಂತ್ರಣಕ್ಕೆ ಬರುವ ಲಕ್ಷಣವೇ ಗೋಚರವಾಗುತ್ತಿಲ್ಲ. ಸೋಮವಾರ ಒಂದೇ ದಿನ ಚೀನಾದಲ್ಲಿ 78 ಹೊಸ ಪ್ರಕರಣ ದಾಖಲಾಗಿರುವುದು ಸಹಜವಾಗಿಯೇ ಆತಂಕ ಮೂಡಿಸಿದೆ.
ಕೊರೋನಾ ವೈರಸ್ ಕಾಣಿಸಿಕೊಂಡ ನಂತರ ಚೀನಾ ವೈರಸ್ ನಿಯಂತ್ರಣಕ್ಕೆ ಮುಂದಾಗಿತ್ತು. ರೋಗಿಗಳಿಗಾಗಿ ಹೈಟೆಕ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ತೊಡಗಿತ್ತು. ಇನ್ನೇನು ಎಲ್ಲವೂ ನಿಯಂತ್ರಣಕ್ಕೆ ಬಂದಿದೆ ಎನ್ನುವಾಗಲೇ ಮತ್ತೆ ಈ ವೈರಸ್ ಚೀನಾವನ್ನು ಕಾಡಲು ಆರಂಭವಾಗಿದೆ.
ಚೀನಾದ ನಂತರ ಇಟಲಿಯಲ್ಲಿ ಈ ವೈರಸ್ ಅಕ್ಷರಶಃ ಮರಣ ಮೃದಂಗವನ್ನು ಬಾರಿಸಿದ್ದು, ಸೋಮವಾರ 600 ಜನರು ಮೃತರಾಗಿದ್ದಾರೆ. ಆ ಮೂಲಕ ಬಲಿಯಾದವರ ಸಂಖ್ಯೆ 6,078 ಕ್ಕೆ ಏರಿಕೆಯಾಗಿದೆ. ಹೀಗಾಗಿ ಅಲ್ಲಿನ ಪ್ರಧಾನಿ ಇಟಲಿಯನ್ನೇ ಬಂದ್ ಮಾಡಿ ಆದೇಶ ಹೊರಡಿಸಿದೆ.
ಇಟಲಿಯಲ್ಲಿ ಸೋಂಕಿತರ ಸಂಖ್ಯೆ 63 ಸಾವಿರದ ಗಡಿ ತಲುಪಿದೆ.ಇನ್ನು, ದಿನ ನಿತ್ಯ ಬಳಕೆಯ ವಸ್ತುಗಳು ಸರಿಯಾಗಿ ಸಿಗದೆ ಮಧ್ಯಮ ವರ್ಗದ ಜನತೆ ಕಂಗಾಲಾಗಿದೆ. ಹೀಗಾಗಿ, ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಬಂದೊದಗಿದೆ. ಇನ್ನು ದೇಶದ ಆರ್ಥಿಕತೆ ಸಂಪೂರ್ಣವಾಗಿ ಕುಸಿದಿದೆ.
ಜಗತ್ತಿನಾದ್ಯಂತ ಈ ಮಹಾಮಾರಿ ವೈರಸ್ ಗೆ 16,500 ಜನರು ಬಲಿಯಾಗಿದ್ದು, 378,000ಕ್ಕಿಂತ ಹೆಚ್ಚು ಜನರು ಸೋಂಕು ಪೀಡಿತರಾಗಿದ್ದಾರೆ. ಮಾತ್ರವಲ್ಲದೆ 1.5 ಬಿಲಿಯನ್ ಜನರು ಮನೆಯಲ್ಲಿ ಕುಳಿತು ನಿರ್ಬಂಧ ವಿಧಿಸಿಕೊಂಡಿದ್ದಾರೆ.