Advertisement

ಚೀನಕ್ಕೆ ಕಾದಿದೆ ಚಳಿಗಾಲದ ಶಾಕ್‌; ವಿಂಟರ್‌ ಕಿಟ್‌, ಆಹಾರ ದಾಸ್ತಾನು ಶುರು

08:35 AM Aug 03, 2020 | mahesh |

ಲಡಾಖ್‌: ಚಳಿಗಾಲದಲ್ಲಿ ವಾತಾವರಣದಂತೆ ಹಿಮಚ್ಛಾದಿತ ಗಡಿಗಳೂ ತಣ್ಣಗಿರುತ್ತವೆ. ದಟ್ಟ ಹಿಮದ ನಡುವೆ ಶತ್ರು ಸೈನಿಕರ ಮುನ್ನುಗ್ಗುವಿಕೆ ತೀರಾ ಕಡಿಮೆ ಇರುವುದರಿಂದ, ಬೆಟ್ಟಗಳ ಮೇಲೆ ಕಾವಲಿರುವ ಸೈನಿಕರು ಕೆಳಗಿಳಿಯುವುದು, ಹಿಮಕಣಿವೆಗಳಿಂದ ಹಿಂದೆ ಸರಿಯುವುದು ಸಹಜ ಪ್ರಕ್ರಿಯೆ. ಆದರೆ, ಚೀನ ಪ್ರತಿವರ್ಷದ ಈ ಗಡಿ ರಕ್ಷಣೆಯ ನಂಬಿಕೆಯನ್ನೇ ಬುಡ ಮೇಲು ಮಾಡುತ್ತಿದೆ.

Advertisement

ಚಳಿಗಾಲದ ಋತುವಿನಲ್ಲಿ ಚೀನ ದಾಳಿಗೈಯ್ಯುವ ಸಂಭವವಿದೆ ಎಂಬ ಮುನ್ಸೂಚನೆ ಸಿಗುತ್ತಿದ್ದಂತೆಯೇ ಭಾರತ ಹೈಅಲರ್ಟ್‌ ಆಗಿದೆ. ಚಳಿಗಾಲಕ್ಕೆ ಅಗತ್ಯವಾದ ಕಿಟ್‌, ಯುದ್ಧ ಸಾಮಗ್ರಿಗಳ ಖರೀದಿ, ದಾಸ್ತಾನು ಈಗಲೇ ಶುರುವಾಗಿದೆ ಎಂದು ಸೇನೆಯ ಮೂಲಗಳು ಖಚಿತಪಡಿಸಿವೆ.

ಏನೇನು ಸಂಗ್ರಹ?: ಆಹಾರ ಸಾಮಗ್ರಿ, ಸೀಮೆಎಣ್ಣೆ, ಎಫ್ಒಎಲ್‌ಗ‌ಳ (ಇಂಧನ, ತೈಲ, ಲೂಬ್ರಿಕೆಂಟ್‌) ದಾಸ್ತಾನು ಉತ್ತಮವಾಗಿ ಸಾಗುತ್ತಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ದಪ್ಪ ಜಾಕೆಟ್‌ಗಳು, ಸದೃಢ ಬೂಟ್‌ಗಳನ್ನು ಹೆಚ್ಚೆಚ್ಚು ಖರೀದಿಸಲಾಗುತ್ತಿದೆ. ಸೇನಾ ಕಿಟ್‌ಗಳನ್ನು ಪೂರೈಸುವ 4 ವಿದೇಶಿ ಮಾರಾಟ ಸಂಸ್ಥೆಗಳೊಂದಿಗೆ ಖರೀದಿ ಒಪ್ಪಂದಗಳು ನಡೆಯುತ್ತಿವೆ. ನವೆಂಬರ್‌ ವೇಳೆಗೆ ಖರೀದಿ ಪೂರ್ಣಗೊಳ್ಳಲಿದೆ ಎಂದು ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಲೆನೋವಾದ ಬಿಎಲ್‌ಎ
ಬಲೂಚಿಸ್ಥಾನ್‌ ಲಿಬರೇಶನ್‌ ಆರ್ಮಿಯ (ಬಿಎಲ್‌ಎ) ಹೋರಾಟ ಹತ್ತಿಕ್ಕಲು ಚೀನ ಶತ ಪ್ರಯತ್ನ ನಡೆಸುತ್ತಿದೆ. ಬಿಎಲ್‌ಎಯನ್ನು ಜಾಗತಿಕ ಭಯೋತ್ಪಾದಕ ಸಂಘಟನೆಯಾಗಿ ಘೋಷಿಸಬೇಕು ಎಂದು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮುಂದೆ ಚೀನ ಪಟ್ಟುಹಿಡಿದಿದೆ. ಬಲೂಚಿಸ್ಥಾನ್‌ ಮೂಲಕ ಹಾದು ಹೋಗುವ ಚೀನ- ಪಾಕಿಸ್ಥಾನ್‌ ಆರ್ಥಿಕ ಕಾರಿಡಾರನ್ನು ಬಲವಾಗಿ ವಿರೋಧಿಸುತ್ತಿರುವ ಬಿಎಲ್‌ಎ, ಕ್ಸಿ ಜಿನ್‌ಪಿಂಗ್‌ ಸರಕಾರಕ್ಕೆ ದೊಡ್ಡ ತಲೆನೋವಾಗಿದೆ.

5ನೇ ಸುತ್ತಿನ ಕಾರ್ಪ್ಸ್ ಕಮಾಂಡರ್‌ಗಳ ಸಭೆ
ಭಾರತ- ಚೀನ ನಡುವೆ 5ನೇ ಸುತ್ತಿನ ಕಾರ್ಪ್ಸ್ ಕಮಾಂಡರ್‌ಗಳ ಸಭೆ ರವಿವಾರ ನಡೆಯಿತು. ಚೀನ ಗಡಿ ಭಾಗದ ಮೊಲ್ಡೊದಲ್ಲಿ ನಡೆದ ಸಭೆಯಲ್ಲಿ ಪ್ಯಾಂಗಾಂಗ್‌ ಸರೋವರದ ದಂಡೆಗಳು ಚರ್ಚೆಯ ಕೇಂದ್ರಬಿಂದುವಾಗಿದ್ದವು. ಪಿ-17, ಪ್ಯಾಂಗಾಂಗ್‌ ವಲಯದ ಉತ್ತರ ದಂಡೆಯಿಂದ ಚೀನ ಹಿಂದೆ ಸರಿಯಬೇಕು ಎಂದು ಭಾರತ ಬಲವಾಗಿ ಪ್ರತಿಪಾದಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next