Advertisement

ಚೀನದಲ್ಲಿ ಇನ್ನು ದಂಪತಿ 3 ಮಕ್ಕಳನ್ನು ಹೊಂದಲು ಅನುಮತಿ!

02:58 AM Jun 01, 2021 | Team Udayavani |

ಬೀಜಿಂಗ್‌: ಜಗತ್ತಿನಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಇರುವ ರಾಷ್ಟ್ರ ಚೀನದಲ್ಲಿ ಇನ್ನು ದಂಪತಿ ಮೂರು ಮಕ್ಕಳನ್ನು ಹೊಂದಬಹುದು. ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ನೇತೃತ್ವದಲ್ಲಿ ನಡೆದ ಚೀನ ಕಮ್ಯೂನಿಸ್ಟ್‌ ಪಕ್ಷದ ಪಾಲಿಟ್‌ಬ್ಯೂರೋ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

Advertisement

ಸರಕಾರಿ ಮಾಧ್ಯಮ ಸಂಸ್ಥೆ “ಕ್ಸಿನ್‌ಹುವಾ’ ವರದಿ ಪ್ರಕಾರ, ದೇಶದ ಜನಸಂಖ್ಯೆಯನ್ನು ಪುನರ್‌ ವ್ಯವಸ್ಥೆಗೊಳಿಸಲು ಹಲವು ಬೆಂಬಲ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ. ಹಿರಿಯ ನಾಗರಿಕರ ಯೋಗಕ್ಷೇಮ, ಆರೋಗ್ಯಯುತ ಜನರ ಉತ್ತಮ ಬಳಕೆಯತ್ತ ಹೆಜ್ಜೆ ಇಡಲಾಗುತ್ತಿದೆ. ಜನರಲ್ಲಿ ಮಕ್ಕಳನ್ನು ಪಡೆಯುವ ಸಾಮರ್ಥ್ಯ (ಫ‌ರ್ಟಿಲಿಟಿ ರೇಟ್‌) ಕುಗ್ಗುತ್ತಿರುವ ಹಿನ್ನೆಲೆಯಲ್ಲಿ ಅದನ್ನು ಉತ್ತಮಪಡಿಸಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪ್ರಕಟಿಸಲಾಗಿದೆ. ಆದರೆ, ಈ ಬಗ್ಗೆ ವಿವರ ನೀಡಲಾಗಿಲ್ಲ. ಚೀನ ಈಗ 1.4 ಶತಕೋಟಿ ಜನಸಂಖ್ಯೆ ಹೊಂದಿದೆ.

ಗಣತಿ ವರದಿ ಹೇಳಿದ್ದೇನು?
1980ರ ಬಳಿಕ ಹೆಚ್ಚುತ್ತಿರುವ ಜನಸಂಖ್ಯೆ ನಿಯಂತ್ರಿ ಸಲು ಚೀನ ಸರಕಾರವು, ಒಂದು ದಂಪತಿ ಒಂದೇ ಮಗು ಹೊಂದಿರಬೇಕು ಎಂಬ ನಿಯಮ ಜಾರಿ ಮಾಡಿತ್ತು. 2016ರಲ್ಲಿ ಆ ನೀತಿಯಲ್ಲಿ ಕೊಂಚ ರಿಯಾಯಿತಿ ಪ್ರಕಟಿಸಲಾಗಿತ್ತು. 2020ರ ಜನಗಣತಿ ವರದಿ ಪ್ರಕಾರ, ಚೀನ ಜನ ಸಂಖ್ಯೆ ಶೇ.0.59ರಷ್ಟು ಮಾತ್ರ ಬೆಳವಣಿಗೆ ಕಂಡಿತ್ತು. 15-59 ವರ್ಷ ವಯೋ ಮಿತಿಯವರ ಪ್ರಮಾಣ ಶೇ.70.1ರಿಂದ ಶೇ.63.3ಕ್ಕೆ ಇಳಿಕೆಯಾಗಿದ್ದರೆ, 65 ವರ್ಷ ಮತ್ತು ಮೇಲ್ಪಟ್ಟವರ ಪ್ರಮಾಣ ಶೇ.8.9ರಿಂದ ಶೇ.13.5ಕ್ಕೆ ಏರಿಕೆಯಾಗಿದೆ. 2017ರಲ್ಲಿ ಎರಡು ಮಕ್ಕಳನ್ನು ಹೊಂದುವವರ ಪ್ರಮಾಣ ಶೇ.50ರಿಂದ ಶೇ.40ಕ್ಕೆ ಕುಸಿದಿದೆ. ಈ ಹಿನ್ನೆಲೆಯಲ್ಲಿ ಈಗ ಮೂರು ಮಕ್ಕಳನ್ನು ಹೊಂದಲು ಸರಕಾರ ಅವಕಾಶ ಕಲ್ಪಿಸಿದೆ.

ಆದರೆ, ಹೆಚ್ಚುತ್ತಿರುವ ಜೀವನ ವೆಚ್ಚದಿಂದಾಗಿ ಮಕ್ಕಳೇ ಬೇಡ ಎಂಬ ನಿರ್ಣಯಕ್ಕೆ ಅನೇಕರು ಈಗಾಗಲೇ ಬಂದಿದ್ದಾರೆ. ಈ ಬಗ್ಗೆ “ಬಿಬಿಸಿ’ ಜತೆಗೆ ಮಾತನಾಡಿದ್ದ ಬೀಜಿಂಗ್‌ನ ಮಹಿಳೆ “ನನ್ನ ಸ್ನೇಹಿತರು ಒಳ್ಳೆಯ ಶಾಲೆಗೆ ಮಕ್ಕಳನ್ನು ಸೇರಿಸಲು ಮತ್ತು ಜೀವವ ನಿರ್ವಹಿಸಲು ಪಡುತ್ತಿರುವ ಕಷ್ಟ ಕಂಡು ಬೇಸತ್ತಿದ್ದೇನೆ. ಹೀಗಾಗಿ ನಾನೂ ಮಕ್ಕಳನ್ನು ಹೊಂದಲು ಬಯಸುವುದಿಲ್ಲ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next