Advertisement

ಗಡಿಯಲ್ಲಿನ ಉದ್ವಿಗ್ನತೆಗೆ ಭಾರತವೇ ನೇರ ಹೊಣೆ; ಚೀನದ ವಿದೇಶಾಂಗ ಸಚಿವ ಆರೋಪ

09:07 PM Jun 12, 2022 | Team Udayavani |

ಸಿಂಗಾಪುರ: ಭಾರತ ಮತ್ತು ಚೀನ ನಡುವಿನ ನೈಜ ಗಡಿ ರೇಖೆಯಲ್ಲಿ (ಎಲ್‌ಎಸಿ) ಗಡಿಯಲ್ಲಿ ಆಗಾಗ ಉಂಟಾಗುತ್ತಿರುವ ಶಾಂತಿ ಭಂಗದ ಪ್ರಕರಣಗಳಿಗೆ, ಅಲ್ಲಿ ಎದ್ದಿರುವ ಉದ್ವಿಗ್ನತೆಗೆ ಭಾರತವೇ ಕಾರಣ ಎಂದು ಚೀನದ ವಿದೇಶಾಂಗ ಸಚಿವ ವೀ ಫೆಂಘೆ ಆರೋಪಿಸಿದ್ದಾರೆ.

Advertisement

ಸಿಂಗಾಪುರದಲ್ಲಿ ಭಾನುವಾರ ನಡೆದ ಶಾಂಗ್ರಿ ಲಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಎಲ್‌ಎಸಿಯಲ್ಲಿ ಚೀನ ಸೈನಿಕರಿಂದ ಶಾಂತಿ ಭಂಗವಾಗುವ ನಿಟ್ಟಿನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಭಾರತವೇ ನೇರ ಹೊಣೆ.

ಆಗಾಗ ಅಲ್ಲಿ ಆಗಿರುವ ಗಲಭೆಗಳಿಗೆ ಭಾರತವೇ ಕಾರಣ. ಘರ್ಷಣೆಗೆ ಪ್ರಚೋದನೆ ನೀಡಿದ್ದೇ ಭಾರತ ಎಂಬುದು ನಮಗೆ ತಿಳಿದುಬಂದಿದೆ. ಗಡಿಯಲ್ಲಿ ಭಾರತ ಹೆಚ್ಚೆಚ್ಚು ಶಸ್ತ್ರಾಸ್ತ್ರಗಳನ್ನು ಜಮಾವಣೆ ಮಾಡಿದ್ದಲ್ಲದೆ, ಹೆಚ್ಚುವರಿ ಯೋಧರನ್ನು ಚೀನ ಗಡಿಯ ಕಡೆಗೆ ರವಾನಿಸಿದೆ. ಇಂಥ ಘಟನೆಗಳು ಘರ್ಷಣೆಗೆ ಪ್ರೇರಣೆ ನೀಡುತ್ತವೆ” ಎಂದಿದ್ದಾರೆ.

ಸಂವಾದದಲ್ಲಿ ಹಾಜರಿದ್ದ ಅಮೆರಿಕದ ಚಿಂತಕರ ಚಾವಡಿಯ ಸದಸ್ಯರಾದ ಡಾ. ತನ್ವಿ ಮದನ್‌, “ಎಲ್‌ಎಸಿಯಲ್ಲಿ 2 ವರ್ಷಗಳ ಹಿಂದೆ ಚೀನ ಸೈನಿಕರು ಶಾಂತಿ ಉಲ್ಲಂಘಿಸಿದ್ದರು. ಈಗಲೂ ಗಡಿಯಲ್ಲಿ ಅನಗತ್ಯವಾಗಿ ಚೀನ ತನ್ನ ಸೈನಿಕರನ್ನು ಹೆಚ್ಚುವರಿ ಸಂಖ್ಯೆಯಲ್ಲಿ ಜಮಾಯಿಸಿದೆ. ಇದಕ್ಕೆ ಪ್ರತಿಯಾಗಿ ಭಾರತವೂ ತನ್ನ ಸೇನೆಯನ್ನು ಜಮಾವಣೆ ಮಾಡುವಂತಾಗಿದೆ. ಈ ಸಮಸ್ಯೆಯನ್ನು ಇತ್ಯರ್ಥಗೊಳಿಸುವಲ್ಲಿ ಚೀನ ಯಾವ ಕ್ರಮ ಕೈಗೊಂಡಿದೆ” ಎಂಬ ಪ್ರಶ್ನೆಯನ್ನು ಕೇಳಿದಾಗ, ವೆಯ್‌ ಮೇಲಿನಂತೆ ಉತ್ತರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next