Advertisement

ಕರ್ತಾರ್‌ಪುರ ಕಾರಿಡಾರ್‌ : ಭಾರತ –ಪಾಕ್‌ ನಡೆ ಸ್ವಾಗತಿಸಿದ ಚೀನ

09:51 AM Nov 12, 2019 | Team Udayavani |

ಬೀಜಿಂಗ್‌: ಕರ್ತಾರ್‌ಪುರ ಕಾರಿಡಾರ್‌ ಅನ್ನು ಭಾರತ ಮತ್ತು ಪಾಕಿಸ್ಥಾನ ಬಳಸಿಕೊಂಡ ಬಗೆಯನ್ನು ನೇರೆಯ ರಾಷ್ಟ್ರ ಚೀನ ಸ್ವಾಗತಿಸಿದೆ. ಇದೊಂದು ಐತಿಹಾಸಿಕ ನಡೆಯಾಗಿದ್ದು, ಮುಂಬರುವ ದಿನಗಳಲ್ಲಿ ಇಂತಹ ಸೌಹಾರ್ದತೆ ಮುಂದುವರೆಯಲಿ ಎಂದು ಚೀನ ಆಶಿಸಿದೆ.

Advertisement

ಗುರುನಾನಕ್‌ ಅವರ 550ನೇ ಜನ್ಮದಿನಾಚರಣೆ ಸಂದರ್ಭ ಈ ಉಭಯ ರಾಷ್ಟ್ರಗಳು ತಮ್ಮ ಇತರ ವಿರೋಧಗಳನ್ನು ಮರೆತು ಒಂದಾಗಿದ್ದು, ಏಷ್ಯಾದ ರಾಷ್ಟ್ರಗಳ ಪಾಲಿಗೆ ಸಕರಾತ್ಮಕ ಬೆಳವಣಿಗೆಯಾಗಿದೆ.

ಭಾರತ ಮತ್ತು ಪಾಕಿಸ್ಥಾನ ಏಷ್ಯಾದ ಎರಡು ಪ್ರಮುಖ ರಾಷ್ಟ್ರಗಳಾಗಿದ್ದು, ಗುರುನಾನಕ್‌ ಅವರ 550ನೇ ಜನ್ಮ ದಿನಾಚರಣೆಯ ಏಕಕಾರಣಕ್ಕೆ ಒಂದಾಗಿದ್ದು ಜಗತ್ತಿಗೆ ನೀಡಿದ ಸಂದೇಶವಾಗಿದೆ ಎಂದು ಚೀನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿದೆ. ಇದೇ ನಡೆಯನ್ನು ಎರಡು ರಾಷ್ಟ್ರಗಳು ತಮ್ಮಲ್ಲಿರುವ ವಿವಾದಗಳನ್ನು ಬಗೆಹರಿಸುವಲ್ಲಿ ಮನಸ್ಸು ಮಾಡಲಿ ಎಂದು ಅದು ಹೇಳಿದೆ.

ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ಭಾರತ ಹಿಂದೆಗೆದುಕೊಂಡ ಬಳಿಕ ಪಾಕಿಸ್ಥಾನ ಭಾರತದ ಜತೆ ಪ್ರತಿ ನಡೆಯನ್ನು ತೀವ್ರವಾಗಿ ಖಂಡಿಸುತ್ತಾ ಬಂದಿತ್ತು. ಇದಕ್ಕಾಗಿ ಕೆಲವು ದಿನಗಳ ಕಾಲ ತನ್ನ ವಾಯುನೆಲವನ್ನು ಭಾರತಕ್ಕೆ ನಿರಾಕರಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next