Advertisement

ಅಮೆರಿಕ ನೌಕೆಯಿಂದ ಸಾಗರ ಗಡಿ ಉಲ್ಲಂಘನೆ: ಚೀನ ಎಚ್ಚರಿಕೆ

06:48 PM Jan 20, 2018 | udayavani editorial |

ಬೀಜಿಂಗ್‌ : ಅಮೆರಿಕದ ಕ್ಷಿಪಣಿ ನಾಶಕ ನೌಕೆಯೊಂದು ತನ್ನ ಸಾಗರ ಗಡಿ ಉಲ್ಲಂಘನೆ ಗೈದಿರುವುದಾಗಿ ಆರೋಪಿಸಿರುವ ಚೀನ, ತನ್ನ ಗಡಿಯೊಳಗಿನ ತನ್ನ ಸಾರ್ವಭೌಮತೆಯನ್ನು ರಕ್ಷಿಸಲು ತಾನು ಅಗತ್ಯ ಕ್ರಮ ತೆಗೆದುಕೊಳ್ಳುವೆ’ ಎಂದು ವಾಷಿಂಗ್ಟನ್‌ಗೆ ಎಚ್ಚರಿಕೆ ನೀಡಿದೆ. 

Advertisement

ಕಳೆದ ಜನವರಿ 17ರಂದು ಅಮೆರಿಕದ ಕ್ಷಿಪಣಿ ನಾಶಕ ಯಎಸ್‌ಎಸ್‌ ಹೂಪರ್‌ ನೌಕೆ ದಕ್ಷಿಣ ಚೀನ ಸಮುದ್ರದಲ್ಲಿನ ಹುವಾಂಗ್ಯಾನ್‌ ದಾವೋ ತೀರಕ್ಕೆ ಕೇವಲ 12 ನಾಟಿಕಲ್‌ ಮೈಲ್‌ ಸನಿಹದಲ್ಲಿ ಅಮೆರಿಕ ನೌಕೆ ಚೀನದ ಅನುಮತಿ ಇಲ್ಲದೆ ಹಾದು ಹೋಗಿದೆ. ಇದರಿಂದ ಚೀನದ ಸಾಗರಿಕ ಗಡಿಯ ಉಲ್ಲಂಘನೆಯಾಗಿದೆ ಎಂದು ಚೀನದ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್‌ ಹೇಳಿದರು.

ಹುವಾಂಗ್ಯಾನ್‌ ದಾವೋ ದಕ್ಷಿಣ ಚೀನ ಸಮುದ್ರದಲ್ಲಿ ಫಿಲಿಪ್ಪೀನ್ಸ್‌ನಿಂದ ಸುಮಾರು 230 ಕಿ.ಮೀ.ದೂರದಲ್ಲಿರುವ ರಿಂಗ್‌ ಆಫ್ ರೀಫ್ ಎಂದೇ ಖ್ಯಾತವಾಗಿರುವ ಸ್ಕಾರ್‌ಬರೋ ಶೋವಾಲ್‌ ಎಂದೂ ತಿಳಿಯಲ್ಪಟ್ಟಿದ್ದು ಚೀನ ಇದು ತನ್ನದೆಂದು ಹೇಳಿಕೊಳ್ಳುತ್ತಿದೆ ಮತ್ತು ಇತರ ರಾಷ್ಟ್ರಗಳು ಇದನ್ನು ವಿರೋಧಿಸುತ್ತಿವೆ. 

Advertisement

Udayavani is now on Telegram. Click here to join our channel and stay updated with the latest news.

Next