Advertisement

ಕೊರೋನಾ ವೈರಸ್ ಗೆ ಬಲಿಯಾದವರ ಸಂಖ್ಯೆ 25ಕ್ಕೆ ಏರಿಕೆ: ಚೀನಾದಲ್ಲಿ ತುರ್ತು ಕ್ರಮಗಳ ಘೋಷಣೆ

06:31 PM Mar 20, 2020 | Mithun PG |

ಬೀಜಿಂಗ್: ಕರೋನಾ ವೈರಸ್ ಗೆ ಚೀನಾ ತತ್ತರಿಸಿ ಹೋಗಿದ್ದು ಸಾವನ್ನಪ್ಪಿದವರ ಸಂಖ್ಯೆ 25ಕ್ಕೆ ಏರಿದೆ. ಅಂದಾಜು 830 ಜನರು ಈ ಭೀಕರ ವೈರಸ್ ಗೆ ತುತ್ತಾಗಿದ್ದಾರೆ ಎಂದು ಚೀನಾ ಸರ್ಕಾರ ತಿಳಿಸಿದೆ.

Advertisement

ಮೊದಲ ಬಾರಿಗೆ ವೈರಸ್ ಪತ್ತೆಯಾದ ವುಹಾನ್ ನಗರದಲ್ಲೇ 1,072 ಜನರು  ಈ ಮಾರಾಣಾಂತಿಕ ವೈರಾಣು ವಿಗೆ  ತುತ್ತಾಗಿದ್ದಾರೆ ಎನ್ನುವ ಶಂಕೆ ವ್ಯಕ್ತಪಡಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ

ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾ ಸರ್ಕಾರ ತುರ್ತು ಕ್ರಮಗಳನ್ನು ಘೋಷಣೆ ಮಾಡಿದೆ. 830 ಮಂದಿಯಲ್ಲಿ ವೈರಾಣು ಕಂಡು ಬಂದಿದ್ದು, ಇದರಲ್ಲಿ 177 ಜನರ ಸ್ಥಿತಿ ಚಿಂತಾಜನಕವಾಗಿದೆ. ಸೋಂಕು ತಗುಲಿ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದ 34 ಮಂದಿ ಚಿಕಿತ್ಸೆ ಪಡೆದಿದ್ದು, ಇದೀಗ ಗುಣಮುಖರಾಗಿದ್ದಾರೆ. ಸಮುದ್ರ ಆಹಾರ ಮತ್ತು ಮಾಂಸಾಹಾರದಿಂದ ವುಹಾನ್ ನಲ್ಲಿ ಈ ವೈರಸ್ ಹರಡಿಸುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ.

ಚೀನಾದಲ್ಲಿ ಶನಿವಾರದಿಂದ ಆರಂಭಗೊಳ್ಳಲಿರುವ ಹೊಸ ವರ್ಷದ ಸಂಭ್ರಮಕ್ಕಾಗಿ ವಿದೇಶಗಳಲ್ಲಿ ಇರುವ ಲಕ್ಷಾಂತರ ಚೀನಾ ಪ್ರಜೆಗಳು ರಜೆ ಮೇಲೆ ಆಗಮಿಸುತ್ತಿರುವುದು ಆರೋಗ್ಯ ಅಧಿಕಾರಿಗಳಲ್ಲಿ ಹೆಚ್ಚಿನ ಭಯ ಉಂಟು ಮಾಡಿದೆ ಎಂದು ವರದಿ ವಿವರಿಸಿದೆ.

ಕಳೆದ ವರ್ಷ ಚೀನಾದ ವುಹಾನ್ ನಗರದಲ್ಲಿ ಅಕ್ರಮ ವನ್ಯ ಜೀವಿಗಳ ವ್ಯಾಪಾರದಿಂದ ಹಬ್ಬಿದ್ದ ಅನಾಮಿಕ ವೈರಸ್ ನಿಂದ ತೊಂದರೆಗೆ ಒಳಗಾಗುವಂತೆ ಆಗಿತ್ತು ಎಂದು ವರದಿ ತಿಳಿಸಿದೆ. ವುಹಾನ್ ನಗರದಲ್ಲಿದ್ದ 11 ಲಕ್ಷ ಜನರಿಗೆ ನಗರ ಬಿಟ್ಟು ತೆರಳದಂತೆ ಅಧಿಕಾರಿಗಳು ಕಟ್ಟಪ್ಪಣೆ ವಿಧಿಸಿದ್ದಾರೆ. ಅಲ್ಲದೇ ಹುಯಾನ್ ಗ್ಗಾಂಗ್ ನಗರದ ಆರು ಲಕ್ಷ ಮಂದಿಗೂ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ ಎಂದು ವರದಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next