Advertisement

ಒಲಿಂಪಿಕ್ಸ್‌ನಲ್ಲಿ ಚೀನಾಕ್ಕೆ ಪ್ರವೇಶ ಕೊಡಬೇಕೋ, ಬೇಡವೋ?

07:33 PM Feb 28, 2020 | Lakshmi GovindaRaj |

ಜಗತ್ತಿನಲ್ಲೆಲ್ಲ ಕೊರೊನಾ ವೈರಸ್‌ನದ್ದೇ ಚರ್ಚೆ. ಚೀನಾದ ವುಹಾನ್‌ ಪಟ್ಟಣದಲ್ಲಿ ಅಚಾನಕ್ಕಾಗಿ ಶುರುವಾದ ಇದು, ಇಡೀ ಚೀನಾದಲ್ಲಿ ಹತ್ತಿರಹತ್ತಿರ 3000 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಅದರ ದಾಳಿ ನಿಲ್ಲುವ ಲಕ್ಷಣಗಳಿಲ್ಲ. ಇದೀಗ ದಕ್ಷಿಣ ಕೊರಿಯಾಕ್ಕೂ ಕಾಲಿಟ್ಟಿರುವ ಅಲ್ಲೂ ಸಾವಿರದ ಸಮೀಪ ಬಲಿ ತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಚೀನಾದಲ್ಲಿ ನಡೆಯುತ್ತಿರುವ ಕ್ರೀಡಾಕೂಟಗಳು ರದ್ದಾಗಿವೆ.

Advertisement

ಆ ದೇಶದ ಸ್ಪರ್ಧಿಗಳಿಗೆ ಬೇರೆ ದೇಶಗಳೂ ವೀಸಾ ನೀಡುತ್ತಿಲ್ಲ. ಒಟ್ಟಾರೆ ಕೊರೊನಾ ಪರಿಣಾಮ ಕ್ರೀಡೆಯ ಮೇಲೂ ದೊಡ್ಡದಾಗಿಯೇ ಆಗಿದೆ. ಅದರಿಂದ ವಿಪರೀತ ಪರಿಣಾಮಕ್ಕೆ ಸಿಲುಕಿರುವುದು ಸ್ವತಃ ಚೀನಾ ಕ್ರೀಡಾಪಟುಗಳು. ಸದ್ಯದ ಮಟ್ಟಿಗೆ ಅಲ್ಲಿನ ಬ್ಯಾಡ್ಮಿಂಟನ್‌ ಪಟುಗಳು ಚೀನಾಕ್ಕೆ ಕಾಲಿಡದೇ ಸುರಕ್ಷಿತವಾಗಿದ್ದಾರೆ. ಆದ್ದರಿಂದ ಅವರೊಂದು ಬೇರೆ ದೇಶದಲ್ಲಿ ಆಡುವ ಸ್ಥಿತಿಯಲ್ಲಿದ್ದಾರೆ. ಇದೆಲ್ಲ ಇರಲಿ, ಇದಕ್ಕಿಂತ ದೊಡ್ಡದಾದ ಆತಂಕಕಾರಿಯಾದ ಪ್ರಶ್ನೆಯೊಂದು ಈಗ ಹುಟ್ಟಿಕೊಂಡಿದೆ.

ಇದೇ ವರ್ಷ ಜುಲೈನಲ್ಲಿ ಚೀನಾ ಗಡಿಭಾಗದಲ್ಲಿರುವ ಜಪಾನ್‌ನಲ್ಲಿ ಒಲಿಂಪಿಕ್ಸ್‌ ಇದೆ. ಆ ಕೂಟ ಆರಂಭವಾಗುವಾಗ ಕೊರೊನಾ ಹಿಡಿತಕ್ಕೆ ಬಂದಿರುತ್ತದಾ? ಬಂದಿರದಿದ್ದರೆ ಚೀನಿ ಅಥ್ಲೀಟ್‌ಗಳಿಗೆ ಜಪಾನ್‌ ಪ್ರವೇಶ ನೀಡುತ್ತದಾ? ಅಥ್ಲೀಟ್‌ಗಳಿರಲಿ, ಚೀನಾದಿಂದ ಜಪಾನ್‌ಗೆ ಹೋಗಲಿಚ್ಛಿಸುವ ಪ್ರವಾಸಿಗಳನ್ನು ಜಪಾನ್‌ ಹೇಗೆ ಸ್ವೀಕರಿಸುತ್ತದೆ? ವಿಶ್ವದ ಬಲಿಷ್ಠ ಕ್ರೀಡಾರಾಷ್ಟ್ರವಾಗಿರುವ ಚೀನಾವಿಲ್ಲದೇ ಯಾವುದೇ ಒಲಿಂಪಿಕ್ಸ್‌ ಕಳೆಗಟ್ಟಲಾರದು.

ಚೀನಾದ ಅನುಪಸ್ಥಿತಿಯಲ್ಲಿ ಕೂಟ ನಡೆಸುವ ಧೈರ್ಯ ಜಪಾನ್‌ಗಿದೆಯಾ? ಚೀನಾವನ್ನು ಒಳಬಿಟ್ಟುಕೊಳ್ಳುವ ಮನಸ್ಸಾದರೂ ಇದೆಯಾ? ಇವೆಲ್ಲ ಬಹಳ ಗಂಭೀರವಾದ ಪ್ರಶ್ನೆಗಳು. ಇದು ಈಗ ಎಲ್ಲ ಕಡೆ ಶುರುವಾಗಿರುವ ಪ್ರಶ್ನೆ. ಮುಂದೆ ಈ ಪ್ರಶ್ನೆಯೇ ಬಹಳ ಮಹತ್ವ ಪಡೆದುಕೊಳ್ಳುತ್ತದೆ. ಚೀನೀಯರನ್ನು ಬಿಡಲೂ ಆಗದೇ, ಒಪ್ಪಿಕೊಳ್ಳಲೂ ಆಗದೇ ಒಲಿಂಪಿಕ್ಸ್‌ ಸಂಘಟನಾ ಸಮಿತಿ ಪರದಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next