Advertisement
ಗುರುವಾರ ಚೀನ ವಿರುದ್ಧ ಪರೋಕ್ಷ ವಾಗ್ಧಾಳಿ ನಡೆಸಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ರಾಯಭಾರಿ ಸಯ್ಯದ್ ಅಕºರುದ್ದೀನ್, ಗಡಿ ಪ್ರದೇಶಗಳಲ್ಲಿ ಉಗ್ರ ಸಂಘಟನೆಗಳು ದ್ವೇಷವನ್ನು ಪ್ರಚೋದಿಸುವ ಸಿದ್ಧಾಂತಗಳನ್ನು ಹರಡುತ್ತಿವೆ. ಜನರಿಂದ ಚಂದಾ ಎತ್ತಿ, ಆ ಹಣವನ್ನು ಶಸ್ತ್ರಾಸ್ತ್ರ ಕೊಳ್ಳಲು, ಹೊಸ ಉಗ್ರರನ್ನು ನೇಮಿಸಿಕೊಳ್ಳಲು ಬಳಸುತ್ತಿವೆ. ಪರಿಸ್ಥಿತಿ ಹೀಗಿದ್ದರೂ ದಕ್ಷಿಣ ಏಷ್ಯಾ ಕೆಲ ಸದಸ್ಯ ರಾಷ್ಟ್ರಗಳು ಭಯೋತ್ಪಾದನೆಯನ್ನು ತಮ್ಮೆಲ್ಲರಿಗೂ ಸಂಬಂಧಿಸಿದ ಅಪಾಯ ಎಂದು ಪರಿಗಣಿಸಿಯೇ ಇಲ್ಲ ಎಂದು ಚೀನದ ಹೆಸರನ್ನೇಳದೆ ಟೀಕಾ ಪ್ರಹಾರ ನಡೆಸಿದ್ದಾರೆ. ಅಕºರುದ್ದೀನ್ ಅವರ ಈ ಟೀಕೆಗೆ ಉತ್ತರಿಸಿರುವ ಚೀನ, ಮಸೂದ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸುವುದಕ್ಕೆ ಅಡ್ಡಿಯಾದ ತನ್ನ ನಡೆ ಅಂತಾರಾಷ್ಟ್ರೀಯ ನಿಯಮಗಳಿಗೆ ತಕ್ಕಂತೆ ಔಚಿತ್ಯವಾಗಿದೆ ಎಂದು ಹೇಳಿದೆ. Advertisement
ಮಸೂದ್‌ಗೆ ಚೀನ ಬೆಂಬಲ: ಭಾರತ ಕಿಡಿ
08:53 AM Dec 22, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.