Advertisement

ಟ್ರೇಡ್ ವಾರ್ ಎಫೆಕ್ಟ್; ಮೂರು ದಶಕಗಳಲ್ಲಿ ಮೊದಲ ಬಾರಿಗೆ ಚೀನಾದ ಜಿಡಿಪಿ ಭಾರೀ ಕುಸಿತ!

11:49 AM Oct 19, 2019 | Nagendra Trasi |

ಬೀಜಿಂಗ್: ಭಾರತದ ಆರ್ಥಿಕ ಅಭಿವೃದ್ಧಿ ಮಂದಗತಿಯಲ್ಲಿದೆ ಎಂಬ ಆರೋಪದ ನಡುವೆಯೇ ಇದೀಗ ಚೀನಾದ ಆರ್ಥಿಕ ಅಭಿವೃದ್ಧಿಯ ಜಿಡಿಪಿ(ಒಟ್ಟು ದೇಶೀಯ ಉತ್ಪಾದನೆ) ಶೇ.6.0ರಷ್ಟು ಕುಸಿತ ಕಂಡಿದ್ದು, ತ್ರೈಮಾಸಿಕದಲ್ಲಿ  ಕಳೆದ ಮೂರು ದಶಕಗಳಲ್ಲಿಯೇ ದಾಖಲೆ ಕನಿಷ್ಠ ಮಟ್ಟದಲ್ಲಿ ಕುಸಿತ ಕಂಡಂತಾಗಿದೆ ಎಂದು ವರದಿ ತಿಳಿಸಿದೆ.

Advertisement

ಅಮೆರಿಕದೊಂದಿಗಿನ ವ್ಯಾಪಾರ ಬಿಕ್ಕಟ್ಟಿನಿಂದಾಗಿ ಚೀನಾದ ದೇಶೀಯ ಉತ್ಪನ್ನಗಳ ಬೇಡಿಕೆ ತೀವ್ರ ಕುಸಿತ ಕಂಡಿದೆ. ಒಂದು ದೇಶದ ಆರ್ಥಿಕ ಪ್ರಗತಿಯ ಅಳತೆಗೋಲು ಎಂದೇ ಜಿಡಿಪಿಯನ್ನು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ತ್ರೈಮಾಸಿಕ ವರದಿಯ ಅಂಕಿ ಅಂಶದ ಪ್ರಕಾರ ಚೀನಾದ ಜಿಡಿಪಿ ಶೇ.6ಕ್ಕೆ ಕುಸಿದಿದೆ. ಎರಡನೇ ತ್ರೈಮಾಸಿಕದಲ್ಲಿ ಚೀನಾದ ಜಿಡಿಪಿ ಶೇ.6.2ರಷ್ಟಿತ್ತು.

1992ರ ನಂತರ ಚೀನಾ ಅತೀ ಕನಿಷ್ಠ ಮಟ್ಟದ ಜಿಡಿಪಿ ಕುಸಿತ ಕಂಡಿದೆ. ಪ್ರಸಕ್ತ ಸಾಲಿನಲ್ಲಿ  ಶೇ.6.0ರಿಂದ ಶೇ.6.5ರಷ್ಟು ಜಿಡಿಪಿ ಬೆಳವಣಿಗೆ ಗುರಿಯನ್ನು ಚೀನಾ ಹೊಂದಿತ್ತು. ಜಗತ್ತಿನ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ಚೀನಾ ಮತ್ತು ಅಮೆರಿಕ ನಡುವಿನ ವ್ಯಾವಹಾರಿಕ ಬಿಕ್ಕಟ್ಟಿನ ಬೆಳವಣಿಗೆಯನ್ನು ಚೀನಾದ ಟ್ರೇಡಿಂಗ್ ಪಾರ್ಟನರ್ಸ್ಸ್ ಮತ್ತು ಹೂಡಿಕೆದಾರರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಚೀನಾ ಮತ್ತು ಅಮೆರಿಕ ಟ್ರೇಡ್ ವಾರ್ ನಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತಕ್ಕೆ ಕಾರಣವಾಗಬಹುದು ಎಂಬ ಆತಂಕ ಹೆಚ್ಚಿಸತೊಡಗಿದೆ ಎಂದು ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next