ವಾಷಿಂಗ್ಟನ್: ಅಮೆರಿಕ ಸೇರಿದಂತೆ ಇಡೀ ಜಗತ್ತಿಗೆ ಚೀನಾ ಅಪಾಯಕಾರಿ ದೇಶವಾಗಿದೆ ಎಂದು ಆರೋಪಿಸಿರುವ ಭಾರತೀಯ ಅಮೆರಿಕನ್ ಅಧ್ಯಕ್ಷೀಯ ಸ್ಥಾನದ ಆಕಾಂಕ್ಷಿ ನಿಕ್ಕಿ ಹ್ಯಾಲೆ, ಬೀಜಿಂಗ್ ಯುದ್ಧ ತಯಾರಿ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:Rashmika Mandanna: ‘ಅನಿಮಲ್’ ನಲ್ಲಿ ‘ಗೀತಾಂಜಲಿ’ ಆದ ರಶ್ಮಿಕಾ; ಫಸ್ಟ್ ಲುಕ್ ಔಟ್
ಶುಕ್ರವಾರ (ಸೆ.22) ನ್ಯೂ ಹ್ಯಾಂಪ್ ಶೈರ್ ನಲ್ಲಿ ಆರ್ಥಿಕ ನೀತಿ ಕುರಿತ ಭಾಷಣದ ವೇಳೆ ಚೀನಾ ಕುರಿತು ಪ್ರಸ್ತಾಪಿಸಿದ ನಿಕ್ಕಿ ಹ್ಯಾಲೆ ಚೀನಾ ಅಮೆರಿಕವನ್ನು ಯುದ್ಧದಲ್ಲಿ ಸೋಲಿಸಲು ಅರ್ಧ ಶತಮಾನವನ್ನೇ ಕಳೆದಿದೆ. ಆದರೆ ಈಗ ಶಸ್ತ್ರಾಸ್ತ್ರ ಪಡೆಗಳ ವಿಷಯದಲ್ಲಿ ಚೀನಾ ಅಮೆರಿಕಕ್ಕೆ ಸರಿಸಮಾನವಾಗಿ ಬೆಳೆದಿದೆ ಎಂದರು.
ರಿಪಬ್ಲಿಕ್ ಅಭ್ಯರ್ಥಿ ನಿಕ್ಕಿ ಹ್ಯಾಲೆಯ ಪ್ರತಿಸ್ಪರ್ಧಿಯಾಗಿರುವ ವಿವೇಕ್ ರಾಮಸ್ವಾಮಿ ಓಹಿಯೊದಲ್ಲಿ ವಿದೇಶಾಂಗ ನೀತಿ ಕುರಿತ ಭಾಷಣ ಮಾಡಿದ್ದ ವೇಳೆ ಚೀನಾ ಕುರಿತು ಪ್ರಸ್ತಾಪಿಸಿದ್ದ ಎರಡು ದಿನಗಳ ಬಳಿಕ ನಿಕ್ಕಿ ಈ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಳಿಕ ನಿಕ್ಕಿ ಹ್ಯಾಲೆ ಮತ್ತು ರಾಮಸ್ವಾಮಿ ಜನಪ್ರಿಯ ಜಿಒಪಿ ಅಭ್ಯರ್ಥಿಗಳಾಗಿ ಹೊರಹೊಮ್ಮಿದ್ದಾರೆ ಎಂದು ವರದಿ ತಿಳಿಸಿದೆ. ಚೀನಾ ಇಡೀ ಜಗತ್ತಿಗೆ ಬೆದರಿಕೆಯ ದೇಶವಾಗಿದೆ ಎಂದು ಹ್ಯಾಲೆ ಹೇಳಿದರು.
ಚೀನಾ ಅಮೆರಿಕದ ಉದ್ಯೋಗವನ್ನು ಕಸಿದುಕೊಂಡಿದ್ದು, ನಮ್ಮ ವ್ಯಾಪಾರದ ರಹಸ್ಯವನ್ನು ತಿಳಿದುಕೊಂಡು ಔಷಧದಿಂದ ಹಿಡಿದು ಟೆಕ್ನಾಲಜಿಯವರೆಗೆ ಹಿಡಿತವನ್ನು ಸಾಧಿಸಿದೆ. ಆರ್ಥಿಕವಾಗಿ ಹಿಂದುಳಿದಿದ್ದ ಚೀನಾ ಇಂದು ಜಗತ್ತಿನಲ್ಲೇ ಎರಡನೇ ಅತೀ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿದೆ ಎಂದು ನಿಕ್ಕಿ ಹ್ಲಾಲೆ ತಿಳಿಸಿದ್ದಾರೆ.
ಚೀನಾದ ಕಮ್ಯೂನಿಷ್ಟ್ ಪಕ್ಷ ಯುದ್ಧಕ್ಕೆ ತಯಾರಿ ನಡೆಸುತ್ತಿದ್ದು, ಅಮೆರಿಕದ ಮೇಲೆ ಯುದ್ಧ ಸಾರಿ ಗೆಲುವು ಸಾಧಿಸುವ ಉದ್ದೇಶ ಚೀನಾದ್ದಾಗಿದೆ ಎಂದು ನಿಕ್ಕಿ ಹ್ಯಾಲೆ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.