Advertisement

ಚೀನ ಓಪನ್‌ ಟೆನಿಸ್‌: ಮೊದಲ ಸುತ್ತಲ್ಲೇ  ಸೋತ ಸ್ಟೀಫ‌ನ್ಸ್‌

11:29 AM Oct 04, 2017 | |

ಬೀಜಿಂಗ್‌: ಅಮೆರಿಕದ ಸ್ಲೋನ್‌ ಸ್ಟೀಫ‌ನ್ಸ್‌ ತವರಿನ ಯುಎಸ್‌ ಓಪನ್‌ ವನಿತಾ ಸಿಂಗಲ್ಸ್‌ ಗ್ರ್ಯಾನ್‌ಸ್ಲಾಮ್‌ ಗೆದ್ದ ಬಳಿಕ ಸೋಲಿನ ಆಘಾತದಿಂದ ತತ್ತರಿಸುತ್ತಿದ್ದಾರೆ. ಅವರು “ಚೀನ ಓಪನ್‌’ ಟೆನಿಸ್‌ ಪಂದ್ಯಾವಳಿಯ ಮೊದಲ ಸುತ್ತಿನಲ್ಲೇ ಪರಾಭವಗೊಂಡು ಹೊರಬಿದ್ದಿದ್ದಾರೆ. ಕಳೆದ ವಾರದ ವುಹಾನ್‌ ಓಪನ್‌ ಪಂದ್ಯಾವಳಿಯಲ್ಲೂ ಸ್ಟೀಫ‌ನ್ಸ್‌ ಪ್ರಥಮ ಸುತ್ತಿನಲ್ಲಿ ಎಡವಿದ್ದರು.

Advertisement

ಮಂಗಳವಾರದ “ಚೀನ ಓಪನ್‌’ ಮೊದಲ ಸುತ್ತಿನಲ್ಲಿ ಸ್ಲೋನ್‌ ಸ್ಟೀಫ‌ನ್ಸ್‌ ಅವರನ್ನು ಅಮೆರಿಕದವರೇ ಆದ ಕ್ರಿಸ್ಟಿನಾ ಮೆಕಾಲೆ 6-3, 6-0 ಅಂತರ ದಿಂದ ಹಿಮ್ಮೆಟ್ಟಿದರು. ಮೆಕಾಲೆ ಅರ್ಹತಾ ಸುತ್ತಿನ ಮೂಲಕ ಪಂದ್ಯಾ ವಳಿಗೆ ಬಂದಿದ್ದರು. ಮುಂದಿನ ವಾರ ಅವರು ಹಾಂಕಾಂಗ್‌ ಟೆನಿಸ್‌ ಕೂಟದಲ್ಲಿ ಆಡಲಿದ್ದಾರೆ.

ಈ ಬಾರಿಯ ವಿಂಬಲ್ಡನ್‌ ಚಾಂಪಿಯನ್‌, ಸ್ಪೇನಿನ ಗಾರ್ಬಿನ್‌ ಮುಗು ರುಜಾ ಕೂಡ ಮೊದಲ ಸುತ್ತಿನ ಆಘಾತಕ್ಕೆ ಸಿಲುಕಿದ್ದಾರೆ. ಆದರೆ ಅವರು ಅನಾರೋಗ್ಯದಿಂದ ಪಂದ್ಯದ ನಡುವೆ ಹಿಂದೆ ಸರಿಯಬೇಕಾಯಿತು. ಆಗ ಜೆಕ್‌ ಆಟಗಾರ್ತಿ ಬಾಬೊìರಾ ಸ್ಟ್ರೈಕೋವಾ ವಿರುದ್ಧ ಮುಗುರುಜಾ 1-6, 0-2ರ ಹಿನ್ನಡೆಯಲ್ಲಿದ್ದರು.

ಬೋಪಣ್ಣ  ಜೋಡಿ ಮುನ್ನಡೆ
ಪುರುಷರ ಡಬಲ್ಸ್‌ ನಲ್ಲಿ ಭಾರತದ ರೋಹನ್‌ ಬೋಪಣ್ಣ-ಉರುಗ್ವೆಯ ಪಾಬ್ಲೊ ಕ್ಯುವಾಸ್‌ ಸೇರಿ ಕೊಂಡು ಆತಿಥೇಯ ನಾಡಿನ ಮೊ ಕ್ಸಿನ್‌ ಗಾಂಗ್‌-ಝೆ ಜಾಂಗ್‌ರನ್ನು 6-0, 6-4ರಿಂದ ಪರಾಭವಗೊಳಿಸಿ ದ್ವಿತೀಯ ಸುತ್ತು ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next