ಫುÂಜು: ಭಾರತದ ಶಟ್ಲರ್ ಕಿದಂಬಿ ಶ್ರೀಕಾಂತ್ ಚೀನ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.
ಬುಧವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಶ್ರೀಕಾಂತ್ ಫ್ರಾನ್ಸ್‌ನ ಲೂಕಾಸ್ ಕಾರ್ವಿ ಅವರನ್ನು 21-12, 21-16 ಗೇಮ್‌ಗಳಿಂದ ಸೋಲಿಸಿದರು. ಮೊದಲ ಗೇಮ್‌ನ ಆರಂಭದಲ್ಲಿ ಕೊಂಚ ಹೆಣಗಾಡಿದ 9ನೇ ಶ್ರೇಯಾಂಕಿತ ಶ್ರೀಕಾಂತ್ ಅಂತಿಮವಾಗಿ 9 ಅಂಕಗಳ ಅಂತರದಲ್ಲಿ ಗೆಲುವು ದಾಖಲಿಸಿದರು.
ಭಾರತದ ಮತ್ತೋರ್ವ ಆಟಗಾರ ಪ್ರಣಯ್ ಎಚ್. ಎಸ್. ಇಂಡೋನೇಶ್ಯದ ಜೊನಾಥನ್ ಕ್ರಿಸ್ಟಿ ವಿರುದ್ಧ 11-21, 14-21 ಗೇಮ್‌ಗಳಿಂದ ಪರಾಭವಗೊಂಡರು. ಪುರುಷರ ಡಬಲ್ಸ್ ವಿಭಾಗದಲ್ಲಿ ಸಾತ್ವಿಕ್ ಸಾಯಿರಾಜ್-ಚಿರಾಗ್ ಶೆಟ್ಟಿ ಜೋಡಿ ಡೆನ್ಮಾರ್ಕ್‌ನ ಮಾಡ್ಸ್ ಕೊರ್ನಾಡ್ ಪೀಟರ್‌ಸನ್- ಮಾಡ್ಸ್ ಪೀಲರ್ ಕೋಲ್ಡಿಂಗ್ ವಿರುದ್ಧ 23-21, 24-22 ನೇರ ಗೇಮ್‌ಗಳಿಂದ ಜಯಿಸಿ ಮುಂದಿನ ಸುತ್ತಿಗೆ ಕಾಲಿಟ್ಟಿದ್ದಾರೆ.
ವನಿತಾ ಸಿಂಗಲ್ಸ್ ವಿಭಾಗದಲ್ಲಿ ವೈಷ್ಣವಿ ರೆಡ್ಡಿ ಜಕ್ಕಾ ಥಾಯ್ಲೆಂಡ್‌ನ ಪೋರ್ನ್ಪಾವೀ ಚುಂಚುವಾಂಗ್ ವಿರುದ್ಧ 12-21, 16-21 ಗೇಮ್‌ಗಳಿಂದ ಸೋತು ಟೂರ್ನಿಯಿಂದ ಹೊರನಡೆದರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿ ರೆಡ್ಡಿ-ಅಶ್ವಿನಿ ಪೊನ್ನಪ್ಪ ಜೋಡಿ ಮಲೇಶ್ಯದ ಗುಹ್ ಲಿಯು ಯಿಂಗ್-ಚಾನ್ ಪೆಂಗ್ ಸೂನ್ ಅವರಿಂದ 21-18, 19-21, 17-21 ಗೇಮ್‌ಗಳಿಂದ ಸೋಲನುಭವಿಸಿದರು.
ಮಂಗಳವಾರ ನಡೆದ ವನಿತಾ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಭರವಸೆಯ ಆಟಗಾರ್ತಿ ಪಿ.ವಿ. ಸಿಂಧು ದ್ವಿತೀಯ ಸುತ್ತು ಪ್ರವೇಶಿಸಿದ್ದರು. ರಶ್ಯದ ಎವೆYನಿಯಾ ಕೊಸೆತ್ಸಕಾಯ ವಿರುದ್ಧ ನಡೆದ ಈ ಪಂದ್ಯದಲ್ಲಿ ಸಿಂಧು 21-13, 21-19 ಅಂಕಗಳ ಜಯ ಸಾಧಿಸಿದ್ದರು. ಮುಂದಿನ ಸುತ್ತಿನಲ್ಲಿ ಸಿಂಧು ಥಾಯ್ಲೆಂಡ್‌ನ ಬುಸನಾನ್ ಅವರನ್ನು ಎದುರಿಸಲಿದ್ದಾರೆ.