ಚಾಂಗ್‌ಜೂ: ಕಾಮನ್ವೆಲ್ತ್ ಗೇಮ್ಸ್ ಚಾಂಪಿ ಯನ್ಸ್ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರು ಮೊದಲ ಸುತ್ತಿನ ಪಂದ್ಯದಲ್ಲಿ ಸೋತು ಹೊರಬಿದ್ದರು. ಈ ಸೋಲಿನಿಂದಾಗಿ ಚೀನ ಓಪನ್ ಸೂಪರ್ 1000 ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ.
ವಿಶ್ವದ ಎರಡನೇ ರ್‍ಯಾಂಕಿನ ಸಾತ್ವಿಕ್-ಚಿರಾಗ್ ಶೆಟ್ಟಿ ಅವರು ಇಂಡೋನೇಶ್ಯದ ಮುಹಮ್ಮದ್ ಶೊಹಿಬುಲ್ ಫಿಕ್ರಿ ಮತ್ತು ಮೌಲಾನ ಬಾಗಸ್ ಅವರನ್ನು 17-21, 21-17, 17-21 ಗೇಮ್‌ಗಳಿಂದ ಸೋಲಿಸಿದರು. ಈ ಹೋರಾಟ ಒಂದು ತಾಸು ಎಂಟು ನಿಮಿಷಗಳವರೆಗೆ ಸಾಗಿತ್ತು.
ಭಾರತದ ಮಿಕ್ಸೆಡ್ ಡಬಲ್ಸ್ ತಾರೆಯರಾದ ಸಿಕ್ಕಿ ರೆಡ್ಡಿ ಮತ್ತ ರೋಹನ್ ಕಪೂರ್ ಅವರು ಕೂಡ ಮೊದಲ ಸುತ್ತಿನ ಹೋರಾಟದಲ್ಲಿ ಮಲೇಷ್ಯಾದ ಚೆನ್ ಟಾಂಗ್ ಝೀ ಮತ್ತು ತೋಹ್ ಇ ವೈ ಅವರೆದುರು 15-21, 16-21 ಗೇಮ್‌ಗಳಿಂದ ಶರಣಾದರು.
ಮುಂಬರುವ ಏಷ್ಯನ್ ಗೇಮ್ಸ್ ಮುಂಚಿತವಾಗಿ ಸಾತ್ವಿಕ್-ಚಿರಾಗ್ ಶೆಟ್ಟಿ ಅವರು ಮೊದಲ ಸುತ್ತಿನ ಲ್ಲಿಯೇ ಸೋತಿರುವುದು ಬಲುದೊಡ್ಡ ನಿರಾಶೆ ಯಾಗಿದೆ. ಅವರಿಬ್ಬರು ಈ ಮೊದಲು ನಡೆದ ಸ್ವಿಸ್ ಓಪನ್, ಕೊರಿಯ ಮತ್ತು ಇಂಡೋನೇಶ್ಯ ಓಪನ್ ಕೂಟದಲ್ಲಿ ಗಮನಾರ್ಹ ನಿರ್ವಹಣೆ ನೀಡಿದ್ದರು.
ಸಾತ್ವಿಕ್-ಚಿರಾಗ್ ಇಂಡೋನೇಶ್ಯದ ಆಟಗಾರರೆ ದುರು ಸೋತಿರುವುದು ಇದು ಎರಡನೇ ಸಲ. ಕಳೆದ ಜೂನ್‌ನಲ್ಲಿ ನಡೆದ ಥಾಯ್ಲೆಂಡ್ ಓಪನ್‌ನ ಪ್ರಿ-ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಭಾರತೀಯರು ಸೋತಿದ್ದರು. ಮಂಗಳವಾರ ವಿಶ್ವ ಚಾಂಪಿಯನ್‌ಶಿಪ್ ಕಂಚು ವಿಜೇತ ಎಚ್.ಎಸ್. ಪ್ರಣಯ್ ಮಲೇಷ್ಯಾದ ಎನ್‌ಜಿ ಝೆ ಯಾಂಗ್ ಅವರ ಕೈಯಲ್ಲಿ ಆಘಾತಕಾರಿ ಸೋಲನು ಕಂಡಿದ್ದರು.