Advertisement

ಚೀನ ಸಬ್‌ಮರೀನ್‌ಭಾರತದ ಮೇಲೆ ನಿಗಾ  

03:45 AM Jan 07, 2017 | Team Udayavani |

ಹೊಸದಿಲ್ಲಿ: ಭಾರತೀಯ ಸಮರ ನೌಕೆಗಳ ಮೇಲೆ ತೀರಾ ಸನಿಹದಿಂದ ನಿಗಾ ಇಡುವ ಉದ್ದೇಶದೊಂದಿಗೆ ಕಳೆದ ವರ್ಷ ಪಾಕಿಸ್ಥಾನದ ಕರಾಚಿ ಬಳಿ ಚೀನದ ಅಣು ಚಾಲಿತ ಜಲಾಂತರ್ಗಾಮಿ ನೌಕೆಯೊಂದು ನಿಯೋಜನೆಗೊಂಡಿತ್ತು ಎಂಬ ಮಾಹಿತಿ ತಡವಾಗಿ ಬೆಳಕಿಗೆ ಬಂದಿದೆ.

Advertisement

ಚೀನ ನಿಯೋಜನೆ ಮಾಡಿದ್ದ ಸಬ್‌ಮರೀನ್‌ ಹೆಸರು “093 ಶಾಂಗ್‌’. ಇದು ಚೀನ ನಿರ್ಮಾಣ ಮಾಡಿರುವ ಅತ್ಯಾಧುನಿಕ ಜಲಾಂತರ್ಗಾಮಿ ನೌಕೆಯಾಗಿದೆ ಎಂದು ನೌಕಾಪಡೆಯ ಮೂಲಗಳು ತಿಳಿಸಿವೆ.

ಕರಾಚಿ ಬಂದರಿನಲ್ಲಿ ಈ ನೌಕೆಯನ್ನು ನಿಯೋಜನೆಗೊಳಿಸಿ, ಭಾರತೀಯ ಯುದ್ಧ ನೌಕೆಗಳನ್ನು ಪರಿಶೀಲಿಸಲು ಬಳಕೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಉಪಗ್ರಹ ಚಿತ್ರ ಪರಿಣತರು ಚೀನದ ಜಲಾಂತರ್ಗಾಮಿ ನೌಕೆ ನಿಯೋಜನೆಯನ್ನು ಪತ್ತೆ ಮಾಡಿದ್ದಾರೆ. ಆ ನೌಕೆಯ ಚಿತ್ರವನ್ನು ಗೂಗಲ್‌ ಅರ್ಥ್ನಲ್ಲಿನ ಹಿಸ್ಟಾರಿಕಲ್‌ ಇಮೇಜರಿ ಐಕಾನ್‌ ಮೇಲೆ ಕ್ಲಿಕ್‌ ಮಾಡಿ, 2016ರ ಮೇ ತಿಂಗಳಿಗೆ ಹೋಗಿ ವೀಕ್ಷಿಸಬಹುದಾಗಿದೆ. ನೌಕೆಯ ಚಿತ್ರವನ್ನು ವಿಯೆಟ್ನಾಂನ ಪತ್ರಕರ್ತ ಡುಯಾಮ್‌ ಡಾಂಗ್‌ ಟ್ವೀಟ್‌ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next