Advertisement

ಪವಿತ್ರ ಸ್ನಾನಕ್ಕೆ ಚೀನ ಅಡ್ಡಿ : ಮಾನಸ ಸರೋವರ ಯಾತ್ರಿಕರ ಅಳಲು

04:14 PM May 28, 2018 | udayavani editorial |

ಹೊಸದಿಲ್ಲಿ : ”ಕೈಲಾಸ ಮಾನಸ ಸರೋವರದಲ್ಲಿ ಪವಿತ್ರ ಸ್ನಾನ ಕೈಗೊಳ್ಳಲು ತಮಗೆ ಚೀನೀ ಅಧಿಕಾರಿಗಳು ಬಿಡಲಿಲ್ಲ” ಎಂದು ಹಿಂದೂ ಯಾತ್ರಿಕರು ದೂರಿದ್ದಾರೆ. 

Advertisement

ಚೀನದ ನಾಥೂ ಲಾ ಪಾಸ್‌ ಮಾರ್ಗವಾಗಿ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಳ್ಳುವುದಕ್ಕೆ ಈ ಬಾರಿ ಚೀನ ಸರಕಾರ ಸಮ್ಮತಿಸಿತ್ತು. ಇದಕ್ಕಾಗಿ ಬಹಳಷ್ಟು ಪ್ರಯತ್ನ ಪಟ್ಟಿದ್ದ ವಿದೇಶ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್‌ ಅವರು ಕಳೆದ ಮೇ 8ರಂದು “ನಾಥೂ ಲಾ ಪಾಸ್‌ ಮೂಲಕ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವುದಕ್ಕೆ ಚೀನ ಸರಕಾರ ಸಮ್ಮತಿಸಿದೆ’ ಎಂದು ಪ್ರಕಟಿಸಿದೆ. 

ನಾಥೂ ಲಾ ಪಾಸ್‌ ಮೂಲಕ ಕೈಲಾಸ್‌ ಮಾನಸ ಸರೋವರ ಯಾತ್ರೆಯನ್ನು ಮೋಟಾರು ವಾಹನದಲ್ಲೇ ಕೈಗೊಳ್ಳಲು ಸಾಧ್ಯವಿರುವುದರಿಂದ ಈ ಮಾರ್ಗವು ಹಿರಿಯ ನಾಗರಿಕರಿಗೆ, ಅಶಕ್ತರಿಗೆ ಹೆಚ್ಚು ಅನುಕೂಲಕರವಾಗಿದೆ. 

ಆದರೆ ಈ ಮಾರ್ಗವಾಗಿ ಈ ಬಾರಿ ಕೈಲಾಸ ಮಾನಸ ಸರೋವರ ಪುಣ್ಯ ಕ್ಷೇತ್ರ ತಲುಪಿರುವ ಯಾತ್ರಿಕರಿಗೆ ಪವಿತ್ರ ಸ್ನಾನ ಕೈಗೊಳ್ಳಲು  ಚೀನೀ ಅಧಿಕಾರಿಗಳು ಅವಕಾಶ ನೀಡಲಿಲ್ಲ ಎಂಬ ದೂರು ಕಳವಳಕಾರಿಯಾಗಿದೆ. 

ವರ್ಷಂಪ್ರತಿ ಮಾನಸ ಸರೋವರ ಯಾತ್ರೆಯನ್ನು ವಿದೇಶ ವ್ಯವಹಾರಗಳ ಸಚಿವಾಲಯ ಜೂನ್‌ನಿಂದ ಸೆಪ್ಟಂಬರ್‌ ವರೆಗಿನ ಅವಧಿಯಲ್ಲಿ ಚೀನ ಸರಕಾರದ ಸಹಯೋಗದಲ್ಲಿ ಉತ್ತರಾಖಂಡದ ಲಿಪುಲೇಖ್‌ ಪಾಸ್‌ ಮತ್ತು ಸಿಕ್ಕಿಂ ನ ನಾಥು ಲಾ ಪಾಸ್‌ ಮೂಲಕ ಕೈಗೊಳ್ಳುವುದಕ್ಕೆ ವ್ಯವಸ್ಥೆ ಮಾಡುತ್ತದೆ.

Advertisement

2015ರಲ್ಲಿ ಚೀನ ನಾಥು ಲಾ ಪಾಸ್‌ ಮಾರ್ಗವನ್ನು ತೆರೆದಿತ್ತು. ನಾಥು ಲಾ ಪಾಸ್‌ ಮೂಲಕವಾಗಿ ಬರುವ ಯಾತ್ರಿಕರನ್ನು ಚೀನದ ಸಾರಿಗೆ ವ್ಯವಸ್ಥೆ ಕೈಲಾಸ್‌ ಮಾನಸ ಸರೋವರಕ್ಕೆ ಒಯ್ಯುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next