Advertisement

ಚೀನಾ: ಮತ್ತೆ ಹೊಸ ಸೋಂಕಿತ ಪ್ರಕರಣಗಳು ಪತ್ತೆ

04:09 PM Apr 15, 2020 | sudhir |

ಚೀನಾ: ರಷ್ಯಾದ ಗಡಿ ಭಾಗವಾದ ಚೀನಾದ ಈಶಾನ್ಯ ಹೀಲಾಂಗ್‌ ಜಿಯಾಂಗ್‌ ಪ್ರಾಂತ್ಯವು ಆರು ವಾರಗಳಲ್ಲಿ ಅತೀ ಹೆಚ್ಚು ಕೋವಿಡ್‌ 19 ಸೋಂಕಿತ ಪ್ರಕರಣಗಳನ್ನು ಹೊಂದಿರುವುದು ಸಾಬೀತಾಗಿದೆ.

Advertisement

ಗಡಿಯಿಂದ ಒಳ ಬಂದಿರುವ ಜನರಿಂದ ಪ್ರಕರಣ ಹೆಚ್ಚಾಗಿದ್ದು, ಮತ್ತೂಮ್ಮೆ ದೇಶ ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ ಎಂದು ಚೀನಾ ಆತಂಕ ವ್ಯಕ್ತಪಡಿಸಿದೆ.

ಚೀನಾದ ಭೂಭಾಗದಲ್ಲಿ ಭಾನುವಾರ ಒಟ್ಟು 108 ಹೊಸ ಪ್ರಕರಣಗಳು ವರದಿಯಾಗಿದ್ದು, ಮಾರ್ಚ್‌ 5 ರ ರಂದು 143 ಸೋಂಕುಗಳು ವರದಿಯಾದ ಬಳಿಕ ಇದೇ ಅತೀ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಈ ಎಲ್ಲಾ ಪ್ರಕರಣಗಳು ರಷ್ಯಾದಿಂದ ಹೀಲಾಂಗ್‌ ಜಿ ಯಾಂಗ್‌ ಪ್ರಾಂತ್ಯಕ್ಕೆ ಪ್ರವೇಶಿಸಿದ 49 ಮಂದಿ ಚೀನಾ ಪ್ರಜೆಗಳು. ಇವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಚೀನಾದಾದ್ಯಂತ ಫೆಬ್ರವರಿಯಲ್ಲಿ ಸೋಂಕು ಹರಡುವಿಕೆ ಕಡಿಮೆಯಾಗಿದ್ದರೂ, ಸೋಂಕಿತರ ಒಳ ಹರಿವಿನಿಂದ ಮತ್ತಷ್ಟು ಪ್ರಕರಣಗಳು ಹೆಚ್ಚಿವೆ. ರಷ್ಯಾದ ಗಡಿ ಸಮೀಪದ ಚೀನಾ ನಗರಗಳು ಗಡಿಯಲ್ಲಿ ಭದ್ರತೆ ಹೆಚ್ಚಿಸಿವೆ ಹಾಗೂ ಸೋಂಕಿತ ರೋಗಿಗಳು ಬಾರದಂತೆ ಕಠಿಣವಾದ ನಿರ್ಬಂಧಗಳನ್ನು ವಿಧಿಸುತ್ತಿವೆ. ವಿದೇಶದಿಂದ ಬರುವ ಎಲ್ಲರಿಗೂ ಕ್ವಾರಂಟೇನ್‌ ಹಾಗೂ ಇತರೆ ಪರೀಕ್ಷೆಗಳನ್ನು ಕಡ್ಡಾಯಗೊಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next