Advertisement

ಮಾಲ್ದೀವ್ಸ್‌ನಲ್ಲಿ ಚೀನ ಹಸ್ತಕ್ಷೇಪ: ಮಾಜಿ ವಿದೇಶ ಸಚಿವ

12:30 PM Mar 16, 2018 | udayavani editorial |

ವಾಷಿಂಗ್ಟನ್‌ : ಚೀನ ಮಾಲ್ದೀವ್ಸ್‌ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದ್ದು  ಭಾರೀ ಪ್ರಮಾಣದ ಭೂಕಬಳಿಕೆಯಲ್ಲಿ ನಿರತವಾಗಿದೆ. ಈ ವಿದ್ಯಮಾನ ಭಾರತ ಮಾತ್ರವಲ್ಲದೆ ಇಡಿಯ ಹಿಂದೂ ಮಹಾಸಾಗರ ಪ್ರದೇಶದ ಭದ್ರತೆಗೆ ಅಪಾಯಕಾರಿಯಾಗಿದೆ. ಮಾಲ್ದೀವ್‌ ಈಗ ಪೂರ್ಣ ಪ್ರಮಾಣದ ಸರ್ವಾಧಿಕಾರಿ ದೇಶವಾಗಿ ಪರಿವರ್ತಿತವಾಗಿದೆ ಎಂದು ಮಾಲ್ದೀವ್ಸ್‌ ನ ಮಾಜಿ ವಿದೇಶ ಸಚಿವ ಮತ್ತು ವಿರೋಧ ಪಕ್ಷ ಸಚಿವ ಹೇಳಿದ್ದಾರೆ. 

Advertisement

ಅಹ್ಮದ್‌ ನಸೀಮ್‌ ಅವರು ಪ್ರಕೃತ ಅಮೆರಿಕದಲ್ಲಿದ್ದು ಮಾಲ್ದೀವ್ಸ್‌ನ ರಾಜಕೀಯ ವಿಪ್ಲವ, ಚೀನ ಹಸ್ತಕ್ಷೇಪ, ಭೂಕಬಳಿಕೆ ಇತ್ಯಾದಿ ವಿದ್ಯಮಾನಗಳ ಬಗ್ಗೆ ಟ್ರಂಪ್‌ ಆಡಳಿತೆಯ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡುತ್ತಿದ್ದಾರೆ. 

ಚೀನ ತಾನು ಮಾಲ್ದೀವ್ಸ್‌ ಆಂತರಿಕ ವ್ಯವಹಾರಗಳಲ್ಲಿ  ಹಸ್ತಕ್ಷೇಪ ಮಾಡುತ್ತಿಲ್ಲ ಎಂದು ಹೇಳುತ್ತಿದೆ. ಆದರೆ ವಾಸ್ತವವಾಗಿ ಅದು ಅದನ್ನೇ ಮಾಡುತ್ತಿದೆ. ಜತೆಗೆ ಮಾಲ್ದೀವ್ಸ್‌ ಉನ್ನತ ಅಧಿಕಾರಿಗಳನ್ನು ಭ್ರಷ್ಟರನ್ನಾಗಿ ಮಾಡುತ್ತಿದೆ ಮತ್ತು ಸರ್ವಾಧಿಕಾರಿ ಅಧ್ಯಕ್ಷರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ವಿರೋಧಿಗಳನ್ನು ದಮನಿಸುವಂತೆ ಪ್ರೋತ್ಸಾಹಿಸುತ್ತಿದೆ ಎಂದು ಅಹ್ಮದ್‌ ನಸೀಮ್‌ ತಿಳಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next