Advertisement

China Masters 2023; ಸಾತ್ವಿಕ್‌-ಚಿರಾಗ್‌ ಜೋಡಿ ಪರಾಭವ

11:27 PM Nov 26, 2023 | Team Udayavani |

ಶೆಂಜೆನ್‌ (ಚೀನ): ಅಗ್ರ ಶ್ರೇಯಾಂಕಿತ ಭಾರತೀಯ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ-ಚಿರಾಗ್‌ ಶೆಟ್ಟಿ “ಚೀನ ಮಾಸ್ಟರ್’ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಪುರುಷರ ಡಬಲ್ಸ್‌ ಫೈನಲ್‌ನಲ್ಲಿ ಪರಾಭವಗೊಂಡು ನಿರಾಸೆ ಅನುಭವಿಸಿದರು. ಆತಿಥೇಯ ಚೀನದ ನಂ.1 ರ್‍ಯಾಂಕಿಂಗ್‌ನ ಲಿಯಾಂಗ್‌ ವೀ ಕೆಂಗ್‌-ವಾಂಗ್‌ ಚಾಂಗ್‌ ವಿರುದ್ಧ ದಿಟ್ಟ ಹೋರಾಟ ನೀಡಿಯೂ ಗೆಲುವು ಕಾಣಲು ವಿಫ‌ಲರಾದರು.

Advertisement

ಇದು 3 ಗೇಮ್‌ಗಳ ದಿಟ್ಟ ಹೋರಾಟವಾಗಿತ್ತು. ಮೂರೂ ಗೇಮ್‌ ಸಣ್ಣ ಅಂತರದ ಫ‌ಲಿತಾಂಶವನ್ನು ಕಂಡಿತು. 21-19, 18-21, 21-19 ಅಂತರದಿಂದ ವೀ ಕೆಂಗ್‌-ಚಾಂಗ್‌ ಗೆಲುವು ಸಾಧಿಸಿದರು. ಒಂದು ಗಂಟೆ, 11 ನಿಮಿಷಗಳ ತನಕ ಇವರ ಹೋರಾಟ ಸಾಗಿತು.

ಭಾರತದ ಈ ಚಾಂಪಿಯನ್‌ ಶಟ್ಲರ್ ಹಾಂಗ್‌ಝೂ ಏಷ್ಯಾಡ್‌ನ‌ಲ್ಲಿ ಚಿನ್ನದ ಪದಕ ಜಯಿಸಿದ ಸಾಧನೆಗೈದಿದ್ದರು. ಆದರೆ ಪ್ರಸಕ್ತ ಋತುವಿನ ದ್ವಿತೀಯ “ಬಿಡಬ್ಲ್ಯುಎಫ್ ಸೂಪರ್‌ 750′ ಪ್ರಶಸ್ತಿ ಗೆಲ್ಲಲು ವಿಫ‌ಲರಾದರು.

Advertisement

Udayavani is now on Telegram. Click here to join our channel and stay updated with the latest news.

Next