Advertisement
ಚೀನ: ಚೀನದ ಮುಖ್ಯ ಉದ್ಯಮಗಳ ಕೇಂದ್ರ ವುಹಾನ್ ನಗರವು 76 ದಿನಗಳಲ್ಲಿ ಮೊದಲ ಬಾರಿಗೆ ತನ್ನ ಹೆದ್ದಾರಿಯನ್ನು ಮುಕ್ತಗೊಳಿಸಿದೆ. ಇದು ಕೋವಿಡ್-19ನಿಂದ ಮುಕ್ತವಾಗುತ್ತಿರುವುದರ ಸೂಚನೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.
Related Articles
Advertisement
ಮೂರು ತಿಂಗಳಲ್ಲಿ ಕೋವಿಡ್-19 ಸೋಂಕು 184 ದೇಶ ಮತ್ತು ಪ್ರಾಂತ್ಯಗಳನ್ನು ತಲುಪಿದ್ದು, 1.6 ದಶಲಕ್ಷ ಜನರಿಗೆ ಸೋಂಕು ತಗುಲಿದೆ ಮತ್ತು ಅವರಲ್ಲಿ 95,000 ಜನಸಾವನ್ನಪ್ಪಿದ್ದಾರೆ. ಚೀನದಲ್ಲಿ 82,000 ಪ್ರಕರಣಗಳಲ್ಲಿ 3,000 ಜನರು ಸಾವನ್ನಪ್ಪಿದ್ದಾರೆ. ಈಗ ಚೀನ ಐದನೇ ಸ್ಥಾನದಲ್ಲಿದೆ.
ಇದೀಗ ಯುರೋಪ್ ಈ ಸೋಂಕಿನ ಕೇಂದ್ರ ಬಿಂದುವಾಗಿದ್ದು, 4,60,000 ಪ್ರಕರಣಗಳಲ್ಲಿ 16,000 ಜನರು ಸಾವನ್ನಪ್ಪಿದ್ದಾರೆ ಮತ್ತು ಯುನೈಟೆಡ್ ಸ್ಟೇಟ್ಸ್ ವರದಿಯ ಪ್ರಕಾರ ಮುಂದಿನ ಸ್ಥಾನದಲ್ಲಿದೆ.
ಎಲ್ಲ ದೇಶಗಳು ವೈರಸ್ ಮುಕ್ತ ಎಂದು ಹೇಳುವವರೆಗೆ ಸೋಂಕು ಮುಗಿದಿದೆ ಎಂದು ಹೇಳಲಾಗದು ಎಂದು ಹುವಾಂಗ್ ಹೇಳಿದರು. ಇವೆಲ್ಲಾ ಪ್ರಪಂಚಕ್ಕೆ ದೀರ್ಘಕಾಲದ ಲಾಕ್ ಡೌನ್‌ಅನ್ನು ಸೂಚಿಸುತ್ತದೆ.
ಸೋಂಕು ಹೆಚ್ಚಾಗುವುದು ಮತ್ತು ಕಡಿಮೆಯಾಗುವುದರಿದ ಸರಕಾರದ ನಿಯಂತ್ರಣಗಳು ಇನ್ನಷ್ಟು ಬಿಗಿಗೊಳ್ಳುತ್ತವೆ. ಲಸಿಕೆ ದೊರೆಯುವವರೆಗೆ ಮತ್ತು ರೋಗನಿರೋಧಕ ಶಕ್ತಿ ಜನರಲ್ಲಿ ಹೆಚ್ಚುವವರೆಗೂ ಈ ನಿರ್ಬಂಧ ಹೀಗೆ ಉಳಿಯಬಹುದೆಂದು ಇಲ್ಲವಾದಲ್ಲಿ ಈ ಸೋಂಕು ಇನ್ನಷ್ಟು ಹೆಚ್ಚುತ್ತದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.
ಸಿಂಗಾಪುರ ಆರಂಭದಲ್ಲಿ ಲಾಕ್‌ಡೌನ್ ಅನ್ನು ಅನುಸರಿಸದೇ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಇಲ್ಲಿನ ನಗರದಲ್ಲಿ ಸೋಂಕುಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕಣ್ಗಾವಲು ಮತ್ತು ಸಂಪರ್ಕ ತಡೆಯನ್ನು ಅವಲಂಬಿಸಿದೆ. ಆದರೆ ಹಲವು ವಲಸೆ ಕಾರ್ಮಿಕರಿಂದ ಸೋಂಕಿನ ಪ್ರಕರಣ ಹೆಚ್ಚಿದ್ದರಿಂದ ಕಳೆದ ವಾರ ಶಾಲೆ ಮತ್ತು ಕೆಲಸದ ಸ್ಥಳಗಳನ್ನು ಮುಚ್ಚಿಸಿತು. ಹತ್ತಿರದ ಹಾಂಗ್ ಕಾಂಗ್‌ನಲ್ಲಿ ಅಧಿಕಾರಿಗಳು ಚೀನ ಭೂಭಾಗದೊದಿಗೆ ಗಡಿ ನಿಯಂತ್ರಣವನ್ನು ಬಿಗಿಗೊಳಿಸಿದರು. 5,000 ಪ್ರಕರಣಗಳನ್ನು ಹೊಂದಿರುವ ಜಪಾನ್ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.
ಕೋವಿಡ್-19ನ ತಾಪಮಾನದ ಅಧ್ಯಯನ ಮಾಡುತ್ತಿರುವ ನಿಕೋಲ್ಸ್ “ವೈರಸ್ ಆಖಕ್ಕೆ ಸೂಕ್ಷ್ಮವಾಗಿದ್ದು, ಶೀತ ವಾತಾವರಣಕ್ಕೆ ಬದುಕುಳಿಯುತ್ತದೆ ಮತ್ತು ಉತ್ತಮವಾಗಿ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಕೆಲವು ತಿಂಗಳುಗಳವರೆಗೆ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿರ್ಲಕ್ಷಿಸಬೇಡಿ ಎಂದು ಅವರು ಹೇಳಿದರು.