Advertisement

ಭಾರತದ ರಕ್ಷಣೆಗೆ ಚೀನ ಮಾರಕ? ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರದ ಅನುದಾನ ಹೆಚ್ಚಳ

11:20 PM Mar 05, 2022 | Team Udayavani |

ಬೀಜಿಂಗ್‌/ನವದೆಹಲಿ: ಅತ್ತ ಉಕ್ರೇನ್‌ಗೆ ರಷ್ಯಾ ಮಾರಕವಾಗಿರುವಂತೆಯೇ ಇತ್ತ ಚೀನ ತನ್ನ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದೆ.

Advertisement

ಇತ್ತೀಚಿನ ವರ್ಷಗಳಲ್ಲಿ ಚೀನ, ಅಮೆರಿಕ, ಭಾರತ ಸೇರಿದಂತೆ ವಿವಿಧ ದೇಶಗಳೊಂದಿಗೆ ಶಸ್ತ್ರಾಸ್ತ್ರಗಳ ರೇಸ್‌ ನಡೆಸುತ್ತಿದೆ. ಇಡೀ ಜಗತ್ತಿನಲ್ಲೇ ಅಮೆರಿಕ ರಕ್ಷಣಾ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುತ್ತಿದೆ. ಅಮೆರಿಕ ಬಿಟ್ಟರೆ ಚೀನವೇ ಎರಡನೇ ಸ್ಥಾನದಲ್ಲಿದೆ.

ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಚೀನದ ಬಜೆಟ್‌ನಲ್ಲಿ ರಕ್ಷಣಾ ವಲಯಕ್ಕೆ ನೀಡಲಾಗಿದ್ದ ಒಟ್ಟಾರೆ ಅನುದಾನದಲ್ಲಿ ಈ ಬಾರಿ ಶೇ.7ರಷ್ಟು ಏರಿಕೆ ಮಾಡಲಾಗಿದೆ. ಅಂದರೆ, ಪ್ರಸಕ್ತ ವರ್ಷ 230 ಬಿಲಿಯನ್‌ ಡಾಲರ್‌ ಅನುದಾನ ನೀಡಲಾಗಿದೆ. ಕಳೆದ ವರ್ಷ 209 ಬಿಲಿಯನ್‌ ಡಾಲರ್‌ ಅನುದಾನ ನೀಡಲಾಗಿತ್ತು. ಭಾರತಕ್ಕೆ ಹೋಲಿಕೆ ಮಾಡಿದರೆ, ಮೂರರಷ್ಟು ಹೆಚ್ಚಳವಾಗಿದೆ.

ಇಂಡೋ-ಫೆಸಿಫಿಕ್‌ ಪ್ರದೇಶದಲ್ಲಿ ಚೀನಾ ತನ್ನ ಉಪಟಳ ಹೆಚ್ಚಳ ಮಾಡುತ್ತಿದ್ದು, ಇದಕ್ಕೆ ಪ್ರತಿಯಾಗಿ ಅಮೆರಿಕ, ಜಪಾನ್‌, ಆಸ್ಟ್ರೇಲಿಯ ಮತ್ತು ಭಾರತ ಸೇರಿ ಕ್ವಾಡ್‌ ಗುಂಪು ಮಾಡಿಕೊಂಡಿವೆ. ಯಾವುದೇ ಕಾರಣಕ್ಕೂ ಈ ಪ್ರದೇಶದಲ್ಲಿ ಚೀನ ಕೈ ಮೇಲಾಗದಂತೆ ನೋಡಿಕೊಳ್ಳುವುದು ಈ ಕ್ವಾಡ್‌ನ‌ ಉದ್ದೇಶ. ಹೀಗಾಗಿ, ಚೀನ ಕೂಡ ಈ ನಾಲ್ಕು ದೇಶಗಳು ಒಟ್ಟಾಗಿ ಬಂದರೆ ಎಂಬ ಆತಂಕದಿಂದ ತನ್ನ ರಕ್ಷಣಾ ಬಜೆಟ್‌ ಅನುದಾನವನ್ನು ಹೆಚ್ಚಳ ಮಾಡಿಕೊಂಡೇ ಬರುತ್ತಿದೆ ಎಂಬುದು ರಕ್ಷಣಾ ತಜ್ಞರ ಅಭಿಪ್ರಾಯ.

ಭಾರತಕ್ಕೆಷ್ಟು ಅಪಾಯ?
ಚೀನಗೆ ಹೋಲಿಕೆ ಮಾಡಿದರೆ, ಭಾರತದಲ್ಲಿ ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನವನ್ನೇನೂ ನೀಡುತ್ತಿಲ್ಲ. ಅಂದರೆ, ಪ್ರಸಕ್ತ ವರ್ಷ ಚೀನಾ ರಕ್ಷಣಾ ವಲಯಕ್ಕೆ 230 ಬಿಲಿಯನ್‌ ಡಾಲರ್‌ ನೀಡಿದ್ದರೆ, ಭಾರತದಲ್ಲಿ 70 ಬಿಲಿಯನ್‌ ಡಾಲರ್‌ ಅನುದಾನ ನೀಡಲಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಇದು ಶೇ.9ರಷ್ಟು ಹೆಚ್ಚಾಗಿದೆ.

Advertisement

ಆದರೆ, ಇದೇ ಹಣದಲ್ಲಿ ಭಾರತ, ತನಗೆ ಬೇಕಾದ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ನಿರ್ಮಾಣ ಮಾಡುತ್ತಿದ್ದರೆ, ಇನ್ನೂ ಕೆಲವು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಫ್ರಾನ್ಸ್‌, ರಷ್ಯಾದಿಂದ ತರಿಸಿಕೊಳ್ಳುತ್ತಿದೆ. ಜತೆಗೆ, ಹೆಚ್ಚಿನ ಹಣವನ್ನು ರಕ್ಷಣಾ ಸಂಶೋಧನೆಗಾಗಿಯೂ ಮೀಸಲಾಗಿ ಇರಿಸುತ್ತಿದೆ. ಹೀಗಾಗಿ, ಚೀನ ತನ್ನ ಬಜೆಟ್‌ ಅನ್ನು ಹೆಚ್ಚು ಮಾಡಿಕೊಂಡಿದ್ದರೂ, ಭಾರತಕ್ಕೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆಗಳಿಲ್ಲ.

ಅತಿ ಹೆಚ್ಚು ನೀಡುವ ದೇಶ ಯಾವುದು?

  1. ಅಮೆರಿಕ – 750 ಬಿಲಿಯನ್‌ ಡಾಲರ್‌
  2. ಚೀನಾ – 230 ಬಿಲಿಯನ್‌ ಡಾಲರ್‌
  3. ಭಾರತ – 70 ಬಿಲಿಯನ್‌ ಡಾಲರ್‌
  4. ಸೌದಿ ಅರೆಬಿಯಾ – 67.6 ಬಿಲಿಯನ್‌ ಡಾಲರ್‌
  5. ಇಂಗ್ಲೆಂಡ್‌ – 55.1 ಬಿಲಿಯನ್‌ ಡಾಲರ್‌

 

Advertisement

Udayavani is now on Telegram. Click here to join our channel and stay updated with the latest news.

Next