Advertisement

ಮಲಬಾರ್‌ ನೌಕಾ ತಾಲೀಮಿಗೆ ಚೀನ ಗರಂ

09:54 AM Jul 08, 2017 | |

ಹೊಸದಿಲ್ಲಿ: ಸಿಕ್ಕಿಂ ಗಡಿಯಲ್ಲಿನ ಉದ್ವಿಗ್ನತೆಯ ನಡುವೆಯೇ ರವಿವಾರದಿಂದ ಬಂಗಾಲಕೊಲ್ಲಿ ಸಾಗರದಲ್ಲಿ ಆರಂಭಗೊಳ್ಳಲಿರುವ ಮಲಬಾರ್‌ ನೌಕಾ ತಾಲೀಮಿಗೆ ಭಾರತ ತನ್ನ ಅತಿ ದೊಡ್ಡ ನೌಕಾ ಪಡೆ ಹಡಗು, ಯುದ್ಧ ವಿಮಾನ ವಾಹಕ ನೌಕೆ ಐಎನ್‌ಎಸ್‌ ವಿಕ್ರಮಾದಿತ್ಯವನ್ನು ಕಳುಹಿಸಿದೆ. 

Advertisement

ಅಮೆರಿಕ, ಜಪಾನ್‌, ಭಾರತದ ಜಂಟಿ ಸಮರಾಭ್ಯಾಸ ಇದಾಗಿದ್ದು, ಸಹಜವಾಗಿಯೇ ಚೀನಕ್ಕೆ ಇದು ತೀವ್ರ ಇರುಸುಮುರಸು ತಂದೊಡ್ಡಿದೆ. ಈ ಬಗ್ಗೆ ಪ್ರತಿಕ್ರಿಯೆಯನ್ನೂ ಚೀನ ನೀಡಿದ್ದು, ಈ ನೌಕಾ ಸಮರಾಭ್ಯಾಸ ಮೂರನೇ ರಾಷ್ಟ್ರವೊಂದರ ವಿರುದ್ಧವಲ್ಲ ಎಂದು ಭಾವಿಸುತ್ತೇವೆ ಎಂದು ಹೇಳಿದೆ.

ಚೀನ ಸರಕಾರದ ವಕ್ತಾರರು ಮಾತನಾಡಿ, ಇಂತಹ ಸಹಕಾರ, ನೌಕಾ ಸಮರಾಭ್ಯಾಸ ಮೂರನೇ ರಾಷ್ಟ್ರದ ವಿರುದ್ಧ ಅಲ್ಲ ಎಂದು ಭಾವಿಸುತ್ತೇವೆ. ಒಂದು ವೇಳೆ ಇದರಲ್ಲಿ ಬೇರೆ ಕಾರಣಗಳಿದ್ದರೆ, ಅದು ಪ್ರಾದೇಶಿಕ ಭದ್ರತೆ ಮತ್ತು ಶಾಂತಿಗೆ ಸಮಸ್ಯೆ ತಂದೊಡ್ಡುತ್ತದೆ’ ಎಂದು ಹೇಳಿದ್ದಾರೆ. ಈ ಮೂಲಕ ಸಿಕ್ಕಿಂನಲ್ಲಿ ಪಟ್ಟು ಬಿಡದೆ ಸೇನೆ ನಿಲ್ಲಿಸಿದ ಭಾರತಕ್ಕೆ, ದಕ್ಷಿಣ ಚೀನ ಸಮುದ್ರದಲ್ಲಿ ಚೀನ ವಿರುದ್ಧ ಹಲ್ಲು ಕಡಿಯುತ್ತಿರುವ ಜಪಾನ್‌, ಅಮೆರಿಕಕ್ಕೆ ಪರೋಕ್ಷ ಸಂದೇಶವನ್ನು ಚೀನ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next