ನವದೆಹಲಿ: ವಿಷಮ ಪರಿಸ್ಥಿತಿಯಲ್ಲಿರುವ ಬಿಬಿಸಿಗೆ ಹಣಕಾಸಿನ ಅಗತ್ಯವಿದ್ದು, ಅದನ್ನು ಚೀನಾ ಮೂಲದ ಹುವಾವೈಯಿಂದ ಪಡೆದುಕೊಳ್ಳುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ಸಂಸದ, ಹಿರಿಯ ವಕೀಲ ಮಹೇಶ್ ಜೇಠ್ಮಲಾನಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಪೋಷಕಾಂಶ ಹಾಗೂ ಖನಿಜಾಂಶಗಳ ಆಗರ: ನಿತ್ಯ ಸಂಜೀವಿನಿ ಈ ಎಳನೀರು…
ಪ್ರಧಾನಿ ನರೇಂದ್ರ ಮೋದಿ ಅವರ ಕುರಿತ ಬಿಬಿಸಿಯ ವಿವಾದ ಸಾಕ್ಷ್ಯಚಿತ್ರದ ಪ್ರಸಾರದ ಹಿನ್ನೆಲೆಯಲ್ಲಿ ರಾಜ್ಯಸಭಾ ಸದಸ್ಯರಾಗಿರುವ ಜೇಠ್ಮಲಾನಿ ಬಿಬಿಸಿ ವಿರುದ್ಧ ವಾಗ್ದಾಳಿ ನಡೆಸಿರುವುದಾಗಿ ವರದಿಯಾಗಿದೆ.
“ಬಿಬಿಸಿ ಯಾಕೆ ಭಾರತ ವಿರೋಧಿಯಾಗಿದೆ? ಯಾಕೆಂದರೆ ವಿಷಮ ಸ್ಥಿತಿಯಲ್ಲಿರುವ ಬಿಬಿಸಿಗೆ ಹಣಕಾಸಿನ ಅಗತ್ಯವಿದ್ದು, ಅದನ್ನು ಚೀನಾ ಮೂಲದ ಹುವಾವೈಯಿಂದ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಬಿಬಿಸಿ ಚೀನಾದ ಕಾರ್ಯಸೂಚಿಯಂತೆ ಕೆಲಸ ಮಾಡುತ್ತಿದೆ. ಇದೊಂದು ನಗದು-ಪ್ರಚಾರದ ಒಪ್ಪಂದವಾಗಿದೆ ಎಂದ ಜೇಠ್ಮಲಾನಿ ಬಿಬಿಸಿ ಮಾರಾಟಕ್ಕಿದೆ ಎಂದು ತೀಕ್ಷ್ಣವಾಗಿ ಟೀಕಿಸಿದ್ದಾರೆ.
Related Articles
ಬಿಜೆಪಿ ರಾಜ್ಯಸಭಾ ಸದಸ್ಯ ಜೇಠ್ಮಲಾನಿ ಅವರು, 2022ರ ಆಗಸ್ಟ್ ನಲ್ಲಿ ಬ್ರಿಟನ್ ನಿಯತಕಾಲಿಕೆ ದಿ ಸ್ಪೆಕ್ಟೇಟರ್ ನಲ್ಲಿ ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ಹಂಚಿಕೊಂಡಿದ್ದು, ಇದು ಬಿಬಿಸಿ ಹುವಾವೈಯಿಂದ ಹಣವನ್ನು ಪಡೆದುಕೊಂಡಿರುವುದಕ್ಕೆ ಪುರಾವೆಯಾಗಿದೆ ಎಂದು ತಿಳಿಸಿದ್ದಾರೆ.