Advertisement

ವಿಶ್ವದಲ್ಲೇ ಪ್ರಥಮ: ಚೀನದಿಂದ ಸ್ಟಾರ್‌ ವಾರ್‌ ಗನ್‌, 1 ಕಿ.ಮೀ.ಗುರಿ

04:23 PM Jul 02, 2018 | udayavani editorial |

ಬೀಜಿಂಗ್‌:  ಮಿಲಿಟರಿ ದೈತ್ಯ ಶಕ್ತಿಯನ್ನು ಹೊಂದಿರುವ ಚೀನ ಇದೀಗ ವಿಶ್ವದಲ್ಲೇ ಸರ್ವ ಪ್ರಥಮವಾಗಿ ಲೇಸರ್‌ ಬೀಮ್‌ “ಸ್ಟಾರ್‌ ವಾರ್‌ ಗನ್‌” ಗಳನ್ನು ಅಭಿವೃದ್ಧಿ ಪಡಿಸಿದೆ. 

Advertisement

ಝಡ್‌ಕೆಝಡ್‌ಎಂ-500 ಎಂಬ ಸಂಕೇತ ನಾಮವನ್ನು ಹೊಂದಿರವ ಈ ಸ್ಟಾರ್‌ ವಾರ್‌ ಗನ್‌ ಒಂದು ಕಿ.ಮೀ. ವ್ಯಾಪ್ತಿಯಲ್ಲಿ ತನ್ನ ಗುರಿಯನ್ನು ಕ್ಷಣಾರ್ಧದಲ್ಲಿ ಭೇದಿಸಬಲ್ಲುದು. 

ಎನರ್ಜಿ ಬೀಮ್‌ ಬಳಸುವ ಈ ಗನ್‌ ಫೈರಿಂಗ್‌ ಗೆ ಗುರಿಯಗುವ ವ್ಯಕ್ತಿಯು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾಗುತ್ತಾನೆ; ಆತನ ಚರ್ಮ, ಜೀವಕೋಶಗಳು ಭಸ್ಮವಾಗಿ ಹೋಗುತ್ತವೆ ಎಂದು ವರದಿಗಳು ತಿಳಿಸಿವೆ.

ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌’ ವರದಿಯ ಪ್ರಕಾರ ಈ ಸ್ಟಾರ್‌ ವಾರ್‌ ಗನ್‌ ಎನ್ನುವುದು ಲೇಸರ್‌ ಅಸಾಲ್ಟ್ ರೈಫ‌ಲ್‌ ಆಗಿದೆ.  ಸ್ಟಾರ್‌ ವಾರ್‌ ಸರಣಿ ಚಲನಚಿತ್ರಗಳಲ್ಲಿ ಈ ಬಗೆಯ ಲೇಸರ್‌ ಬೀಮ್‌ ಗನ್‌ಗಳನ್ನು ವೈಜ್ಞಾನಿಕ ಪರಿಕಲ್ಪನೆಯ ರೂಪದಲ್ಲಿ ತೋರಿಸಲಾಗಿತ್ತು. 

ಇದೀಗ ಚೀನ ಈ ಬಗೆಯ ಲೇಸರ್‌ ಬೀಮ್‌ ಗನ್‌ಗಳನ್ನು ತನ್ನ ಸಂಶೋಧನೆಯ ಮೂಲಕ ಸಾಕ್ಷಾತ್ಕರಿಸಿದೆ. ವಿಶ್ವದ ಸರ್ವಪ್ರಥಮ ಸ್ಟಾರ್‌ ವಾರ್‌ ಗನ್‌ ವಿನ್ಯಾಸಗೊಳಿಸಿ ಪರಿಚಯಿಸಿರುವ ಮೊದಲ ದೇಶ ಎಂಬ (ಅಪ) ಖ್ಯಾತಿಗೆ ಪಾತ್ರವಾಗಿದೆ. 

Advertisement

ಎಕೆ 47 ಗನ್‌ಗಳನ್ನು ಬಹುವಾಗಿ ಹೋಲುವ ಈ ಲೇಸರ್‌ ಬೀಮ್‌ ಗನ್‌ಗಳು ಸುಮಾರು ಮೂರು ಕಿಲೋ ತೂಗುತ್ತವೆ. ಆದರೆ ಪರಿಣಾಮದಲ್ಲಿ ಈ ಲೇಸರ್‌ ಬೀಮ್‌ ಗನ್‌ಗಳನ್ನು ಮೀರಿಸುವ ಗನ್‌ಗಳು ವಿಶ್ವದಲ್ಲಿ ಎಲ್ಲಿಯೂ, ಯಾವ ದೇಶದ ಬಳಿಯೂ ಈ ವರೆಗೆ ಇಲ್ಲ. 

ಈ ಲೇಸರ್‌ ಬೀಮ್‌ ಗನ್‌ ಮೂಲಕ ಫೈರಿಂಗ್‌ ಮಾಡಿದಾಗ ಸಾಮಾನ್ಯ ಕಣ್ಣಿಗೆ ಅದರಿಂದ ಹೊರಡುವ ಜ್ವಲನ ಶಕ್ತಿಯು ಕಾಣುವುದೇ ಇಲ್ಲ. 

ಒಂದು ಬಾರಿಗೆ ಎರಡು ಸೆಕೆಂಡುಗಳ ಕಾಲ ಫೈರಿಂಗ್‌ ಮಾಡಬಲ್ಲ ಈ ಲೇಸರ್‌ ಬೀಮ್‌ ಗನ್‌ನಿಂದ 1,000 ಸಲ ಫೈರಿಂಗ್‌ ಮಾಡಬಹುದಾಗಿದೆ. ಈ ಗನ್‌ಗಳನ್ನು ಕಾರು, ಬೋಟುಗಳು, ವಿಮಾನಗಳ ಮೇಲ್ಭಾಗಕ್ಕೆ ಜೋಡಿಸಿ ವೈವಿಧ್ಯಮಯ ಕಾರ್ಯಾಚರಣೆಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಬಳಸಬಹುದಾಗಿದೆ ಎಂದು ಮೂಲಗಳು ತಿಳಿಸಿವೆ. 

Advertisement

Udayavani is now on Telegram. Click here to join our channel and stay updated with the latest news.

Next