Advertisement

ಕೊರೋನಾವೈರಸ್‌ : ಎರಡು ನಗರಗಳು ಸಂಪೂರ್ಣ ಸ್ತಬ್ಧ

06:31 PM Mar 20, 2020 | Hari Prasad |

ಬೀಜಿಂಗ್‌: ಸಾರ್ಸ್‌ ಮಾದರಿಯ ಕೊರೋನಾವೈರಸ್‌ ಚೀನವನ್ನು ಕಂಗೆಡಿಸಿದ್ದು, ಇಲ್ಲಿನ 5 ಪ್ರಮುಖ ನಗರಗಳು ಸಂಪೂರ್ಣವಾಗಿ ಬೇರೆ ನಗರಗಳಿಂದ ಸಂಪರ್ಕ ಕಡಿದುಕೊಂಡಿದೆ. ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ವುಹಾನ್‌, ಹುವಾಂಗಾಂಗ್‌ ಸಹಿತ 5 ನಗರಗಳನ್ನು ಸಂಪೂರ್ಣ ಲಾಕ್‌ಡೌನ್‌ ಮಾಡಲಾಗಿದೆ.

Advertisement

ಇಲ್ಲಿಂದ ಬರುವ ಹಾಗೂ ಇಲ್ಲಿಂದ ಹೋಗುವ ಎಲ್ಲ ವಿಮಾನಗಳು, ರೈಲುಗಳ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ತುರ್ತು ಸ್ಥಿತಿ ಹೊರತುಪಡಿಸಿ ಯಾರೂ ನಗರ ಬಿಟ್ಟು ತೆರಳದಂತೆ ಸೂಚನೆ ನೀಡಲಾಗಿದೆ. ಇಲ್ಲಿನ ಎಲ್ಲ ಸಿನೆಮಾ ಹಾಲ್‌ಗ‌ಳು, ಇಂಟರ್ನೆಟ್‌ ಕೆಫೆಗಳು, ಮಾರುಕಟ್ಟೆಗಳನ್ನು ಮುಚ್ಚಲಾಗಿದೆ. ಹೀಗಾಗಿ, ಈ ಎರಡೂ ನಗರಗಳಲ್ಲಿ ನೀರವ ಆವರಿಸಿದೆ. ಚೀನದ ಈ ನಿರ್ಧಾರವನ್ನು ವಿಶ್ವ ಆರೋಗ್ಯ ಸಂಸ್ಥೆ ಸ್ವಾಗತಿಸಿದೆ.

ಹಾವಿನಿಂದ ಹರಡಿತೇ?: ಮಾನವರಿಗೆ ಕೊರೊನಾವೈರಸ್‌ ಹರಡುವ ಮುನ್ನ ಅದು ಹಾವುಗಳಲ್ಲಿ ಕಂಡುಬರುತ್ತಿತ್ತು ಎಂಬ ಅಂಶವನ್ನು ಹೊಸ ಅಧ್ಯಯನವೊಂದು ಬಹಿರಂಗಪಡಿಸಿದೆ. 2019ರಲ್ಲಿ ಕೊರೊನಾ ವೈರಸ್‌ ಹಾವಿನಿಂದ ಮಾನವರಿಗೆ ಹರಡಿರ ಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಇದೇ ವೇಳೆ ಈ ವೈರಸ್‌ಗೆ ಬಲಿಯಾದವರ ಸಂಖ್ಯೆ 18ಕ್ಕೇರಿದ್ದರೆ ಒಟ್ಟು 630 ಪ್ರಕರಣಗಳು ದಾಖಲಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next