Advertisement

ಜ|ರಾವತ್‌ “ಯುದ್ಧ’ಹೇಳಿಕೆಗೆ ಚೀನ ಕಳವಳ

08:45 AM Sep 08, 2017 | Harsha Rao |

ಬೀಜಿಂಗ್‌: ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಸಹಕಾರ ಮಾತುಕತೆ ಬೆನ್ನಲ್ಲೇ ಸೇನಾ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಹೇಳಿಕೆ ಬಗ್ಗೆ ಚೀನ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದೆ. ರಾವತ್‌ ಹೇಳಿಕೆಯು ಕ್ಸಿ ಹಾಗೂ ಮೋದಿ ಅವರ ಮಾತುಕತೆಗೆ ವ್ಯತಿರಿಕ್ತವಾಗಿದೆ ಎಂದಿದೆ.

Advertisement

ಬ್ರಿಕ್ಸ್‌ ಶೃಂಗಸಭೆ ವೇಳೆ ಪ್ರಧಾನಿ ಮೋದಿ ಹಾಗೂ ಜಿನ್‌ಪಿಂಗ್‌ ಮಾತುಕತೆ ನಡೆಸಿ ಉಭಯ ರಾಷ್ಟ್ರಗಳು ಸಹಕಾರದೊಂದಿಗೆ ಇರುವ ನಿರ್ಧಾರಕ್ಕೆ ಬಂದಿದ್ದವು. ಆದರೆ, ಬುಧವಾರ ಮಾತನಾಡಿದ್ದ ರಾವತ್‌, “ಯಾವುದೇ ಕ್ಷಣದಲ್ಲಿ ಚೀನ-ಪಾಕಿಸ್ತಾನ ಯುದ್ಧಕ್ಕೆ ನಿಲ್ಲಬಹುದು. ಭಾರತ ಏಕಕಾಲದಲ್ಲಿ ಭಾರತ ಹಾಗೂ ಚೀನ ದೇಶಗಳನ್ನು ಎದುರಿಸಬೇಕಾಗಿಯೂ ಬರಬಹುದು. ಚೀನ ಈಗಾಗಲೇ ಕಾಲ್ಕೆರೆದು ಯುದ್ಧಕ್ಕೆ ಮೈಕೊಡವಿ ನಿಂತಿದೆ. ಭಾರತವೂ ಸಮರ್ಥವಾಗಿಯೇ ಎದುರಿಸುವ ಶಕ್ತಿ ಹೊಂದಿದೆ’ ಎಂದಿದ್ದರು.

ಇದಕ್ಕೆ ಗುರುವಾರ ಪ್ರತಿಕ್ರಿಯಿಸಿದ ಚೀನ ವಿದೇಶಾಂಗ ಇಲಾಖೆ, “ಇತ್ತ ಕ್ಸಿ ಜಿನ್‌ಪಿಂಗ್‌ ಹಾಗೂ ನರೇಂದ್ರ ಮೋದಿ ಸಹಕಾರ ಮಾತುಕತೆ ನಡೆಸಿದರೆ, ಇದಕ್ಕೆ ತದ್ವಿರುದ್ಧವಾದ ಹೇಳಿಕೆಯನ್ನು ಭಾರತದ ಆರ್ಮಿ ಮುಖ್ಯಸ್ಥರು ನೀಡುತ್ತಿದ್ದಾರೆ. ಇದು ಭಾರತ ಸರಕಾರದ ಹೇಳಿಕೆಯೋ ಅಥವಾ ಆರ್ಮಿ ಮುಖ್ಯಸ್ಥರ ವೈಯಕ್ತಿಕ ಹೇಳಿಕೆಯೋ ಎನ್ನುವುದನ್ನು ಭಾರತ ಸ್ಪಷ್ಟಪಡಿಸಲಿ. ಅವರ ಹೇಳಿಕೆ ನಿಜಕ್ಕೂ ಕಳವಳ ಮೂಡಿಸುವಂತಿದೆ’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next