ಕಾವೂರು: ಭಾರತ ಪುರಾತನ ಸಂಸ್ಕೃತಿಯನ್ನು ಹೊಂದಿದ ಸಂಸ್ಕಾರಯುತ ಸ್ನೇಹಮಯಿ ರಾಷ್ಟ್ರ. ಆದರೆ ನಮ್ಮ ಆಸುಪಾಸುಗಳಲ್ಲಿರುವ ನೆರೆ ರಾಷ್ಟ್ರಗಳು ಈ ದೇಶದ ಮೇಲೆ ತಮ್ಮ ವಕ್ರ ದೃಷ್ಟಿಯನ್ನು ಬೀರು ತ್ತಲೇ ಬಂದಿವೆ. ಪಾಕಿಸ್ಥಾನವು ಪ್ರತ್ಯಕ್ಷ ಯುದ್ಧಕ್ಕಿಳಿದರೆ ಚೀನವು ಪರೋಕ್ಷ ಯುದ್ಧ ಮಾಡುತ್ತಿದೆ.
ಚೀನದ ವಸ್ತುಗಳನ್ನು ಖರೀದಿಸದೆ, ದೇಶಪ್ರೇಮ ಮೆರೆಯಿರಿ ಎಂದು ಸಾಮಾಜಿಕ ಕಾರ್ಯಕರ್ತ ಪ್ರವೀಣ್ ಹೇಳಿದರು.
ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದಲ್ಲಿ ನಡೆದ ಬೆಳದಿಂಗಳ ಚಿಂತನ ಚಾವಡಿ ಕಾರ್ಯಕ್ರಮದಲ್ಲಿ “ಸ್ವದೇಶಿ ಸುರಕ್ಷೆ’ ವಿಚಾರದಲ್ಲಿ ಅವರು ಉಪನ್ಯಾಸ ನೀಡಿದರು.
ಚೀನ ಮತ್ತು ಪಾಕಿಸ್ಥಾನದ ಕುಹಕ ನೀತಿಯನ್ನು ಹತ್ತಿಕ್ಕಲು ನಮ್ಮ ದೇಶದ ಜನರು ಸಿದ್ಧರಾಗಬೇಕು. ದೇಶಕ್ಕೆ ಸ್ವಾತಂತ್ರÂ ಬಂದು 70 ವರ್ಷಗಳಾದರೂ ನಾವು ಮಾನಸಿಕ ದಾಸ್ಯದಿಂದ ಹೊರಬರದಿರುವುದು ದುರಂತ ಎಂದರು.
ತಮ್ಮ ದೇಶದಲ್ಲಿ ಉತ್ಪಾದಿಸಲ್ಪಡುವ ಕಳಪೆ ಸಾಮಗ್ರಿಗಳನ್ನು ಕಡಿಮೆ ದರದಲ್ಲಿ ನಮ್ಮ ದೇಶದಲ್ಲಿ ಬಿಕರಿ ಮಾಡುವ ಮುಖಾಂತರ ನಮ್ಮ ಅರ್ಥವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನವನ್ನು ಅದು ಮಾಡುತ್ತಿದೆ. ಜಪಾನ್‌ನಂತಹ ಚಿಕ್ಕ ರಾಷ್ಟ್ರವು ಅಮೆರಿಕದಂಥ ರಾಷ್ಟ್ರವನ್ನು ಇಂತಹ ಪ್ರಯತ್ನಗಳಲ್ಲಿ ಎದುರಿಸಿರುವಾಗ ಭಾರತದಂತಹ ರಾಷ್ಟ್ರವು ಚೀನವನ್ನು ದೂರವಿಟ್ಟು, ನಮ್ಮ ಆರ್ಥಿಕತೆಯನ್ನು ಬಲಪಡಿಸುವುದು ಅಸಾಧ್ಯವೇನಲ್ಲ. ಆದರೆ ನಾವು ಈಗಿರುವ ಮಾನಸಿಕ ದಿವಾ ಳಿತನದಿಂದ ಹೊರಬಂದು, ದೇಶ ಪ್ರೇಮ ಮೆರೆಯಲು ಇದು ಸಕಾಲ. ಇನ್ನೂ ಎಚ್ಚೆತ್ತುಕೊಳ್ಳದೆ ಇದ್ದರೆ ಒಂದು ದೊಡ್ಡ ದುರಂತ ದೇಶಕ್ಕೆ ಕಾದಿದೆ ಎಂದರು.
ಶ್ರೀ ಧರ್ಮಪಾಲನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಜಿಎಸ್ ಸೇವಾ ಸಮಿತಿಯ ಪಿ. ಎಸ್. ಪ್ರಕಾಶ್ ಸ್ವಾಗತಿಸಿದರು. ಸಂಸ್ಥೆಯ ಆಡಳಿತಾ ಧಿಕಾರಿ ಸುಬ್ಬ ಕಾರಡ್ಕ ವಂದಿಸಿದರು. ನರಸಿಂಹ ಕಾರ್ಯಕ್ರಮ ನಿರೂಪಿಸಿದರು.ಶ್ರೀ ಕೃಷ್ಣ ಮಂದಿರ ಭಜನ ಮಂಡಳಿ ಯವರು ಭಜನೆ ನಡೆಸಿ ಕೊಟ್ಟರು.