Advertisement
“ಚೈನೀಸ್ ಗುವಾಮ್ ಕಿಲ್ಲರ್’ ಖ್ಯಾತಿಯ ಡಿಎಫ್-26, “ಕ್ಯಾರಿಯರ್ ಕಿಲ್ಲರ್’ ಎಂದೇ ಕರೆಯಲ್ಪಡುವ ಡಿಎಫ್- 21 ಡಿ ಮಧ್ಯಂತರ ಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪಿಎಲ್‌ಎ ಉಡಾಯಿಸಿ, ಉದ್ಧಟತನ ಪ್ರದರ್ಶಿಸಿದೆ. ಅಮೆರಿಕದ ಪರಮಾಣು ನೌಕೆ ರೊನಾಲ್ಡ್ ರೇಗನ್, ನಿಮಿಟ್ಜ್ಗಳ ನಿಯೋಜನೆಗೆ ಪ್ರತ್ಯುತ್ತರವಾಗಿ ಚೀನ ಕ್ಷಿಪಣಿ ಪರೀಕ್ಷೆಯ ದುಸ್ಸಾಹಸ ಪ್ರದರ್ಶಿಸಿತ್ತು ಎಂದು ರಕ್ಷಣಾ ತಜ್ಞರು ವಿಶ್ಲೇಷಿಸಿದ್ದಾರೆ. ಹಾಂಕಾಂಗ್, ತೈವಾನ್‌ನ ಸಮುದ್ರ ಗಡಿಯಲ್ಲೂ ಚೀನ ತಂಟೆಗಳನ್ನು ಮುಂದುವರಿಸಿದೆ.
Related Articles
ಚೀನ ಅತಿಕ್ರಮಣದ ಬಗ್ಗೆ ನೇಪಾಲೀ ಅಧಿಕಾರಿಗಳು ಪದೇ ಪದೆ ಆಕ್ಷೇಪ ತೆಗೆಯುತ್ತಿರುವ ನಡುವೆಯೇ ನೇಪಾಳದ ಗಡಿ ಹಳ್ಳಿಯಲ್ಲಿ ಪಿಎಲ್‌ಎ ಸದ್ದಿಲ್ಲದೆ 9 ಕಟ್ಟಡಗಳನ್ನು ನಿರ್ಮಿಸಿದೆ! ಹುಮ್ಲಾ ಜಿಲ್ಲೆಯ ನಾಂಖ್ಯಾ ಹಳ್ಳಿಯಲ್ಲಿ ಚೀನ ಸೇನೆ ಅಕ್ರಮ ಕಟ್ಟಡಗಳನ್ನು ನಿರ್ಮಿಸಿರುವುದು ಸ್ವತಃ ಸ್ಥಳೀಯರಿಗೇ ಆಘಾತ ಮೂಡಿಸಿದೆ.
Advertisement
ಕಟ್ಟಡ ಸಮೀಪ ಸ್ಥಳೀಯರಿಗೆ ಪ್ರವೇಶ ನಿಷೇಧಿಸಲಾಗಿದೆ. ನಾಂಖ್ಯಾ ಹಳ್ಳಿ ಮುಖ್ಯಸ್ಥ ವಿಷ್ಣು ಬಹದ್ದೂರ್ ಲಾಮಾ ಎಂದಿನಂತೆ ಗಡಿ ಪ್ರವಾಸ ಕೈಗೊಂಡಿದ್ದಾಗ ಪಿಎಲ್‌ಎ ಕಟ್ಟಿರುವ ಕಟ್ಟಡಗಳು ಕಂಡಿವೆ ಎಂದು ಪಿಟಿಐ ವರದಿ ಮಾಡಿದೆ.