Advertisement

Paris Olympics ; ಮೊದಲ ಎರಡು ಚಿನ್ನದ ಪದಕ ಗೆದ್ದ ಚೀನಾ!

04:29 PM Jul 27, 2024 | Team Udayavani |

ಪ್ಯಾರಿಸ್ : 2024 ರ ಒಲಂಪಿಕ್ ಕ್ರೀಡಾಕೂಟದ ಮೊದಲ ಚಿನ್ನದ ಪದಕವನ್ನು ಚೀನಾ ತನ್ನದಾಗಿಸಿಕೊಂಡಿತು.ಐಫೆಲ್ ಟವರ್‌ನಿಂದ ಸುಮಾರು 250 ಕಿಮೀ ದೂರದಲ್ಲಿರುವ ಚಟೌರೌಕ್ಸ್‌ನ ಹೊರವಲಯದಲ್ಲಿರುವ ಮಿಲಿಟರಿ ನೆಲೆಯಲ್ಲಿ ನಡೆದ 10 ಮೀಟರ್ ಮಿಶ್ರ ಏರ್ ರೈಫಲ್ ಟೀಮ್ ಈವೆಂಟ್‌ನ ವಿಶ್ವ ಚಾಂಪಿಯನ್ ಮತ್ತು ಫೇವರಿಟ್‌ಗಳಾದ ಹುವಾಂಗ್ ಯುಟಿಂಗ್ ಮತ್ತು ಶೆಂಗ್ ಲಿಹಾವೊ ಅವರು ಬೆಳಗ್ಗೆ 11.22 ಕ್ಕೆ ಜಯ ತನ್ನದಾಗಿಸಿಕೊಂಡರು.

Advertisement

ದಕ್ಷಿಣ ಕೊರಿಯಾದ ಕೆಯುಮ್ ಜಿ-ಹಿಯಾನ್ ಮತ್ತು ಪಾರ್ಕ್ ಹಾ-ಜುನ್ ಬೆಳ್ಳಿ ಪದಕ ಗೆದ್ದರು. ಗೆಲುವಿಗೆ 16 ಅಂಕಗಳ ಗುರಿಯೊಂದಿಗೆ ಚೀನಾ ನಾಲ್ಕು ಸುತ್ತುಗಳ ನಂತರ 6-2 ಮುನ್ನಡೆ ಸಾಧಿಸಿತು. ಕಜಕಿಸ್ಥಾನದ ಜೋಡಿ ಕಂಚಿನ ಪದಕ ಗೆದ್ದಿತು.

ಮಹಿಳೆಯರ ಸಿಂಕ್ರೊನೈಸ್ಡ್ 3 ಮೀ ಸ್ಪ್ರಿಂಗ್‌ಬೋರ್ಡ್ ಫೈನಲ್‌ನಲ್ಲಿ ಯಾನಿ ಚಾಂಗ್ ಮತ್ತು ಯಿವೆನ್ ಚೆನ್ ಅವರಿಂದ 2 ನೇ ಚಿನ್ನದ ಪದಕ ಚೀನಾ ತನ್ನದಾಗಿಸಿಕೊಂಡಿತು. ಅಮೆರಿಕದ ಕೆ. ಕುಕ್, ಎಸ್. ಬೇಕನ್ ಬೆಳ್ಳಿ ಪದಕ ಗೆದ್ದರೆ, ಬ್ರಿಟನ್ ನ ಹಾರ್ಪರ್ ಮತ್ತು ಜೆನ್ಸನ್ ಕಂಚಿನ ಪದಕ ಗೆದ್ದರು.

ಭಾರತಕ್ಕೆ ಶೂಟಿಂಗ್ ನಲ್ಲಿ ಭಾರೀ ನಿರಾಸೆ

Advertisement

ಇಂದು ಭಾರತೀಯ ಶೂಟರ್‌ಗಳಿಗೆ ಅದೃಷ್ಟವಿಲ್ಲದಾಯಿತು. ಚೀಮಾ, ಸರಬ್ಜೋತ್ ಪದಕ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾದರು. ಮಿಶ್ರ ಹಾಗೂ ಪುರುಷರ ಎರಡೂ ತಂಡಗಳು ಪದಕ ಸುತ್ತಿಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿವೆ. ರಮಿತಾ ಜಿಂದಾಲ್ ಮತ್ತು ಅರ್ಜುನ್ ಬಾಬುತಾ ಒಟ್ಟು 628.7 ಅಂಕಗಳೊಂದಿಗೆ ಆರನೇ ಸ್ಥಾನ ಗಳಿಸಿದರೆ, ಎಲವೆನಿಲ್ ವಲರಿವನ್ ಮತ್ತು ಸಂದೀಪ್ ಸಿಂಗ್ ಒಟ್ಟು 626.3 ಅಂಕಗಳೊಂದಿಗೆ 12 ನೇ ಸ್ಥಾನದಲ್ಲಿ ಉಳಿದರು. ರಮಿತಾ ಮತ್ತು ಅರ್ಜುನ್ ಬಾಬುತಾ ಜೋಡಿಯು ಮೂರು ಗುರಿಗಳು ಉಳಿದಿರುವಾಗ ಐದನೇ ಸ್ಥಾನವನ್ನು ಪಡೆದರು ಆದರೆ ಪದಕ ಸುತ್ತಿನ ಕಟ್-ಆಫ್‌ನ 1.0 ಪಾಯಿಂಟ್‌ಗಳಷ್ಟು ಕಡಿಮೆ ಸಿಕ್ಕಿತು. ಮತ್ತೊಂದೆಡೆ, ಸರಬ್ಜೋತ್ 9 ನೇ ಶ್ರೇಯಾಂಕದೊಂದಿಗೆ ತನ್ನ ಆಟವನ್ನು ಕೊನೆಗೊಳಿಸಿದರು, ಪದಕ ಸುತ್ತಿಗೆ ಒಂದು ಸ್ಥಾನವನ್ನು ಕಳೆದುಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next