Advertisement

ಮಾಲ್ದೀವ್ಸ್‌ಗೆ ಪ್ರವಾಸ ಹೋಗಬೇಡಿ: ಚೀನೀ ಪ್ರಜೆಗಳಿಗೆ ಸೂಚನೆ

04:23 PM Feb 05, 2018 | Team Udayavani |

ಬೀಜಿಂಗ್‌ : ರಜಾ ಪ್ರವಾಸದಲ್ಲಿ ಮಾಲ್ದೀವ್ಸ್‌ಗೆ ಹೋಗದಂತೆ ಚೀನ ತನ್ನ ಪ್ರಜೆಗಳಿಗೆ ಎಚ್ಚರಿಕೆ ನೀಡಿದೆ.

Advertisement

ಮಾಲ್ದೀವ್ಸ್‌ನಲ್ಲಿನ ರಾಜಕೀಯ ಅಸ್ಥಿರತೆಯೇ ಇದಕ್ಕೆ ಕಾರಣವಾಗಿದೆ. ಅತ್ಯಧಿಕ ಸಂಖ್ಯೆಯ ಚೀನೀ ಪ್ರಜೆಗಳು ಮಾಲ್ದೀವ್ಸ್‌ಗೆ ಪ್ರವಾಸಾರ್ಥವಾಗಿ ಬರುತ್ತಾರೆ. 

ಚೀನದ ಈ ನಡೆಯಿಂದ  ಮಾಲ್ದೀವ್ಸ್‌ ಅಧ್ಯಕ್ಷ ಅಬ್ದುಲ್ಲ ಯಾಮೀನ್‌ ಅವರಿಗೆ ಬಹುದೊಡ್ಡ ಹಿನ್ನಡೆಯಾಗಲಿದೆ. ಕಾರಣ ಮಾಲ್ದೀವ್ಸ್‌ ಆರ್ಥಿಕತೆ ಆಧರಿಸಿಕೊಂಡಿರುವುದೇ ಚೀನೀ ಪ್ರವಾಸಿರಗರನ್ನು !

ಈ ನಡುವೆ ಮಾಲ್ದೀವ್ಸ್‌ ಸುಪ್ರೀಂ ಕೋರ್ಟ್‌ ಯಾಮೀನ್‌ ಸರಕಾರಕ್ಕೆ ಎಲ್ಲ ರಾಜಕೀಯ ಬಂಧಿಗಳನ್ನು ಬಿಡುಗಡೆ ಮಾಡುವಂತೆ ಮತ್ತು ವಿರೋಧಿ ಶಾಸಕರನ್ನು ಪುನರ್‌ ಸ್ಥಾಪನೆಗೊಳಿಸುವಂತೆ ಆದೇಶಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next