Advertisement

ಜನನ ಪ್ರಮಾಣ ಭಾರೀ ಇಳಿಕೆ : ಚೀನಾದಲ್ಲಿ ಇನ್ನು ಮೂರು ಮಕ್ಕಳಿಗೆ ಅವಕಾಶ

07:41 PM Aug 20, 2021 | Team Udayavani |

ಬೀಜಿಂಗ್‌: ಚೀನಾದಲ್ಲಿ ಇನ್ನು ಮುಂದೆ ದಂಪತಿ ಮೂವರು ಮಕ್ಕಳನ್ನು ಪಡೆಯಬಹುದು. ಈ ಬಗ್ಗೆ ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ನ ಸ್ಥಾಯಿ ಸಮಿತಿ ಸಭೆಯಲ್ಲಿ ಜನಸಂಖ್ಯಾ ಮತ್ತು ಕುಟುಂಬ ಯೋಜನೆ ಕಾನೂನಿನಲ್ಲಿ ಬದಲಾವಣೆ ಮಾಡುವ ಬಗ್ಗೆ ಸಮ್ಮತಿ ನೀಡಲಾಗಿದೆ. ಜನಸಂಖ್ಯೆಯಲ್ಲಿ ಮೊದಲ ಸ್ಥಾನದಲ್ಲಿರುವ ಚೀನಾದಲ್ಲಿ ಇತ್ತೀಚೆಗೆ ನಡೆದಿದ್ದ ಅಧ್ಯಯನದಲ್ಲಿ ಜನನ ಪ್ರಮಾಣ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

Advertisement

ಜನಗಣತಿಯ ಅಂಶಗಳ ಪ್ರಕಾರ 60 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ 264 ಮಿಲಿಯ ಅಥವಾ ಶೇ.18.7ರಷ್ಟು ಏರಿಕೆಯಾಗಿತ್ತು. ಜತೆಗೆ ಒಂದು ದಶಕ್ಕೆ ಹೋಲಿಕೆ ಮಾಡಿದರೆ ಜನಸಂಖ್ಯಾ ಪ್ರಮಾಣ ನಿಧಾನಗತಿಯಲ್ಲಿ ಅಂದರೆ 1.412 ಬಿಲಿಯನ್‌ನಷ್ಟಾಗಿತ್ತು. ಮುಂದಿನ ವರ್ಷ ಈ ಪ್ರಮಾಣ ಮತ್ತಷ್ಟು ಕುಸಿಯಲಿದೆ ಎಂದು ಗಣತಿಯ ವೇಳೆ ಕಂಡುಬಂದಿತ್ತು.

ಇದನ್ನೂ ಓದಿ : ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಜೊತೆಗೆ ಅಧಿಕಾರ ವಿಕೇಂದ್ರೀಕರಣಕ್ಕೆ ಚಿಂತನೆ :ಅಶ್ವತ್ಥನಾರಾಯಣ

ಆ ದೇಶದಲ್ಲಿ ಜೀವನ ವೆಚ್ಚ ಹೆಚ್ಚಾಗಿರುವುದರಿಂದ ನೂತನ ದಂಪತಿ ಮಕ್ಕಳನ್ನು ಪಡೆಯಲು ಆಸಕ್ತಿ ಹೊಂದಿಲ್ಲ. ಹೀಗಾಗಿ, ಈ ಸವಾಲು ಎದುರಿಸುವ ನಿಟ್ಟಿನಲ್ಲಿ ಚೀನಾ ಸರ್ಕಾರ ದಂಪತಿಗೆ ವಿತ್ತೀಯ ನೆರವನ್ನೂ ನೀಡುವ ಬಗ್ಗೆ ಘೋಷಣೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next