Advertisement

China; ಮಾನವರಿಗೆ ಅಪಾಯಕಾರಿ 39 ವೈರಸ್‌ ಪತ್ತೆ

01:21 AM Sep 06, 2024 | Team Udayavani |

ಹೊಸದಿಲ್ಲಿ: ತುಪ್ಪಳವುಳ್ಳ ಜೀವಿಗಳ ಮೇಲೆ ನಡೆದ ಅಧ್ಯಯನವೊಂದರಲ್ಲಿ ತುಪ್ಪಳವುಳ್ಳ ಪ್ರಾಣಿಗಳ ಸಾಕಣೆ ಕೇಂದ್ರಗಳಲ್ಲಿನ ಪ್ರಾಣಿಗಳಲ್ಲಿ ಹರಡುತ್ತಿರುವ 125 ಬಗೆಯ ವೈರಸ್‌ಗಳನ್ನು ಗುರುತಿಸಲಾಗಿದ್ದು, ಈ ಕೇಂದ್ರಗಳು ಸಂಭಾವ್ಯ ವೈರಸ್‌ ಪ್ರಸರಣದ ಮೂಲವಾಗಬಹುದು ಎಂದು ಅಂದಾಜಿಸಲಾಗಿದೆ.

Advertisement

ಚೀನ ಮೂಲದ ಸಂಶೋಧಕರು ಮತ್ತು ವೈರಾಣು ತಜ್ಞ ಎಡ್ವರ್ಡ್‌ ಹೋಮ್ಸ್‌ ಚೀನದ ತುಪ್ಪಳವುಳ್ಳ ಪ್ರಾಣಿ ಗಳ ಸಾಕಣೆ ಕೇಂದ್ರಗಳಲ್ಲಿ ಜಂಟಿಯಾಗಿ ಕೈಗೊಂಡಿದ್ದ ಅಧ್ಯಯನದಲ್ಲಿ 36 ಅಪರಿ ಚಿತ ವೈರಸ್‌ಗಳೊಂದಿಗೆ, ಮಾನವರಿಗೂ ಸೋಂಕು ಹರಡಬಲ್ಲ 39 ಅಪಾಯಕಾರಿ ವೈರಸ್‌ ಗುರುತಿಸಿದೆ. ನೇಚರ್‌ ಜರ್ನಲ್‌ನಲ್ಲಿ ಈ ಸಂಶೋಧನೆ ವರದಿ ಪ್ರಕಟ ವಾಗಿದೆ. 2021ರಿಂದ 2024ರ ಅವಧಿ ಯಲ್ಲಿ ರೋಗಗಳಿಗೆ ತುತ್ತಾಗಿ ಸಾವನ್ನಪ್ಪಿದ್ದ ಮಿಂಕ್‌ಗಳು, ರಕೂನ್‌ ಡಾಗ್‌ಗಳು, ಮೊಲಗಳು, ನರಿಗಳು ಸೇರಿ 461 ಪ್ರಾಣಿಗಳನ್ನು ಅಧ್ಯಯನಕ್ಕೆ ಒಳಪಡಿಸ ಲಾಗಿತ್ತು. ಬಾವಲಿಗಳಲ್ಲಿ ಕಂಡುಬರುತ್ತಿದ್ದ “ಹೆಚ್‌ಕೆಯು5′ ವೈರಸ್‌ ಇದೇ ಮೊದಲ ಬಾರಿಗೆ ಕ್ರಾಸ್‌ ಸ್ಪೀಶಿಷ್‌ ಸೋಂಕಿನ ಮೂಲಕ ಮಿಂಕ್‌ ಪ್ರಾಣಿಗಳಲ್ಲಿ ಕಂಡುಬಂದಿದ್ದು, ಮುಂದೊಂದು ದಿನ ಮಾನವರಿಗೂ ಸೋಂಕು ಹಬ್ಬುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next