Advertisement

ಚೀನ : ಎಕ್ಸ್‌ಪ್ರೆಸ್‌ವೇ ಸುರಂಗದ ಗೋಡೆಗೆ ಬಸ್ಸು ಬಡಿದು 36 ಸಾವು

11:48 AM Aug 11, 2017 | udayavani editorial |

ಬೀಜಿಂಗ್‌ : ವಾಯವ್ಯ ಚೀನದ ಶಾಂಕ್ಸಿ  ಪ್ರಾಂತ್ಯದಲ್ಲಿನ ಕ್ಸಿಯಾನ್‌ – ಹ್ಯಾನ್‌ಝೋಂಗ್‌ ಎಕ್ಸ್‌ಪ್ರೆಸ್‌ ವೇ ಸುರಂಗದ ಗೋಡೆಗೆ ಗುರುವಾರ ತಡ ರಾತ್ರಿ ಮಿನಿ ಬಸ್‌ ಢಿಕ್ಕಿಯಾಗಿ ಸಂಭವಿಸಿದ ಭೀಕರ ಅವಘಡದಲ್ಲಿ ಕನಿಷ್ಠ 36 ಮಂದಿ ಮೃತಪಟ್ಟು ಇತರ 13 ಮಂದಿ ಗಾಯಗೊಂಡಿರುವುದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಸ್ಥಳೀಯ ಕಾಲಮಾನ ರಾತ್ರಿ 11.34ರ ಹೊತ್ತಿಗೆ ಈ ಅಪಘಾತ ಸಂಭವಿಸಿತು. ಮಿನಿ ಬಸ್ಸು ಪ್ರಯಾಣಿಕರನ್ನು ಒಯ್ಯುತ್ತಿತ್ತು. ಎಕ್ಸ್‌ಪ್ರೆಸ್‌ವೇಯಲ್ಲಿನ ಕಿನ್‌ಲಿಂಗ್‌ ಸುರಂಗದ ಗೋಡೆಗೆ ಬಸ್ಸು ಚಾಲಕನ ನಿಯಂತ್ರಣ ಕಳೆದುಕೊಂಡು ಬಲವಾಗಿ ಅಪ್ಪಳಿಸಿತು ಎಂದು ಶಾಂಕ್ಸಿ ಭದ್ರತಾ ಇಲಾಖೆಯನ್ನು ಉಲ್ಲೇಖೀಸಿ ಸರಕಾರಿ ಒಡೆತನದ ಕ್ಸಿನ್‌ಹುವಾ ವರದಿ ಮಾಡಿದೆ.

ಬಸ್ಸು  ಸಿಚುವಾನ್‌ ಪ್ರಾಂತ್ಯದ ರಾಜಧಾನಿ ಶೆಂಗ್‌ಡು ನಗರದಿಂದ ಹುನಾನ್‌ ಪ್ರಾಂತ್ಯದ ಲುಯಾಂಗ್‌ ನಗರಕ್ಕೆ ಪ್ರಯಾಣಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next