Advertisement

ಚಿಮ್ಮಲಗಿ ನೀಲಕಂಠ ಶ್ರೀಗಳ ಆರೋಗ್ಯ ಸ್ಥಿತಿ ಗಂಭೀರ

12:05 AM Jan 12, 2023 | Team Udayavani |

ಆಲಮಟ್ಟಿ: ಇಲ್ಲಿಗೆ ಸಮೀಪದ ಚಿಮ್ಮಲಗಿ ಭಾಗ-2ರ ಅರಳೆಲೆ ಕಟ್ಟಿಮನಿ ಹಿರೇಮಠದ ತಪೋನಿಧಿ ನೀಲಕಂಠ ಸ್ವಾಮೀಜಿ (92) ಆರೋಗ್ಯ ಸ್ಥಿತಿ ಗಂಭೀರ ವಾಗಿದೆ.

Advertisement

ಈ ಬಗ್ಗೆ ಬುಧವಾರ ಪ್ರಕಟನೆ ನೀಡಿರುವ ಕಿರಿಯ ಪೀಠಾಧಿಪತಿ ಸಿದ್ದರೇಣುಕ ಶ್ರೀಗಳು, ಮಠದಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಶ್ರೀಗಳ ಆರೋಗ್ಯ ಹದಗೆಡುತ್ತಿದೆ. ಭಕ್ತರಲ್ಲಿ ಗೊಂದಲ ಆಗದಿರಲಿ ಹಾಗೂ ಭಕ್ತರು ಶ್ರೀಗಳ ದರ್ಶನ ಹಾಗೂ ಆಶೀರ್ವಾದ ಪಡೆಯಲಿ ಎನ್ನುವ ದೃಷ್ಟಿಯಿಂದ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ನೀಡಲಾಗುತ್ತಿದೆ.

ಬಿಎಲ್‌ಡಿಇ ಆಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಶ್ರೀಗಳು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎಂದು ಕೊಟ್ಟೂರು, ಡೋಣೂರಿನ ಸಿದ್ದಲಿಂಗೇಶ್ವರ ಶ್ರೀಗಳು ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next