Advertisement

ಅಪಘಾತ ವಲಯವಾದ ಚಿಲಿಂಬಿ ರಸ್ತೆ

12:09 AM Jul 08, 2019 | Team Udayavani |

ಕಾರ್ಕಳ: ಮಂಗಳೂರು-ಸೋಲ್ಹಾಪುರ ರಾಷ್ಟ್ರೀಯ ಹೆದ್ದಾರಿ 165ರ ಸಾಣೂರು ಬಳಿಯ ಚಿಲಿಂಬಿಯಲ್ಲಿ ವಾಹನಗಳ ಅಪಘಾತ ಸಂಖ್ಯೆ ಹೆಚ್ಚುತ್ತಿದ್ದು ಆತಂಕಕ್ಕೀಡು ಮಾಡಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಅಪಘಾತಗಳು ಇಲ್ಲಿ ಸಂಭವಿಸಿವೆ. ಬೆಳುವಾಯಿಯಿಂದ ಎಸ್‌.ಕೆ. ಬಾರ್ಡರ್‌ವರೆಗೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೊಂಡ ಬಳಿಕ ವಾಹನ ಚಾಲಕರು, ದ್ವಿಚಕ್ರ ಸವಾರರು ವೇಗವಾಗಿ ಹೋಗುತ್ತಿದ್ದು, ಅಪಘಾತಕ್ಕೆ ಕಾರಣವಾಗುತ್ತಿದೆ.


Advertisement

ತಿರುವು
ಈ ರಸ್ತೆ ಅನೇಕ ತಿರುವು-ಮುರುವು ಹೊಂದಿದೆ. ಏರು -ತಗ್ಗುವಿನಿಂದಲೂ ಕೂಡಿದೆ. ಸಾಣೂರು ರಸ್ತೆಯ ಒಂದು ಬದಿ ಪ್ರಪಾತವಿದೆ. ಹೀಗಾಗಿ ಎಚ್ಚರಿಕೆಯಿಂದಲೇ ತಮ್ಮ ವಾಹನ ಚಲಾಯಿಸಿದಲ್ಲಿ ಸಂಭವ್ಯ ಅಪಾಯವನ್ನು ತಪ್ಪಿಸಬಹುದಾಗಿದೆ.

ಬೆಳುವಾಯಿ ಹಾಗೂ ಸಾಣೂರು ಕಡೆಗಳಿಂದ ವೇಗವಾಗಿ ಬರುವ ವಾಹನಗಳು ಚಿಲಿಂಬಿ ಸಮೀಪಿಸುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿ ಗೋಡೆಗಪ್ಪಳಿಸುವುದು, ಕೆಲವೊಮ್ಮೆ ಎದುರುಗಡೆಯಿಂದ ಬರುವ ವಾಹನಕ್ಕೆ, ಅಥವಾ ರಸ್ತೆ ಬದಿಯಲ್ಲಿನ ಮರಕ್ಕೆ ಢಿಕ್ಕಿ ಹೊಡೆಯುತ್ತಿವೆ. ನೂತನ ರಸ್ತೆಯಾಗಿರುವುದರಿಂದ ತೈಲಾಂಶವಿರುವುದೂ ಅವಘಡಕ್ಕೆ ಒಂದು ಕಾರಣವೆಂದು ಸ್ಥಳೀಯರು ಹೇಳುತ್ತಾರೆ.

ತಡೆಬೇಲಿ ಅಗತ್ಯ
ರಸ್ತೆಯ ಒಂದು ಭಾಗದಲ್ಲಿ ತಡೆಬೇಲಿಯನ್ನಾದರೂ ಮಾಡುವುದು ಉತ್ತಮ. ಅಪಘಾತ ವಲಯ ಸೂಚನ ಫ‌ಲಕವನ್ನು ಅಳವಡಿಸಬೇಕು. ರಿಫ್ಲೆಕ್ಟರ್‌ಗಳನ್ನು ಅಂಟಿಸುವುದರಿಂದಲೂ ರಾತ್ರಿ ವೇಳೆ ಚಾಲಕರಿಗೆ ಎಚ್ಚರಿಕೆ ನೀಡುವುದಕ್ಕೆ ನೆರವಾಗುತ್ತದೆ.

ಸುರಕ್ಷತೆ ಅಗತ್ಯ
ಸುರಕ್ಷಿತ ಪ್ರಯಾಣಕ್ಕೆ ಇಲಾಖೆಯವರು ಸೂಚನ ಫ‌ಲಕ, ತಡೆಬೇಡಿಲಿಗಳನ್ನು ಅಳವಡಿಸಬೇಕು. ರಸ್ತೆ ಅಭಿವೃದ್ಧಿಗೊಂಡ ಬಳಿಕ ವಾಹನ ಚಾಲಕರು ಅತಿ ವೇಗದಲ್ಲಿ ತಮ್ಮ ವಾಹನವನ್ನು ಚಲಾಯಿಸದೆ ವೇಗಕ್ಕೆ ಕಡಿವಾಣ ಹಾಕುವುದು ಉತ್ತಮ.
-ಗಣೇಶ್‌ ನಾಯಕ್‌,
ಸಾಣೂರು ಸ್ಥಳೀಯರು

Advertisement
Advertisement

Udayavani is now on Telegram. Click here to join our channel and stay updated with the latest news.

Next