Advertisement

ಗೂಡ್ಸ್‌ ರೈಲಿನ ಅಡಿಯಲ್ಲಿ ಮಕ್ಕಳ ಆಟ!

08:58 PM Aug 03, 2023 | Team Udayavani |

ರಾಂಚಿ: ಚಲಿಸುತ್ತಿರುವ ಗೂಡ್ಸ್‌ ರೈಲಿನ ಅಡಿಯಲ್ಲಿ ನಾಲ್ವರು ಮಕ್ಕಳು ಅಡಗಿ, ಆಟ ಆಡುತ್ತಿದ್ದ ಘಟನೆ ಜಾರ್ಖಂಡ್‌ನ‌ ಪಶ್ಚಿಮ ಸಿಂಗ್ಭೂಮ್‌ ಜಿಲ್ಲೆಯಲ್ಲಿ ವರದಿಯಾಗಿದೆ. ಸುರಕ್ಷತೆಯನ್ನು ಲೆಕ್ಕಿಸದೇ ಮಕ್ಕಳು ಚಲಿಸುತ್ತಿರುವ ರೈಲು ಅಡಿಯಲ್ಲಿ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಗೂಡ್ಸ್‌ ರೈಲು ನಿಂತಾಗ, ಕಾರ್ಮಿಕನೊಬ್ಬ ಅದರ ತಪಾಸಣೆ ನಡೆಸುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ.

Advertisement

ಈ ಕುರಿತು ಆತ ವಿಡಿಯೋ ಮಾಡಿದ್ದಾನೆ. ಅಲ್ಲದೇ ಈ ಬಗ್ಗೆ ಆತ ಸಂಬಂಧಪಟ್ಟ ರೈಲು ಮತ್ತು ಗಣಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ. ಈ ಮಕ್ಕಳು ಸಿಂಗ್ಭೂಮ್‌ ಜಿಲ್ಲೆಯ ಸರಂದಾ ಪ್ರದೇಶಕ್ಕೆ ಸೇರಿದವರಾಗಿದ್ದು, ಮತ್ತೂಮ್ಮೆ ಈ ರೀತಿಯ ಅಪಾಯದ ಆಟಗಳಲ್ಲಿ ತೊಡಗದಂತೆ ಬುದ್ಧಿ ಹೇಳಿ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next