Advertisement

 ‘ಮಕ್ಕಳ ಸಂಸತ್ತು- 2017’ಉದ್ಘಾಟನೆ

10:06 AM Nov 08, 2017 | |

ಮಹಾನಗರ: ಉತ್ತಮ ಸಮಾಜ ರೂಪಿಸುವ ದೃಷ್ಟಿಯಿಂದ ಎಳೆ ವಯಸ್ಸಿನಲ್ಲಿಯೇ ಮಕ್ಕಳಿಗೆ ಪ್ರಜಾಪ್ರಭುತ್ವ ವ್ಯವಸ್ಥೆ
ಬಗ್ಗೆ ಅರಿವು ಮೂಡಿಸಬೇಕು. ಆದ್ದರಿಂದ ಶಾಲಾ ಪಠ್ಯದಲ್ಲೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮಕ್ಕಳಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಶಾಸಕ ಜೆ.ಆರ್‌. ಲೋಬೋ ಹೇಳಿದರು.

Advertisement

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ ಬೆಂಗಳೂರು, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ, ಶಿಕ್ಷಣ ಇಲಾಖೆ, ರೋಟರಿ ಕ್ಲಬ್‌ ಸೆಂಟ್ರಲ್‌, ಪಡಿ ಸಂಸ್ಥೆ, ಚೈಲ್ಡ್‌ಲೈನ್‌-1098 ಸಹಯೋಗದಲ್ಲಿ ನಗರದ ರೋಶನಿ ನಿಲಯ ಕಾಲೇಜು ಸಭಾಂಗಣದಲ್ಲಿ ಸೋಮವಾರ ಜರಗಿದ ‘ಮಕ್ಕಳ ಸಂಸತ್ತು- 2017’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಈ ವಿಷಯದ ಕುರಿತು ಸರಕಾರದ ಗಮನ ಸೆಳೆಯುವ ಕೆಲಸವನ್ನು ಮಾಡುತ್ತೇನೆ. ಶಿಕ್ಷಣ ಇಲಾಖೆ ಅಧಿಕಾರಿಗಳು
ಕೂಡ ಈ ಬಗ್ಗೆ ಗಮನ ಹರಿಸಬೇಕು ಎಂದವರು ಹೇಳಿದರು.

ಶಾಸಕರೊಂದಿಗೆ ಮಕ್ಕಳ ಸಂವಾದ
ಮಕ್ಕಳ ಸುರಕ್ಷಾ ನೀತಿ-2016 ಅನುಷ್ಠಾನಗೊಳಿಸದೆ ಇರುವುದು, ಶಿಕ್ಷಕರ ಕೊರತೆ, ಅಸಮರ್ಪಕ ಸಾರಿಗೆ ವ್ಯವಸ್ಥೆ, ಆಟದ ಮೈದಾನ, ಶೌಚಗೃಹದ ಕೊರತೆ, ಶಾಲೆಯ ಕಟ್ಟಡದ ಕಳಪೆ ಕಾಮಗಾರಿ ಮುಂತಾದ ವಿಷಯಗಳ ಬಗ್ಗೆ ಮಕ್ಕಳು ಶಾಸಕರೊಂದಿಗೆ ಸಂವಾದ ನಡೆಸಿ ಪ್ರಶ್ನಿಸಿದರು.

ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರೆನ್ನಿ ಡಿ’ಸೋಜಾ, ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಅಧ್ಯಕ್ಷೆ ಪ್ರೇಮಿ ಫೆರ್ನಾಂಡಿಸ್‌, ಅನಂತರಾಮ ಹೇರಳೆ, ಕಮಲಾಗೌಡ, ಜಿಲ್ಲಾ ಪಂಚಾಯತ್‌ ಉಪಕಾರ್ಯದರ್ಶಿ ಗೋಪಾಲಕೃಷ್ಣ ಭಟ್‌, ರೋಟರಿ ಕ್ಲಬ್‌ ಸೆಂಟ್ರಲ್‌ ಅಧ್ಯಕ್ಷ ರೇಮಂಡ್‌ ಡಿ’ಕುನ್ಹ ಮತ್ತಿತರರು ಉಪಸ್ಥಿತರಿದ್ದರು.

Advertisement

ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಜಯಂತಿ ಮೂಲ್ಯ ಪ್ರಸ್ತಾವನೆಗೈದರು. ಕಸ್ತೂರಿ ಬೊಳುವಾರು ಸಂವಾದ ನಡೆಸಿಕೊಟ್ಟರು. ಶಿಕ್ಷಕ ಮಹಾಲಿಂಗ ನಾಯ್ಕ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next