Advertisement

ನಿಮ್ಮದು ಸಮಸ್ಯೆಯ ಮಗುವೇ?

07:24 PM Dec 09, 2020 | Suhan S |

ನಮ್ಮ ಮಗು ಯಾಕೋ ಯಾವಾಗಲೂ ಸಪ್ಪಗೆ ಇರುತ್ತೆ. ಊಟತಿಂಡಿ ಬಗ್ಗೆ ಅದಕ್ಕೆಹೆಚ್ಚಿನ ಗಮನವೇ ಇರಲ್ಲ.ಓದಲು ಕುಳಿತಾಗ ಕೂಡ ಅರ್ಧ ಗಂಟೆಯೊಳಗೇ, ಸುಸ್ತಾಯ್ತು ಅನ್ನುತ್ತಾ ಪುಸ್ತಕ ಎತ್ತಿಟ್ಟು ಹೋಗಿ ಬಿಡುತ್ತೆ.ಊಟ ಮಾಡಿಸುವಾಗಂತೂ ಅದರ ಹಠ ನೋಡಿ ತಲೆಕೆಟ್ಟು ಹೋಗುತ್ತೆ.ಯಾಕೆಹೀಗೆ ಆಡುತ್ತೋ ಗೊತ್ತಾಗಲ್ಲ …

Advertisement

ಬೇಸರದಿಂದಲೇ ಹೀಗೆ ಹೇಳುವ ಹಲವು ಪೋಷಕರುಂಟು. ಮಗು ಓದುವುದರಿಂದ ತಪ್ಪಿಸಿಕೊಳ್ಳಲು ಹೀಗೆ ಕಳ್ಳಾಟ ಆಡುತ್ತಿರಬಹುದು ಎಂಬುದೇ ಹೆಚ್ಚಿನ ಪೋಷಕರ ನಂಬಿಕೆಯಾಗಿರುತ್ತದೆ.ಆದರೆ ಪೋಷಕರು ಅರ್ಥ ಮಾಡಿಕೊಳ್ಳಲೇ ಬೇಕಾದ ಸಂಗತಿಯೊಂದಿದೆ. ಏನೆಂದರೆ- ಮಾನಸಿಕ ಆರೋಗ್ಯದಲ್ಲಿ ಏರುಪೇರಾದಾಗ ಮಕ್ಕಳು ಹೀಗೆಲ್ಲಾ ವರ್ತಿಸುವ ಸಾಧ್ಯತೆಗಳುಹೆಚ್ಚಾಗಿ ಇರುತ್ತವೆ. ಇದ್ದಕ್ಕಿದ್ದಂತೆಯೇ ಹಸಿವಾಗುತ್ತಿದೆ ಅನ್ನುವುದು,ಊಟ- ತಿಂಡಿಯಬಗ್ಗೆಆಸಕ್ತಿ ತೋರದೆ ಇರುವುದು, ಏನನ್ನೋಯೋಚಿಸುತ್ತಾ ಸುತ್ತಲಿನ ಪರಿವೆಇಲ್ಲದಂತೆಕೂತು ಬಿಡುವುದು, ಹತ್ತು ಬಾರಿ ಕೂಗಿದರೂ ಓಗೊಡದೇ ಇರುವುದು, ಇದ್ದಕ್ಕಿದ್ದಂತೆಯೇ ಮಲಗಿ ಬಿಡುವುದು ಅಥವಾ ನಡುರಾತ್ರಿ ನಿದ್ರೆಯಿಂದ ಎದ್ದು ಸುಮ್ಮನೇ ಕೂತು ಬಿಡುವುದು, ಯಾವಾಗಲೂ ಮಂಕಾಗಿ ಕುಳಿತಿರುವುದು, ಏನಾದರೂ ಕೇಳಲುಹೋದರೆ ಸಿರ್ರನೆ ಸಿಡುಕುವುದು – ಇವೆಲ್ಲಾ ಮಕ್ಕಳ ಮಾನಸಿಕ ಆರೋಗ್ಯ ಹದಗೆಟ್ಟಿದೆ ಎಂಬುದನ್ನು ಪರೋಕ್ಷವಾಗಿ ತಿಳಿಸುವ ಸಿಗ್ನಲ್‌ ರೀತಿಯ ಸೂಚನೆಗಳು.

ಇನ್ನುಕೆಲವು ಮಕ್ಕಳಿರುತ್ತಾರೆ.ಅವರು ಎಲ್ಲವನ್ನೂಅತೀ ಎಂಬಂತೆಯೇ ಮಾಡುತ್ತಾರೆ.ಹೆಚ್ಚಿನ ಪ್ರಮಾಣದ ತಿಂಡಿ ತಿಂದು ಬಿಡುವುದು, ನಂತರ ಅಷ್ಟನ್ನೂ ವಾಂತಿ ಮಾಡುವುದು,ಅವಧಿಮೀರಿದ ನಂತರವೂ ಆಟದ ಅಂಗಳದಲ್ಲೇ ಉಳಿಯುವುದು, ಮನೆಯಲ್ಲಿಅಪ್ಪನೋ-ಅಮ್ಮನೋಬೈದರೆ ಅಷ್ಟಕ್ಕೇ ಮುನಿಸಿಕೊಳ್ಳುವುದು,ಇದ್ದಕ್ಕಿದ್ದಂತೆಯೇ ಸಿಟ್ಟಿಗೆದ್ದು ಮನೆಯಲ್ಲಿರುವ ವಸ್ತುಗಳನ್ನು ಎಸೆದುಬಿಡುವುದುಅಥವಾಕೈ- ಕಾಲಿಗೆ ತಾವೇ ಗಾಯಮಾಡಿಕೊಳ್ಳುವುದು ಹೀಗೆಲ್ಲಾ ಮಾಡಿಕೊಳ್ಳುತ್ತಾರೆ.ಆ ಮೂಲಕ ಹೆತ್ತವರಿಗೆದಿಗಿಲುಉಂಟಾಗುವಂತೆ ಮಾಡುತ್ತಾರೆ.

ಮಕ್ಕಳ ಮನಸ್ಸು ಸೂಕ್ಷ್ಮ. ತಮ್ಮ ಮನಸ್ಸಿಗೆ ಇಷ್ಟ ಆಗದಂಥ ಯಾವುದೇ ಕೆಲಸ/ಘಟನೆನಡೆದರೂಅವರು ತಮ್ಮದೇ ರೀತಿಯಲ್ಲಿಪ್ರತಿಭಟನೆ ಮಾಡುತ್ತಾರೆ.ಅದುಮುನಿಸಿನ ಮೂಲಕವೂಆಗಿರಬಹುದು. ಸಿಡಿಮಿಡಿಯ ರೂಪದಲ್ಲಾದರೂ ವ್ಯಕ್ತವಾಗಬಹುದು. ಇಂಥ ಸಂದರ್ಭದಲ್ಲಿ-ಅಯ್ಯೋ,ಮಕ್ಕಳು ಹೀಗೆಲ್ಲಾ ಎಗರಾಡೋದು ಸಹಜ. ನಾಲ್ಕೇಟುಕೊಟ್ಟರೆಅವರು ಸರಿಹೋಗುತ್ತಾರೆ ಎಂದೇಹೆಚ್ಚಿನ ಪೋಷಕರುಯೋಚಿಸುವು ದುಂಟು. ನೆನಪಿಡಿ:ಹೀಗೆ ಮಾಡಿದರೆ, ಮಕ್ಕಳು ಇನ್ನಷ್ಟು ರೊಚ್ಚಿ ಗೇಳಬಹುದು. ಮೊಂಡರಾಗಿ ಬದಲಾಗ ಬಹುದು. ಹಠಮಾರಿಗಳೂ ಆಗಿ ಬಿಡಬಹುದು. ಹೀಗೆ ಆಗದಂತೆ ಮಾಡಬೇಕೆಂದರೆ-ಮಕ್ಕಳನ್ನು ತಕ್ಷಣ ಮಾನಸಿಕ ಶಿಶು ತಜ್ಞರ ಬಳಿಗೆಕರೆದೊಯ್ಯಬೇಕು. ಅಲ್ಲಿ ಕೌನ್ಸೆಲಿಂಗ್‌ ಮಾಡಿಸಬೇಕು. ಪೋಷಕರ ಅನಾದರ, ಶಾಲೆಯಲ್ಲಿ ಜೊತೆಗಾರರ ಕಿರುಕುಳ, ಶಿಕ್ಷಕರ ಗದರಿಕೆ ಅಥವಾ ಮತ್ಯಾವುದೋ ತಪ್ಪು ತಿಳಿವಳಿಕೆಯಕಾರಣಕ್ಕೆ

ಮಕ್ಕಳು ಹೆದರಿರಬಹುದು. ಮಕ್ಕಳ ಮೌನಕ್ಕೆ, ಅಸಹನೆಗೆ, ಮುನಿಸಿಗೆ, ಸಿಡಿಮಿಡಿಗೆ ಕಾರಣವೇನು ಎಂಬುದುಕೌನ್ಸೆಲಿಂಗ್‌ ಸಂದರ್ಭದಲ್ಲಿ ಗೊತ್ತಾಗುತ್ತದೆ. ಮಕ್ಕಳು ಚಟುವಟಿಕೆಯಿಂದ ಇರಲುಏನು ಮಾಡಬೇಕು ಎಂಬುದನ್ನೂವೈದ್ಯರು ವಿವರವಾಗಿ ತಿಳಿಸುತ್ತಾರೆ.ಅವರ ಸಲಹೆಯನ್ನು ತಪ್ಪದೇ ಪಾಲಿಸಿದರೆ, ಮಕ್ಕಳು ಮಾನಸಿಕ ಸಮಸ್ಯೆಗಳಿಂದ ಮುಕ್ತರಾಗಲು ಸಾಧ್ಯವಾಗುತ್ತದೆ.

Advertisement

 

-ಡಾ. ರಮ್ಯಾ ಮೋಹನ್‌

Advertisement

Udayavani is now on Telegram. Click here to join our channel and stay updated with the latest news.

Next