Advertisement
ಕುಂಭಾಶಿಯ ಚಂಡಿಕಾ ಪರಮೇಶ್ವರಿ ದೇಗುಲದಲ್ಲಿ ಶರನ್ನವರಾತ್ರಿಯ ವಿಷೇಶ ಕಾರ್ಯಕ್ರಮವಾಗಿ ಯಶಸ್ವಿ ಕಲಾವೃಂದ ಕೊಮೆ, ತೆಕ್ಕಟ್ಟೆಯ ಪುಟಾಣಿಗಳು ಗುರು ಕೊಕೂರು ಸೀತಾರಾಮ ಶೆಟ್ಟಿಯವರ ನಿರ್ದೇಶನದಲ್ಲಿ ಹರಿದರ್ಶನ ಯಕ್ಷಗಾನ ಪ್ರದರ್ಶಿಸಿದರು.
Related Articles
Advertisement
ಬಳಿಕ ಮಡದಿ ಪ್ರಭಾವತಿಯಲ್ಲಿ ನಡೆಯೋಣವೆಂದರೆ ಗಂಧ, ಅಕ್ಷತೆ, ವೀಳ್ಯವನ್ನು ಹಿಡಿದು ಅಣ್ಣನಿಗೆ ಶುಭ ಹಾರೈಸುವುದಕ್ಕೆ ಇದಿರಾದವಳು ತಂಗಿ ಕುವಲೆ. 6 ವರ್ಷದ ಬಾಲಕಿ ಕು| ಪರಿಣಿತಾ ವೈದ್ಯ ಚುರುಕಾಗಿ ಅಭಿನಯಿಸಿ ಪ್ರಶಂಸೆಗೆ ಪಾತ್ರಳಾದರು.
ಸತಿ ಶಿರೋಮಣಿ ಪ್ರಭಾವತಿ ಪದ್ಯಕ್ಕೆ ರಂಗ ಪ್ರವೇಶ ಮಾಡಿದವರು ಕು| ಪೂಜಾ ಆಚಾರ್. ಮನೋಜ್ಞ ನೃತ್ಯದೊಂದಿಗೆ ಜನ ಮಾನಸದಲ್ಲಿ ಉಳಿದರು. ಮನೆಯಲ್ಲಿ ಉಳಿವ ಸತಿಗೆ ಜವಾಬ್ದಾರಿ ಎಷ್ಟು? ತಾನೆಷ್ಟು ಕರ್ತವ್ಯ ನಿರತಳು? ಹೆಣ್ಣಿಗೆ ಸ್ವರ್ಗ ಯಾವುದು? ಹೆಣ್ಣಾದವಳು ಹೇಗಿರಬೇಕು? ಇವೆಲ್ಲವನ್ನು ರಂಗದಲ್ಲಿ ತುಂಬಿಕೊಟ್ಟು ಪಾತ್ರದ ಪ್ರಬುದ್ಧತೆ ಮೆರೆದರು.
ಅರ್ಜುನನಾಗಿ ಮಾ| ಸಾತ್ಯಕಿ ಮಾತಿನ ಶೈಲಿ, ಕುಣಿತ, ರಂಗನಡೆ ಎಲ್ಲಾ ಕಡೆಯಲ್ಲಿಯೂ ಹದವರಿತು ವ್ಯವಹರಿಸಿದರು. ಸಂಗಡ ಒಡ್ಡೋಲಗಕ್ಕೆ ಪ್ರದ್ಯಮ್ನ-ವೃಷಕೇತುವಾಗಿ ನೆರವಾದವರು ಮಾ| ಹೃಷಿಕೇಶ, ಕು| ನಿಶಾ ಭಂಡಾರಿ ಮಲ್ಯಾಡಿ. ಅರ್ಜುನನ ಒಡ್ಡೋಲಗದಲ್ಲಿ ಮುಂಡಾಸು ವೇಷಧಾರಿಯಾಗಿ ಭರ್ಜರಿ ರಂಗದಲ್ಲಿ ಅಬ್ಬರದಿಂದ ಕಾಣಿಸಿಕೊಂಡರು.
ಸುಧನ್ವಾರ್ಜುನರಿಗೆ ಯುದ್ಧ. ಅರ್ಜುನ ಕೈ ಸೋತಾಗ ಸುಧನ್ವನಿಗೆ ಹರಿದರ್ಶನ. ತನ್ಮೂಲಕ ಚಂಪಕಾನಗರಕ್ಕೇ ಹರಿದರ್ಶನ. ಕು| ಪೂಜಾಳ ಬಂದ ತಕ್ಷಣದೊಳಲ್ಲಿಗೆ… ಪದ್ಯಕ್ಕೆ ಮಿಂಚಿನ ಪ್ರವೇಶ.
ಸುಧನ್ವನ ಮೋಕ್ಷ, ಹರಿದರ್ಶನ ಪ್ರಸಂಗ ಪ್ರದರ್ಶನದ ಯಶಸ್ಸಿಗೆ ಕಾರಣರಾದವರು ಭಾಗವತರು ಪ್ರಾಚಾರ್ಯ ಕೆ.ಪಿ. ಹೆಗಡೆ, ಲಂಬೋದರ ಹೆಗಡೆ. ಮದ್ದಲೆಯಲ್ಲಿ ಲೋಹಿತ್ ಕೊಮೆ, ಭರತ್‌ಚಂದನ್ ಕೋಟೇಶ್ವರ. ಚಂಡೆಯಲ್ಲಿ ಪ್ರಸಿದ್ಧ ಚಂಡೆ ವಾದಕ ಕೋಟ ಶಿವಾನಂದ.
ಪ್ರಶಾಂತ್ ಮಲ್ಯಾಡಿ