Advertisement
ಶಾಲಾ ಮಕ್ಕಳ ಫಿಕ್‌ನಿಕ್ ಹಂಗಾಮಾ ಈಗಾಗಲೇ ಶುರುವಾಗಿದ್ದು, ಇಲ್ಲಿನ ರವೀಂದ್ರನಾಥ್ ಕಡಲತೀರದ ಮೇಲಿನ ಪ್ರವಾಸಿ ತಾಣಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಅಗಾಧವಾದ ಅರಬ್ಬೀ ಸಮುದ್ರ ಸೌಂದರ್ಯದ ಜೊತೆಗೆ ರಾಕ್ ಗಾರ್ಡ್‌ನ್, ಸಾಗರ ಮತ್ಸ್ಯಾಲಯ, ಚಾಪೆಲ್ ಯುದ್ಧ ಸ್ಮಾರಕ ಹಡಗು, ಫುಡ್‌ಕೋರ್ಟ್ ಬಳಿಯ ಪುಟಾಣಿ ಆಟಿಕೆ, ಆಳ್ವಾ ಗಾರ್ಡ್‌ನ್, ಅದರ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನ ಹೀಗೆ ಎಲ್ಲವೂ ಹಿರಿಯ, ಕಿರಿಯ ಪ್ರವಾಸಿಗರಲ್ಲದೇ, ಫಿಕ್‌ನಿಕ್‌ಗೆ ಬರುವ ಪುಟಾಣಿ ಮಕ್ಕಳು ಇಷ್ಟಪಡುವ ತಾಣಗಳಾಗಿವೆ.
ತಾಣಗಳನ್ನು ನಿಗದಿಪಡಿಸಿದ ಸಮಯಕ್ಕೆ ಮಾತ್ರ ವೀಕ್ಷಣೆಗೆ ಅವಕಾಶವಿದೆ. ಶುಕ್ರವಾರ ಮಧ್ಯಾಹ್ನ ಫಿಕ್‌ನಿಕ್‌ಗೆ ಬಂದ ಮಕ್ಕಳು ಫುಡ್ ಕೋರ್ಟ್‌ನಲ್ಲಿರುವ ಪುಟಾಣಿ ಆಟಿಕೆ ಗಾರ್ಡ್ ನಲ್ಲಿ ಆಟ ಶುರು ಮಾಡಿದರು. ಮಕ್ಕಳಿಗೆ ಮಧ್ಯಾಹ್ನ ರಣ ಬಿಸಿಲಿನಲ್ಲಿ ಆಟವಾಡಲು ಸಾಧ್ಯವಾಗಲಿಲ್ಲ. ಇದನ್ನು ಅರಿತು ಶಿಕ್ಷಕಿಯರು ಮಕ್ಕಳನ್ನು ತಂಪು ವಾತಾವರಣ ಇರುವ ಆಳ್ವಾ ಗಾರ್ಡನ್ ಪಕ್ಕದಲ್ಲಿರುವ ಮಕ್ಕಳ ಉದ್ಯಾನವನದತ್ತ ಕರೆದುಕೊಂಡು ಹೋಗಬೇಕಾಯಿತು. ಮಕ್ಕಳ ಉದ್ಯಾನವನದ ಸುತ್ತಮುತ್ತ ಗಿಡಮರಗಳು ಹುಲುಸಾಗಿ ಬೆಳೆದಿರುವುದರಿಂದ ಉದ್ಯಾನವನದಲ್ಲಿ ಸಾಕಷ್ಟು ನೆರಳು ಬೀಳುತ್ತದೆ. ಇದರಿಂದ ನೆರಳಿನ ತಂಪಾದ ವಾತಾವರಣದಲ್ಲಿ ಮಕ್ಕಳಿಗೆ ಆಟವಾಡಲು ಅನುಕೂಲವಾಗುತ್ತದೆ. ಆದರೆ ಶುಕ್ರವಾರ ಇಲ್ಲಿ ಆಟವಾಡಲು ಉತ್ಸಾಹದಿಂದ ಬಂದ ಮಕ್ಕಳಿಗೆ ಹಾಗೂ ಶಿಕ್ಷಕಿಯರಿಗೆ ನಿರಾಸೆ ಉಂಟಾಯಿತು. ಕಾರಣ ಮಕ್ಕಳ ಉದ್ಯಾನವನದ ಮೂರೂ ಗೇಟ್‌ಗಳು ಬಂದ್ ಮಾಡಿದ್ದರಿಂದ ಆಟ ಆಡಲು ಸಾಧ್ಯವಾಗದೇ ಮಕ್ಕಳು ಆಟಿಕೆ ಸಾಮಾನುಗಳನ್ನು ಹೊರಗಡೆಯಿಂದಲೇ ನೋಡಿ ಕಣ್ತುಂಬಿಕೊಂಡರು.
Related Articles
Advertisement
ರಣಬಿಸಿಲಿನಲ್ಲಿ ಆಟವಾಡಲು ತೊಡಕು: ರವೀಂದ್ರನಾಥ ಟ್ಯಾಗೋರ್ ಬೀಚ್‌ಗೆ ಹೊಂದಿಕೊಂಡಂತೆ ಇರುವ ಆಳ್ವಾ ಗಾರ್ಡನ್ ಪಕ್ಕದಲ್ಲಿಯೇ ನಗರಸಭೆ ವೈವಿಧ್ಯಮಯ ಮಕ್ಕಳ ಆಟಿಕೆಗಳನ್ನು ಅಳವಡಿಸಿ ಮಕ್ಕಳ ಉದ್ಯಾನವನ ನಿರ್ಮಿಸಿತ್ತು. ಬಳಿಕ ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಫುಡ್ಕೋರ್ಟ್ಬಳಿ ಇನ್ನೊಂದು ಮಕ್ಕಳ ಆಟಿಕೆ ಗಾರ್ಡ್‌ನ್ ನಿರ್ಮಿಸಿದೆ. ಆದರೆ ಅದು ಮುಂಜಾನೆ ಅಥವಾ ಸಾಯಂಕಾಲ ಆಟ ಆಡಲು ಬರುವ ಮಕ್ಕಳಿಗೆ ಅನುಕೂಲಕರವಾಗಿದೆ. ಅದರ ಸುತ್ತಮುತ್ತ ಮರಗಿಡಗಳಿಲ್ಲದೇ, ಬೆಳಗ್ಗೆ 11ರ ನಂತರ ಹಾಗೂ ಮಧ್ಯಾಹ್ನದ ರಣ ಬಿಸಿಲಿನಲ್ಲಿ ಮಕ್ಕಳಿಗೆ ಆಟವಾಡಲು ಸಾಧ್ಯವಿಲ್ಲ. ಎಲ್ಲ ಆಟಿಕೆ ಸಾಮಾನುಗಳು ಬಿಸಿಲಿನಿಂದ ಕಾದಿರುತ್ತವೆ. ಇದರಿಂದ ಮಕ್ಕಳಿಗೆ ಕಷ್ಟವಾಗುತ್ತದೆ ಎಂದು ಸ್ಥಳೀಯ ಆನಂದ್ ಬಿ. ತಿಳಿಸುತ್ತಾರೆ. ಪ್ರವಾಸಿಗರು ಹೆಚ್ಚು ಬರುವ ದಿನಗಳು ಇವಾಗಿದ್ದು, ಆ ನಿಮಿತ್ತ ಮಕ್ಕಳ ಉದ್ಯಾನವನದ ಗೇಟ್‌ಗಳು ಪ್ರತಿ ದಿನವೂ ತೆರೆದಿಡಲಾಗುತ್ತದೆ. ಶುಕ್ರವಾರ ಕೂಡ ತೆರೆದಿಡಲು ಸೂಚಿಸಿದ್ದೆ. ಆದರೂ ಬಂದ್ ಮಾಡಲಾಗಿದ್ದರೆ, ಈ ಬಗ್ಗೆ ವಿಚಾರಿಸಲಾಗುವುದು.
ಎಸ್.ಯೋಗೇಶ್ವರ್, ಪೌರಾಯುಕ್ತರು, ನಗರಸಭೆ ಕಾರವಾರ.