ಮುಂಬಯಿ, ಆ. 30: ಯುವ ಜನಾಂಗದಲ್ಲಿ ಧಾರ್ಮಿಕ ಚಿಂತನೆ ಮೂಡಿಸುವುದರೊಂದಿಗೆ ಮಕ್ಕಳ ಪ್ರತಿಭೆಯನ್ನು ಅನಾವರಣಗೊಳಿಸುವ ಮಲಾಡ್ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ ಕಾರ್ಯಶ್ಲಾಘನೀಯ. ಯುವ ಸಮುದಾಯಕ್ಕೆ ಇಂತಹ ವೇದಿಕೆಯನ್ನು ಮುಂದೆಯೂ ಈ ಸಮಿತಿ ಕಲ್ಪಿಸಿ ಕೊಡುವಂತಾಗಲಿ ಎಂದು ನಟ, ನಿರ್ದೇಶಕ ಲತೇಶ್ ಮೋಹನ್ ಪೂಜಾರಿ ನುಡಿದರು.
ಆ. 18ರಂದು ಮಲಾಡ್ ಪೂರ್ವದ ಬಚ್ಚಾನಿ ನಗರ ಚಿಲ್ಡ್ರನ್ಸ್‌ಅಕಾಡೆಮಿಯ ಸಭಾಗೃಹದಲ್ಲಿ ಮಲಾಡ್‌ನ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯ 10ನೇ ವಾರ್ಷಿಕ ಸಾಮೂಹಿಕ ವರಮಹಾಲಕ್ಷ್ಮೀ ಪೂಜೆಯಂದು ನಡೆದ ಮಕ್ಕಳ್ಳೋತ್ಸವ ಕಾರ್ಯಕ್ರಮದಲ್ಲಿ ಮೂವರು ಪ್ರತಿಭಾವಂತ ಮಕ್ಕಳನ್ನು ಸಮ್ಮಾನಿಸಿ ಮಾತನಾಡಿ ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿ ಮಲಾಡ್ ಆಚಾರ್ಯ ದಂತ ಕ್ಲಿನಿಕ್‌ನ ಡಾ| ಶಶಿನ್ ಕೆ. ಆಚಾರ್ಯ ಉಪಸ್ಥಿತರಿದ್ದು ಮಾತನಾಡಿ, ತಂದೆ ತಾಯಿಯ ಸಾಮಾಜಿಕ ಸೇವೆಯು ನನಗೂ ಸ್ಪೂರ್ತಿ ತಂದಿದೆ ಎಂದರು. ಇನ್ನೋರ್ವ ಮುಖ್ಯ ಅತಿಥಿ ಫೇಸ್ ಆಪ್ ತುಳುನಾಡು 2019 ಮೇಘಾ ಜೆ. ಶೆಟ್ಟಿ ಮಾತನಾಡಿ, ಧಾರ್ಮಿಕ ಕಾರ್ಯದೊಂದಿಗೆ ಯುವ ಜನಾಂಗದ ಪ್ರತಿಭೆಯನ್ನು ಪ್ರೊತ್ಸಾಹಿಸುವ ಈ ಸಮಿತಿಗೆ ಅಭಿನಂದನೆ ಸಲ್ಲಿಸಿದರು.
ಅತಿಥಿಯಾಗಿ ಉಪಸ್ಥಿತರಿದ್ದ ಮೀರಾರೋಡ್‌ನ ನೃತ್ಯ ಕಲಾವಿದೆ ಸಾಕ್ಷಿ ಪಿ. ಶೆಟ್ಟಿ ಮಾತನಾಡಿ, ಇಂದಿಲ್ಲಿ ಅತಿಥಿಯಾಗಿ ಆಗಮಿಸಿದ್ದು ನನ್ನ ಮುಂದಿನ ಸಾಧನೆಗೆ ಪೂರಕವಾಗಿದೆ ಎಂದರು. ಶನಿಮಹಾತ್ಮಾ ಪೂಜಾ ಸಮಿತಿ ಕುರಾರ್ ಇದರ ಅಧ್ಯಕ್ಷ ಶ್ರೀನಿವಾಸ ಸಾಫಲ್ಯರ ಪುತ್ರಿ ದಿವ್ಯಾ ಎಸ್. ಸಾಫಲ್ಯ ಅತಿಥಿಯಾಗಿ ಆಗಮಿಸಿದ್ದು, ಪ್ರತಿಭೆಗಳು ಅನಾವರಣಗೊಳ್ಳುವಾಗ ಸೋಲುಂಡರೂ ಪ್ರಯತ್ನಶೀಲರಾಗಿರ ಬೇಕು ಎಂದರು.
ವೇದಿಕೆಯಲ್ಲಿ ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ, ಸಂಚಾಲಕಿ ಪ್ರಣಿತಾ ವಿ. ಶೆಟ್ಟಿ, ಉಪ ಕಾರ್ಯಾಧ್ಯಕ್ಷರಾದ ದಿವ್ಯಾ ಪೂಜಾರಿ, ಸುದೀಪ್ ಪೂಜಾರಿ, ನವೀನ್ ಸಾಲ್ಯಾನ್ ಉಪಸ್ಥಿತರಿದ್ದರು. ಯುವ ಸಾಧಕರಾದ ಪ್ರಿಯಾ ಪೂಜಾರಿ, ವಿಕ್ರಮ್ ಪಾಟ್ಕರ್‌ಮತ್ತು ಸೂರಜ್ ಮೊಗವೀರ ಇವರನ್ನು ಸಮ್ಮಾನಿಸಲಾಯಿತು. ಸಮ್ಮಾನಿರನ್ನು ದೀಕ್ಷಾ ಕರ್ಕೇರ, ಪೂರ್ಣಿಕಾ ಸಾಲ್ವಣ್ಕರ್ ಮತ್ತು ಶಿವಾನಿ ಪ್ರಭು ಪರಿಚಯಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಯುವ ವಿಭಾಗದ ಕಾರ್ಯಾಧ್ಯಕ್ಷೆ ರಶ್ಮಿ ಪೂಜಾರಿ ಮಾತನಾಡಿ, ಪೂಜಾ ಸಮಿತಿಯು ಯುವ ವಿಭಾಗವನ್ನು ಸ್ಥಾಪಿಸಿ ನಮಗೆ ಅವಕಾಶ ನೀಡಿದ್ದು ಮುಂದೆ ಅಧಿಕ ಸಂಖ್ಯೆಯಲ್ಲಿ ಯುವ ಸದಸ್ಯರನ್ನು ಸೇರಿಸಲಿದ್ದೇವೆ ಎಂದರು.
ಕಾರ್ಯಕ್ರಮವನ್ನು ಯುವ ವಿಭಾಗದ ಕಾರ್ಯದರ್ಶಿ ಸೌಮ್ಯಾ ಮೆಂಡನ್ ಮತ್ತು ಶ್ವೇತಾ ಪೂಜಾರಿ ನಿರ್ವಹಿಸಿದರು. ದಿವ್ಯಾ ಪೂಜಾರಿ ಸ್ವಾಗತಿಸಿದರು. ಅತಿಥಿಗಳನ್ನು ಲಾಸ್ಯಾ ಡಿ. ಕುಲಾಲ್, ವಿನೀತ್ ಪೂಜಾರಿ, ದರ್ಶನ್ ಪೂಜಾರಿ, ಪ್ರತೀಕ್ ಜೆ. ಶೆಟ್ಟಿ, ಆದಿತ್ಯ ಉಮೇಶ್ ಅಂಚನ್ ಮೊದಲಾದವರು ಗೌರವಿಸಿದರು.
ಚಿತ್ರ-ವರದಿ: ಈಶ್ವರ್ ಐಲ್