Advertisement

ಚಿಣ್ಣರ ಮೇಳದಲ್ಲಿ ಮಕ್ಕಳದ್ದೇ ಸಂತೆ

02:21 PM May 06, 2019 | Suhan S |

ಧಾರವಾಡ: ಇಲ್ಲಿಯ ರಂಗಾಯಣ ಆವರಣದಲ್ಲಿ ನಡೆದಿರುವ ಚಿಣ್ಣರ ಮೇಳದಲ್ಲಿ ರವಿವಾರ ಮಕ್ಕಳ ಜಾತ್ರೆ ಹಾಗೂ ಮಕ್ಕಳ ಸಂತೆ ಜರುಗಿತು.

Advertisement

ಪರಿಸರ ತೇರನ್ನು ಮಕ್ಕಳಿಂದ ಎಳೆಯುವ ಮೂಲಕ ಮಕ್ಕಳ ಜಾತ್ರೆ ಹಾಗೂ ಸಂತೆಗೆ ಚಾಲನೆ ನೀಡಲಾಯಿತು. ಇದರಲ್ಲಿ ಜಗ್ಗಲಗಿ, ಡೊಳ್ಳು ಕುಣಿತ ಕಲಾ ತಂಡಗಳು ಪಾಲ್ಗೊಂಡು ಕಳೆ ಕಟ್ಟಿದವು. ಮಕ್ಕಳ ಪಾಲಕರು ಪಾಲ್ಗೊಂಡು ಪರಿಸರ ತೇರು ಎಳೆಯುವುದನ್ನು ನೋಡಿ ಸಂಭ್ರಮಿಸಿದರು.

ಚಿಣ್ಣರ ಮೇಳದ ಮಕ್ಕಳ ಸಂತೆಯಲ್ಲಿ ಮಕ್ಕಳು ತಮ್ಮ ತೋಟದಲ್ಲಿ ಬೆಳೆದ ಹಣ್ಣು-ಹಂಪಲು ಹಾಗೂ ಮನೆಯಲ್ಲಿ ಸಿದ್ಧಪಡಿಸಿದ ವಿವಿಧ ಬಗೆಯ ತಿಂಡಿ-ತಿನಿಸು, ಮನೆಯಲ್ಲಿ ಸಿದ್ಧಪಡಿಸಿದ ತಂಪು ಪಾನೀಯಗಳು ತಂದು ಉತ್ಸಾಹದಿಂದ ಪಾಲ್ಗೊಂಡಿದ್ದರು.

ಚಿಣ್ಣರ ಸಂತೆಯಲ್ಲಿ ರಂಗಾಯಣದ ರೆಪರ್ಟರಿ ಕಲಾವಿದರು ವಿವಿಧ ಪಾತ್ರಗಳಾದ ಭಿಕ್ಷುಕ, ಕಣಿ ಹೇಳುವುವರು, ಜೋಗಮ್ಮನ ವೇಷದವರು, ಬುಡಬುಡಿಕೆ, ಹುಲಿ ವೇಷ‌, ಪೊಲೀಸ್‌, ಕಳ್ಳ ಮುಂತಾದ ವೇಷಗಳನ್ನು ಧರಿಸಿ ಗ್ರಾಮೀಣ ಸಂತೆಯಲ್ಲಿ ಈ ತರಹದ ಪಾತ್ರಗಳು ಇರುವುದನ್ನು ಮಕ್ಕಳಿಗೆ ಪರಿಚಯಿಸಿದರು.

Advertisement

ಡಿಸಿ ದೀಪಾ ಚೋಳನ್‌, ಬಿಆರ್‌ಟಿಎಸ್‌ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್‌ ಪಾಲ್ಗೊಂಡು ವೀಕ್ಷಿಸಿದ್ದು ವಿಶೇಷವಾಗಿತ್ತು. ಶಿಬಿರ ಸಂಚಾಲಕ ಉಮೇಶ ಪಾಟೀಲ ಮತ್ತು ಕಲಾವಿದರು, ರಂಗಾಯಣದ ಆಡಳಿತಾಧಿಕಾರಿಕೆ.ಎಚ್.ಚನ್ನೂರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next