ಮೈಸೂರು: ನಾಗನವ ಕಲಾ ಸಾಹಿತ್ಯ ವೇದಿಕೆ ಹಾಗೂ ಹಿರಣ್ಮಯಿ ಪ್ರತಿಷ್ಠಾನ 1 ರಿಂದ 7ನೇ ತರಗತಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ಪ್ರಕೃತಿ-ಪರಿಸರ ಕುರಿತ ಮಹತ್ವ ಸಾರಿದರು.
ಮೈಸೂರು ಸೇರಿದಂತೆ ಹೊಳೆನರಸೀಪುರ, ಅರಸೀಕೆರೆ, ನಂಜನಗೂಡು ಹಾಗೂ ಸುತ್ತಮುತ್ತಲಿನ ವಿವಿಧ ಶಾಲೆಗಳಿಂದ ಸುಮಾರು 50 ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.1 ರಿಂದ 4ನೇ ತರಗತಿ ಹಾಗೂ 5ರಿಂದ 7ನೇ ತರಗತಿ ಮಕ್ಕಳ 2 ವಿಭಾಗಗಳಲ್ಲಿ ಸ್ಪರ್ಧೆ ಏರ್ಪಡಿಸಲಾಗಿತ್ತು.
5 ರಿಂದ 7ನೇ ತರಗತಿ ಮಕ್ಕಳಿಗೆ ಪರಿಸರ ಅಥವಾ ಪ್ರಕೃತಿ ಕುರಿತು ಚಿತ್ರ ಬರೆಯುವ ವಿಷಯ ನೀಡಲಾಗಿತ್ತು.1 ರಿಂದ 4ನೇ ತರಗತಿ ಮಕ್ಕಳಿಗೆ ಇಚ್ಛಾನುಸಾರ ಚಿತ್ರ ಬರೆಯುವಂತೆ ಹೇಳಲಾಗಿತ್ತಾದರೂ ಬಹುತೇಕ ವಿದ್ಯಾರ್ಥಿಗಳು ಪರಿಸರ-ಪ್ರಕೃತಿ ಕುರಿತು ಚಿತ್ರ ಬಿಡಿಸಿ ತೀರ್ಪುಗಾರರನ್ನು ನಿಬ್ಬೆರಗಾಗಿಸಿದರು.
ವಿಜೇತರು: 1 ರಿಂದ 4ನೇ ತರಗತಿ ವಿಭಾಗದಲ್ಲಿ 4ನೇ ತರಗತಿಯ ಯಶಸ್ ಪಿ.(ಪ್ರಥಮ), 4ನೇ ತರಗತಿಯ ಮಯಾಂಕ್ ಆರ್. ವಸಿಷ್ಠ (ದ್ವಿತೀಯ), 3ನೇ ತರಗತಿಯ ವಿಶೃತ್‌ಎಸ್.ಡಿ. (ತೃತೀಯ) ಬಹುಮಾನ ಪಡೆದರೆ, ಮೂರನೇ ತರಗತಿಯ ಪ್ರತೀûಾ ಎಸ್.ಜೆ. ಹಾಗೂ ಆರ್ಯನ್ ಸಮಾಧಾನ ಬಹುಮಾನ ಪಡೆದರು.
5ರಿಂದ 7ನೇ ತರಗತಿ ವಿಭಾಗದಲ್ಲಿ 6ನೇ ತರಗತಿಯ ನಿಶಾಂತ್ ಎಸ್. (ಪ್ರಥಮ), 5ನೇ ತರಗತಿಯ ನಿಯುಕ್ತ ಆರ್.(ದ್ವಿತೀಯ), 6ನೇ ತರಗತಿಯ ಮಯೂರ್ ಪ್ರಥಮ್ (ತೃತೀಯ) ಸ್ಥಾನ ಗಳಿಸಿದರೆ, 6ನೇ ತರಗತಿಯ ಅಫೀಫ, 5ನೇ ತರಗತಿಯ ಕಸ್ತೂರಿ ಸಮಾಧಾನಕರ ಬಹುಮಾನ ಪಡೆದರು. ಸ್ಫರ್ಧೆಯಲ್ಲಿ ಭಾಗವಹಿಸಿದ್ದ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ, ಉಡುಗೊರೆ ನೀಡಲಾಯಿತು.
ಲೇಖಕ ಬನ್ನೂರು ಕೆ.ರಾಜು ಕಾರ್ಯಕ್ರಮ ಉದ್ಘಾಟಿಸಿದರು. ಭಗಿನೀ ಸೇವಾ ಸಮಾಜ ಶಾಲೆಯ ಆಡಳಿತಾಧಿಕಾರಿ ನಾಗಭೂಷಣ್, ಹಿರಣ್ಮಯಿ ಪ್ರತಿಷ್ಠಾನದ ಎ.ಸಂಗಪ್ಪ, ವೇದಿಕೆಯ ಅಧ್ಯಕ್ಷ ಹೊಮ್ಮ ಮಂಜುನಾಥ್, ಪದಾಧಿಕಾರಿಗಳಾದ ರಾಜೇಶ್ವರಿ ಕೊತ್ತಲವಾಡಿ, ಎಸ್.ನಾಗರತ್ನ, ದಿಲೀಪ್ ಸಾಳಂಕೆ ಸರಸ್ವತಿ, ವೆಂಕಟನಾರಾಯಣ್, ಎ.ಎಸ್.ಶಶಿಧರ್ ಇತರರಿದ್ದರು.