Advertisement
ತಾಲೂಕಿನ ಹನಗೋಡು ಹೋಬಳಿಯ ಹೆಬ್ಬಾಳ ಗಿರಿಜನ ಪುರ್ನವಸತಿ ಕೇಂದ್ರದಲ್ಲಿ ಶನಿವಾರದಂದು ಪೊಲೀಸ್ ಇಲಾಖೆ ಆಯೋಜಿಸಿದ್ದ ಆದಿವಾಸಿ ಹಾಗೂ ಬುಡಕಟ್ಟು ಜನರಿಗಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಗಾರ ಉದ್ಘಾಟಿಸಿ ಮಾತನಾಡಿದ ಅವರು ಆದಿವಾಸಿ ಹಾಗೂ ಬುಡಕಟ್ಟು ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಸವಲತ್ತುಗಳನ್ನು ನೀಡಿ, ನಿಮ್ಮನ್ನು ಮುಖ್ಯವಾಹಿನಿ ತರಲು ಶ್ರಮಿಸುತ್ತಿದೆ. ಶೈಕ್ಷಣಿಕ ಪ್ರಗತಿಗೆ ವಸತಿ ಶಾಲೆ ಆರಂಭಿಸಿ ಉಚಿತ ಶಿಕ್ಷಣದೊಂದಿಗೆ ಎಲ್ಲ ಸೌಲಭ್ಯ ಕಲ್ಪಿಸಿದೆ. ಹೀಗಾಗಿ ಮಕ್ಕಳನ್ನು ಕೂಲಿಗೆ ಕರೆದೊಯ್ಯದೆ ವಸತಿ ಶಾಲೆಗಳಲ್ಲಿ ಶಿಕ್ಷಣ ಕೊಡಿಸಿ. ಉನ್ನತ ಶಿಕ್ಷಣಕ್ಕೂ ಸಾಕಷ್ಟು ನೆರವಿದ್ದು, ಬಳಸಿಕೊಳ್ಳಿ, ಅಗತ್ಯ ಉಳ್ಳವರಿಗೆ ತಾವು ಸಹ ಇತತರಿಂದ ನೆರವು ಕೊಡಿಸುವುದಾಗಿ ಭರವಸೆ ಇತ್ತರು.
Related Articles
Advertisement
ಸಿಡಿಪಿಒ ರಶ್ಮಿ, ಅರಣ್ಯ ಇಲಾಖೆಯ ಪುನರ್ವಸತಿ ಸಮಿತಿಯ ಆರ್‌ಎಫ್‌ಒ ರಶ್ಮಿ, ಪರಿಶಿಷ್ಟ ವರ್ಗಗಳ ಇಲಾಖೆಯ ವಿಸ್ತಿರಣಾಧಿಕಾರಿ ಶಂಕರ್, ಹನಗೋಡು ಉಪತಹಶೀಲ್ದಾರ್ ಚಲುವರಾಜ್ ತಮ್ಮ ಇಲಾಖೆಗಳಲ್ಲಿ ಸಿಗುವ ಸೌಲಭ್ಯ ಹಾಗೂ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಪುರ್ನವಸತಿ ಕೇಂದ್ರದ ಅಧ್ಯಕ್ಷ ಚಂದ್ರು ಮಾತನಾಡಿ ಶೆಟ್ಟಹಳ್ಳಿ ಹಾಗೂ ಹೆಬ್ಬಾಳ ಗಿರಿಜನ ಪುರ್ನವಸತಿ ಕೇಂದ್ರದಲ್ಲಿರುವ ಸಮಸ್ಯೆಗಳ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಕೂಡಲೇ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಡಬ್ಯೂಸಿಎಸ್ ಸಂಸ್ಥೆಯ ವಿನೋದ್, ಶೆಟ್ಟಹಳ್ಳಿ ಪುನರ್ವಸತಿ ಕೇಂದ್ರದ ಆಧ್ಯಕ್ಷ ಶಂಕರ್, ಗಿರಿಜನ ಮುಖಂಡರಾದ ಪುಟ್ಟಸ್ವಾಮಿ, ಲಿಂಗಯ್ಯ, ಕೆ.ಸ್ವಾಮಿ, ಮಹೇಶ್, ಸೇರಿದಂತೆ ಗ್ರಾಮಸ್ಥರು ಹಾಗೂ ಪೋಲಿಸ್ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದ್ದರು.