Advertisement

ಮಕ್ಕಳ ನಾಟಕೋತ್ಸವ : ಜಿ.ಪಂ. ಸಿಇಒ ಕೆ.ಲಕ್ಷ್ಮೀಪ್ರಿಯ ಚಾಲನೆ

01:00 AM Mar 06, 2019 | Harsha Rao |

ಮಡಿಕೇರಿ : ವಿದ್ಯಾರ್ಥಿಗಳು ಬಾಲ್ಯದಿಂದಲೇ ನಾಟಕ, ಸಂಗೀತ ಮತ್ತಿತರ ಕಲೆಗಳನ್ನು ರೂಢಿಸಿ ಕೊಳ್ಳುವಂತಾಗಬೇಕು. ಇದರಿಂದ ಪ್ರಬುದ್ಧತೆ ಮತ್ತು ಆತ್ಮವಿಶ್ವಾಸ ಹೆಚ್ಚಾಗುತ್ತದೆ ಎಂದು ಜಿ.ಪಂ.ಸಿಇಒ ಕೆ.ಲಕ್ಷ್ಮೀಪ್ರಿಯ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

Advertisement

ಬಾಲಭವನ ಸೊಸೈಟಿ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ನಗರದ ಎಫ್ಎಂಸಿ ಕಾಲೇಜು ಆವರಣದಲ್ಲಿ ಏರ್ಪಡಿಸಿದ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ವಿದ್ಯಾರ್ಥಿಗಳು ಕಾಲೇಜಿನ ವಿದ್ಯಾ ಭ್ಯಾಸದ ಜತೆಗೆ ಸಾಮಾಜಿಕ ಜವಾಬ್ದಾರಿ, ಸಾಹಿತ್ಯ, ನಾಟಕ ಅಭಿರುಚಿಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ನಾಟಕ ಕಲಾ ವೇದಿಕೆಯನ್ನು ಕಾಲೇಜುಗಳಲ್ಲಿ ನಡೆಸುವುದರ ಮೂಲಕ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಅವಕಾಶಗಳು ಪೂರಕವಾಗಿರುತ್ತವೆೆ ಎಂದು ಸಿ.ಇ.ಒ ಕೆ.ಲಕ್ಷ್ಮೀಪ್ರಿಯ ಅಭಿಪ್ರಾಯ ವ್ಯಕ್ತಪಡಿಸಿದರು. 

ವಿದ್ಯಾರ್ಥಿಗಳು ದೇಶದ ಸಂಪತ್ತು. ಉತ್ತಮವಾದ ಶಿಕ್ಷಣದೊಂದಿಗೆ ಕಲಾ ಅಭಿರುಚಿ ನೀಡುವುದು ಪ್ರೋತ್ಸಾಹಿಸುವುದು ಶಿಕ್ಷಕರ ಮತ್ತು ಪೋಷಕರ ಜವಾಬ್ದಾರಿಯಾಗಿದೆ ಎಂದರು. 

ಮತದಾನದ ಮಹತ್ವವನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಬೇಕು. ವಿದ್ಯಾರ್ಥಿಗಳು ಕೂಡ ತಪ್ಪದೆ ಮತದಾನ ಮಾಡುವುದನ್ನು ನಿರ್ಲಕ್ಷ್ಯ ಮಾಡಬಾರದು ಎಂದರು. 

Advertisement

ನಗರಸಭೆ ಅಧ್ಯಕ್ಷರು ಕಾವೇರಮ್ಮ ಸೋಮಣ್ಣ ಅವರು ಮಾತನಾಡಿ ವಿದ್ಯಾರ್ಥಿಗಳು ಇಂದು ವಿಶೇಷವಾದ ಕಲೆಗಳ ಆಗರವಾಗಿರುತ್ತಾರೆ ಎಂದರು.            

ವಿದ್ಯೆಯ ಜತೆಗೆ ನಾಟಕ ಕಲಾಭಿ ರುಚಿಯನ್ನು ಬೆಳೆಸಿಕೊಳ್ಳಬೇಕು ಇಂತಹ ಅವಕಾಶಗಳನ್ನು ಕಳೆದು ಕೊಳ್ಳಬಾರದು ಎಂದು ಆಶಯ ವ್ಯಕ್ತಪಡಿಸಿದರು. ಪರೀûಾ ಸಮಯದಲ್ಲಿ ವಿದ್ಯಾರ್ಥಿಗಳು ಕಾಲಹರಣ ಮಾಡಬಾರದು ವಿದ್ಯಾ ಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ತಿಳಿಸಿದರು. 

ಬಸವನಹಳ್ಳಿ ಗಿರಿಜನ ಅಶ್ರಮ ಶಾಲೆ ಮಕ್ಕಳಿಂದ ಸುನೀಲ ಅವರ ನಿರ್ದೇಶನದ ಹೆಬ್ಟಾಲ ನಾಟಕದ ರಂಗ ಪ್ರದರ್ಶನ ನಡೆಯಿತು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ, ಕಾರ್ಯಕ್ರಮ ಅಧಿಕಾರಿ ಮುಮ್ತಾಜ್‌, ಎಫ್ಎಂಸಿ ಕಾಲೇಜಿನ ಪ್ರಾಂಶುಪಾಲರು ಟಿ.ಡಿ. ತಿಮ್ಮಯ್ಯ, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು, ಅಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next