Advertisement

14ರ ಒಳಗಿನ ಮಕ್ಕಳನ್ನು ದುಡಿಸಿದರೆ ಜೈಲು

01:38 AM Jan 09, 2020 | Team Udayavani |

ಮಂಗಳೂರು: ಕಾಯ್ದೆ-1986ರ ಪ್ರಕಾರ 14 ವರ್ಷದ ಒಳಗಿನ ಮಕ್ಕಳನ್ನು ಯಾವುದೇ ಕ್ಷೇತ್ರದಲ್ಲಿ ನೇಮಿಸಿಕೊಳ್ಳುವುದನ್ನು ಹಾಗೂ 15ರಿಂದ 18 ವರ್ಷದೊಳಗಿನ ಯಾವುದೇ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸಿಕೊಳ್ಳುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಶಿಕ್ಷಾರ್ಹ ಮತ್ತು ಸಂಜ್ಞೆಯ (ವಾರಂಟ್‌ ರಹಿತ) ಬಂಧಿಸಬಹುದಾದ ಅಪರಾಧವಾಗಿದೆ ಎಂದು ಜಿಲ್ಲಾ ಡಳಿತ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಎಚ್ಚರಿಸಿದೆ.

Advertisement

ಕಿಶೋರಾವಸ್ಥೆಯ ಕಾರ್ಮಿಕನನ್ನು ದಿನದ ಸೂಕ್ತ ವೇಳೆಯಲ್ಲಿ 6 ಗಂಟೆಗಳಿಗೂ ಮೀರಿ ದುಡಿಸಿಕೊಳ್ಳುವಂತಿಲ್ಲ, ಕಿಶೋರಾ ವಸ್ಥೆಯ ಕಾರ್ಮಿಕನನ್ನು ರಾತ್ರಿ 7 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ದುಡಿಸಿಕೊಳ್ಳುವಂತಿಲ್ಲ.

ನಿಬಂಧನೆಗಳನ್ನು ಉಲ್ಲಂಘಿಸಿದ ತಪ್ಪಿತಸ್ಥ ಮಾಲಕರಿಗೆ 50 ಸಾವಿರ ರೂ. ದಂಡ ಮತ್ತು 2 ವರ್ಷದವರೆಗೆ ಜೈಲು ಶಿಕ್ಷೆಯೊಂದಿಗೆ ರೂ. 20 ಸಾವಿರ ರೂ. ಕಾರ್ಪಸ್‌ ನಿಧಿ ಪಾವತಿಸಬೇಕಾಗುತ್ತದೆ. ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳು ಕಂಡುಬಂದಲ್ಲಿ ಮಕ್ಕಳ ಉಚಿತ ಸಹಾಯವಾಣಿ -1098 ಅಥವಾ 0824-2433131ಕ್ಕೆ ಕರೆ ಮಾಡಿಬಹುದು.

Advertisement

Udayavani is now on Telegram. Click here to join our channel and stay updated with the latest news.

Next