Advertisement
ಮನೆಯಿಂದ ಹೊರದಬ್ಬಲ್ಪಟ್ಟು ಗಾಯಗೊಂಡಿರುವ ಕೆದಿಲ ಗ್ರಾಮದ ಬೀಟಿಗೆ ಆರ್.ಕೆ. ಮಂಝಿಲ್ ನಿವಾಸಿ ಮಹಮ್ಮದ್ (75) ಮತ್ತು ಅವರ ಪತ್ನಿ ಖತೀಜಮ್ಮ (72) ಅವರು ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ¨ªಾರೆ.
ಬೀಟಿಗೆಯ 22 ಸೆಂಟ್ಸ್ ಜಾಗದಲ್ಲಿ ಮಹಮ್ಮದ್ ದಂಪತಿ ವಾಸವಿದ್ದಾರೆ. ಅವರಿಗೆ ನಾಲ್ವರು ಪುತ್ರರು ಮತ್ತು ಐವರು ಪುತ್ರಿಯರು. ಇವರ 2ನೇ ಪುತ್ರ ಇಸ್ಮಾಯಿಲ್ ಕಾರ್ಯನಿಮಿತ್ತ ಹೊರಗೆ ಹೋಗಿದ್ದರು. ಈ ಸಂದರ್ಭದಲ್ಲಿ ದಂಪತಿಯ 3ನೇ ಪುತ್ರ, ಬುಡೋಳಿಯಲ್ಲಿರುವ ತಾಜುದ್ದೀನ್, ಆತನ ಪತ್ನಿ ಯಾಸೀರಾ, 4ನೇ ಪುತ್ರ ಕಬಕ ನಿವಾಸಿ ಸಂಶುದ್ದೀನ್, ಆತನ ಪತ್ನಿ ಫಾತಿಮಾ, ವೃದ್ಧ ದಂಪತಿಯ ಪುತ್ರಿ ಐಸಮ್ಮ ಮತ್ತು ಆಕೆಯ ಗಂಡ ಮಹಮ್ಮದ್ ಹಾಗೂ ಪುತ್ರ ಹಾರಿಸ್ ಅವರು 2 ಕಾರು ಮತ್ತು ಬೈಕ್‌ನಲ್ಲಿ ಏಕಾಏಕಿ ಬಂದು ಹಿಟಾಚಿಯಿಂದ ಮನೆಯನ್ನು ಕೆಡವಲು ಮುಂದಾದರು. ಆಗ ಮನೆಯಲ್ಲಿದ್ದ ವೃದ್ಧರನ್ನು ಬಲವಂತವಾಗಿ ಹೊರಗೆ ದಬ್ಬಿದರು. ಕೂಡಲೇ ವೃದ್ಧ ಮಹಮ್ಮದ್ ಅವರು ಘಟನೆ ಕುರಿತು ಪುತ್ರ ಇಸ್ಮಾಯಿಲ್‌ಗೆ ತಿಳಿಸಿದರು. ಬಳಿಕ ಪೊಲೀಸರು ಸ್ಥಳಕ್ಕೆ ಬಂದು ಹಿಟಾಚಿ ಕೆಲಸವನ್ನು ನಿಲ್ಲಿಸಿ¨ªಾರೆ. ಜಾಗದ ವಿಚಾರಕ್ಕೆ ಸಂಬಂಧಿಸಿ ಒಡಹುಟ್ಟಿದವರು ಈ ರೀತಿ ಮಾಡಿªಾರೆಂದು ದಂಪತಿಯ ಪುತ್ರ ಇಸ್ಮಾಯಿಲ್ ಆರೋಪಿಸಿ¨ªಾರೆ.